Thursday, September 11, 2014

ಮಲ್ಲಾಡಿಹಳ್ಳಿಯ ‘ತಿರುಕ’ ರಾಘವೇಂದ್ರ ಸ್ವಾಮೀಜಿ

ಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಮಲ್ಲಾಡಿಹಳ್ಳಿ ಸ್ವಾಮಿಗಳೆಂದೇ ಖ್ಯಾತನಾಮರು.  ತಿರುಕ’ ಇವರ ಕಾವ್ಯನಾಮ.  ಸದಾ ಶ್ವೇತವಸ್ತ್ರಧಾರಿಗಳಾಗಿಹಸನ್ಮುಖರಾಗಿದ್ದವರು.  ಎಲ್ಲರಿಗೂ ಯೋಗವನ್ನು ಹೇಳಿಕೊಟ್ಟು ಅವರ ರೋಗಗಳನ್ನು ನಿವಾರಿಸಿದರು.  ಒಂದು ವಾಸ್ತವ ಸಂಗತಿಯೆಂದರೆ ತಮ್ಮನ್ನು ಕಾಡುತ್ತಿದ್ದ ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ಇವರು ಯೋಗಕ್ಕೆ ಮೊರೆಹೋದರು.  ನಿರಂತರ ಯೋಗಾಭ್ಯಾಸದಿಂದಾಗಿ ಅವರ ಅನೇಕ ಕಾಯಿಲೆಗಳು ದೂರವಾದವು.  ಅವರ ಶಿಸ್ತುಬದ್ಧ ಯೋಗಾಸನಗಳೇ ಅವರ ಆರೋಗ್ಯದ ಗುಟ್ಟು;ಶತಾಯುಷಕ್ಕೆ ಕಾರಣ.  ಮಲ್ಲಾಡಿಹಳ್ಳಿಯಲ್ಲಿ ಅನಾಥ ಸೇವಾಶ್ರಮವನ್ನೂ ಸ್ಥಾಪಿಸಿದರು.  ಜನರಿಂದ ಸ್ವಾಮೀಜಿಎಂದು ಕರೆಸಿಕೊಂಡ ಇವರು ನಾವು ಕಾಣುವ ಇತರ ಸ್ವಾಮೀಜಿಗಳಂತಲ್ಲ. ಕಾವಿ ಧರಿಸಲಿಲ್ಲ.  ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿ ತಮ್ಮ ಶಿಷ್ಯರೊಡಗೂಡಿ ದುಡಿಮೆ ಮಾಡುತ್ತಿದ್ದರು. ಕಟ್ಟುನಿಟ್ಟಿನ ದಿನಚರಿಯಶಿಸ್ತಿನ ಸಿಪಾಯಿಗಳಾದ ಇವರದು ಸರಳ ಜೀವನ. ಸೇವೆಗಾಗಿನ ಬದುಕು.

ಮಲ್ಲಾಡಿಹಳ್ಳಿ ಸ್ವಾಮಿಗಳು ಜನಿಸಿದ ದಿನ 18.03.1891.  ಮೂಲತಃ ಕೇರಳದಲ್ಲಿ  ಹುಟ್ಟಿದರೂ ಮಲ್ಲಾಡಿಹಳ್ಳಿ ಸ್ವಾಮಿಗಳು  ತಮ್ಮ ಸಂಬಂಧವನ್ನು ಮಲ್ಲಾಡಿಹಳ್ಳಿಯಲ್ಲಿ ಮಿಳಿತಗೊಳಿಸಿಕನ್ನಡ ನೆಲದ ಮಣ್ಣಿನ ಮಗನಾದರು.  106 ವರ್ಷಗಳ ಕಾಲ ಸುದೀರ್ಘವಾಗಿ ಬದುಕಿಅನೇಕರನ್ನು ತಮ್ಮ ಮಾರ್ಗದರ್ಶನದಿಂದ ಬದುಕಿಸಿದ ಮಲ್ಲಾಡಿಹಳ್ಳಿಯ ಈ ಸ್ವಾಮಿಗಳು  1996ರಲ್ಲಿ ಬೆಂಗಳೂರಿನಲ್ಲಿ ತಮ್ಮ ಲೌಕಿಕದ ವ್ಯಾಪಾರವನ್ನು ಮುಗಿಸಿದರು.

ಮಲ್ಲಾಡಿಹಳ್ಳಿ ಸ್ವಾಮಿಗಳು ಒಬ್ಬ ಮಹಾ ಸಾಧಕರುತಪಸ್ವಿಗಳುಪರಮಯೊಗಾಚಾಅರ್ಯರುಮಹಾಸಂಘಟಕರು,ಸಾರ್ಥಕ ಬದುಕಿನ ನಿಷ್ಕಾಮ ಕರ್ಮಯೋಗಿ.  ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು.  ಅಭಿನವ ಧನ್ವಂತರಿಯೆಂದೇ ಜನಪ್ರಿಯರು.
 
  ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿರುವ – ಮಲ್ಲಾಡಿಹಳ್ಳಿಗೆ ಅವರು ಬಂದದ್ದುಅಲ್ಲಿನ ಜನರ ಪಾಲಿಗೆ ವರದಾನವಾಯಿತು.  ತಮ್ಮ ಗುರು ಶಿವಾನಂದರ ಪ್ರೇರಣೆಯಂತೆಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿದಲಿತರುಬಡವರುಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ಪೂಜೆಯಾಗಿ ಸ್ವೀಕರಿಸಿಅಲ್ಲಿ ಯೋಗ ಶಿಬಿರಗಳನ್ನುಆರೋಗ್ಯಕೇಂದ್ರಗಳನ್ನುಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು.  1943ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು.

ಮಲ್ಲಾಡಿಹಳ್ಳಿ ಸ್ವಾಮಿಗಳವರ  ತಂದೆ ಅನಂತ ಪದ್ಮನಾಭ ನಂಬೂದರಿಮೂಲತಃ ಕೇರಳದ ಜ್ಯೋತಿಷ್ಯ ವಿದ್ವಾಂಸರುಮಹಾಪಂಡಿತರು;  ತಮ್ಮ ಬಳಿಗೆ ಬರುತ್ತಿದ್ದ ಜನಗಳ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು.  ಪದ್ಮಾಂಬಾಳ್’  ಅವರ ತಾಯಿಮಹಾಸಾಧ್ವಿ.  ಅವರಿಗೆ ಜನಿಸಿದ ಮಗುವಿನ ಹೆಸರು ಕುಮಾರಸ್ವಾಮಿ’ ಎಂದು.  ಹುಟ್ಟಿದಾಗಲೇ ಆ ಶಿಶು, ‘ಬಾಲರೋಗಕ್ಕೆ ತುತ್ತಾಯಿತು.  ಸುಮಾರು 14 ವರ್ಷಯಾವ ಭಾವನೆಯನ್ನೂ ಅನುಭವಿಸದಆ ಪ್ರಜ್ಞಾಶೂನ್ಯ ಮಗುವಿನ ಮಾತೆದೂರದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಸೇವಾರ್ಥವಾಗಿ ಕರೆದೊಯ್ಯುತ್ತಾರೆ.  ಪದ್ಮಾಂಬ ಹಾಗೂ ನಂಬೂದರಿಯವರು ನಿಶ್ಯಕ್ತಿವೃದ್ಧಾಪ್ಯ ಹಾಗೂ ರೋಗಗಳಿಂದ ಬೆಂಡಾಗಿ ಹೋಗಿದ್ದರು.  ಆದರೂ 14 ವರ್ಷದ ಮಗನನ್ನು ಎತ್ತಿಕೊಂಡೇ ಕಾಡಿನ ದುರ್ಗಮ ಹಾದಿಯಲ್ಲಿ ಅವರ ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಯಾತ್ರೆ’  ಸಾಗಿತ್ತು.  ದಕ್ಷಿಣ ಕನ್ನಡದ ಬಾರಕೂರು ಎಂಬ ಗ್ರಾಮಕ್ಕೆ ಬಂದುಶ್ರೀ ನರಸಿಂಹಯ್ಯನವರ ಮನೆಯಲ್ಲಿ ತಂಗಿದರು.

ಅದೇ ಸಮಯಕ್ಕೆ ಮಂತ್ರಾಲಯದ ಅಂದಿನ ಮಠಾಧಿಪತಿಗಳುಬಾರಕೂರಿನಲ್ಲಿ ಬಿಡಾರಮಾಡಿದ್ದು ಈ ಬಾಲಕನಿಗೆ ಆಶೀರ್ವದಿಸಿ ಅನುಗ್ರಹಿಸಿದ ಮೇಲೆತಾಯಿ ಪದ್ಮಾಂಬಾಳ್ ಅವರಿಗೆ  ಸ್ವಲ್ಪ ಸಮಾಧಾನವಾಯಿತು.  ಮಂತ್ರಾಲಯದ ಯತಿಗಳು ಆ ಬಾಲಕನನ್ನು ರಾಘವೇಂದ್ರ’ ಎಂದು ಕರೆದರು.  ಅಷ್ಟು ಹೊತ್ತಿಗೆ ಪದ್ಮಾಂಬಾಳ್ ಅವರ ಆರೋಗ್ಯ ತೀರ ಹದಗೆಟ್ಟಿದ್ದುಅವರು ಪ್ರಯಾಣ ಮುಂದುವರೆಸಲು ಸಾಧ್ಯವಾಗದೆಮಗನ ಈ ಸ್ಥಿತಿಯನ್ನು ನೋಡಲಾರದೆ ಕೊರಗುತ್ತಾ ಬಾರಕೂರಿನಲ್ಲೆ ಅಸುನೀಗಿದರು.    ನಂಬೂದರಿಯವರು ಆ ಬಾಲಕನನ್ನು ಗೆಳೆಯ ಭಿರ್ತಿಯ ರಾಮಚಂದ್ರಶಾಸ್ತ್ರಿಗಳ ಸಲಹೆಯಂತೆ ಯಕ್ಷಗಾನ ಪಂಡಿತವಾಗ್ಮಿ,  ರಾಮಾಯಣ ಮಹಾಭಾರತ ವ್ಯಾಖ್ಯಾನಕಾರ ನರಸಿಂಹಯ್ಯ ಮತ್ತು ಅವರ ಮಡದಿ ಪುತ್ಥಲೀಬಾಯಿಗೆ ಕ್ರಿ.ಶ.  1906ರ ಯುಗಾದಿಯಂದು ಒಪ್ಪಿಸಿ ತಾವು ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟರು.

ಕುಮಾರಸ್ವಾಮಿಯ ಪಾಲನೆ-ಪೋಷಣೆಯಲ್ಲಿ ತಮ್ಮ ಸರ್ವಸ್ವ ತ್ಯಾಗಮಾಡಿ ತಮ್ಮ ಮಾತೃಪ್ರೇಮದ ಅಮೃತವರ್ಷದಿಂದ ಪುತ್ಥಲೀಬಾಯಿ ಅವನಲ್ಲಿ ಗಮನಾರ್ಹ ಬದಲಾವಣೆ ಮೂಡಿಸಿದರು. ದಿನ ಕಳೆದಂತೆ ಹುಡುಗನಲ್ಲಿ ಪವಾಡಸದೃಶ ಬದಲಾವಣೆ ಉಂಟಾಯಿತು.  ಕೆಲವೇ ತಿಂಗಳುಗಳಲ್ಲಿ ಎಲ್ಲರಂತಾಗಿದ್ದ.

ರಾಘವೇಂದ್ರರ ಜೀವನದಲ್ಲಿ ಹೊಸ ತಿರುವನ್ನು ಕೊಡುವಲ್ಲಿ ನೆರವಾದವರಲ್ಲಿ,  ಅವರ ಬಾಲ್ಯದ ಗುರುಗಳಾದ,ಶಿವರಾಮಯ್ಯ, ‘ತಾರಕಮಂತ್ರ’ ಉಪದೇಶಿಸಿದ ನಿತ್ಯಾನಂದಸ್ವಾಮಿರಂಗನಾಥಭಟ್ಟರುವರೂಢದ ಶಿವಾನಂದ ಶ್ರೀಗಳುಬರೋಡದ ಪ್ರೊ. ಮಾಣಿಕ್ಯರಾವ್ಪಳನಿಸ್ವಾಮಿ ಬಹಳ ಮುಖ್ಯರು.  ತಾರಕಮಂತ್ರ (ಶಕ್ತಿಪಾತ ಯೋಗ)ವನ್ನು ಉಪದೇಶಿಸುವಾಗಸ್ವಾಮಿ ನಿತ್ಯಾನಂದರುರಾಘವರ ಮಸ್ತಕದ ಮೇಲೆ ತಮ್ಮ ಕೈ ಇಟ್ಟರು.  ಅನೇಕ ಯೋಗಿವರ್ಯರೂ ಅವರಿಗೆ ಬೋಧಿಸಿದರು.  ದೇವರು’ ಎಂಬ ಸ್ಪಷ್ಟ ಕಲ್ಪನೆಯನ್ನು ಮೊದಲು ಅವರಲ್ಲಿ ಮೂಡಿಸಿದವರು  ಯತಿವರ್ಯ ಸ್ವಾಮಿ ಶಿವಾನಂದರು.   ರೋಗಿಗಳಲ್ಲಿದೀನರಲ್ಲಿಆರ್ತರಲ್ಲಿ ಕೂಡ ದೈವವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು,  ದೇವರು – ಎಂಬುದು ಒಂದು ದೃಷ್ಟಿಕೋನ – ಇಡೀ ಜಗತ್ತನ್ನು ದೈವವೆಂದು ಪರಿಭಾವಿಸಲು ಭಾವಶುದ್ಧಿ ಬೆಳೆಸಿಕೊಳ್ಳಬೇಕಾಗುತ್ತದೆ ಎಂಬುದರ ಅರಿವು ಅವರಿಗಾಗಿತ್ತು.

ರಾಘವೇಂದ್ರರ ಪ್ರೌಢಶಾಲೆಯ ಪದವಿಪೂರ್ವ ವಿದ್ಯಾಭ್ಯಾಸ ಕುಂದಾಪುರದಲ್ಲಾಯಿತು.  ಅವರು ಬರೋಡದಲ್ಲಿ ಕಲಿಯುಗದ ಭೀಷ್ಮರೆಂದೇ ಪ್ರಖ್ಯಾತರಾದ, 130 ವರ್ಷ ಬದುಕಿದ್ದ ಜುಮ್ಕಾದಾದಾರವರ ಶಿಷ್ಯ ಬಾಲಬ್ರಹ್ಮಚಾರಿ,ಪ್ರೊಫೆಸರ್ ಮಾಣಿಕ್ಯರಾಯರು ಸ್ಥಾಪಿಸಿದ್ದ ಸುಪ್ರಸಿದ್ಧ ಜುಮ್ಕಾದಾದಾ ವ್ಯಾಯಾಮಶಾಲೆಯಲ್ಲಿ ಶಬ್ಧವೇಧಿ ಕಲೆಯನ್ನು ಕಲಿತರು.  ಅಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಲಾಹೋರಿನ ವೈದ್ಯಶ್ರೇಷ್ಠರಾದ, ‘ಆಚಾರ್ಯ ಬಾಬಾ ಲಕ್ಷ್ಮಣದಾಸ’ ಅವರ ಸಮ್ಮುಖದಲ್ಲಿ ಪದವಿ ಪಡೆದರು.  ಇದಕ್ಕೆ ಮೊದಲು ಲಕ್ಷ್ಮಣದಾಸ್ ಅವರ ಕೈವಲ್ಯಧಾಮ ಆಶ್ರಮದಲ್ಲಿ ಆಯುರ್ವೇದಸಿದ್ಧವಿದ್ಯೆಅಸ್ತಿ ಸಂಧಾನ ಕಲೆಯುನಾನಿ ವೈದ್ಯ ಪದ್ಧತಿ ಕಲಿತರು.  ಲಾಹೋರಿಗೆ ಹೋಗುವ ಮೊದಲೇ ಅವರಿಗೆ 368 ಆಸನಗಳ ಪರಿಪೂರ್ಣ ಜ್ಞಾನಾಭ್ಯಾಸವಿತ್ತು.  ಸೂರ್ಯನಮಸ್ಕಾರಗಳು,ಯೋಗಾಸನಗಳುಪ್ರಾಣಾಯಾಮ ಮುಂತಾದ ಆತ್ಮವಿದ್ಯೆಯನ್ನು ಬೋಧಿಸುವ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಟ್ಟಾರೆಯೋಗವಿದ್ಯೆಯಲ್ಲಿ ನಿಷ್ಣಾತರಾದರು.  ರಾಘವೇಂದ್ರರಲ್ಲಿ ದಿವ್ಯ ತೇಜಸ್ಸು ಇತ್ತು.  ಯೋಗಾಭ್ಯಾಸದಿಂದ ಆದ ವಜ್ರಕಾಯಿಯಾಗಿದ್ದರು.  ಅವರ ಅಂಗಸೌಷ್ಟವಶರೀರದ ಆಕೃತಿಶಿಲ್ಪಿಗಳಿಗೂ,ಶಿಲ್ಪಚಿತ್ರಕಾರರಿಗೂ ಪ್ರೇರಣೆ ನೀಡುವಂತಿತ್ತು.

ಭಟ್ಕಳದಲ್ಲಿ ಮಾರುತಿ ವ್ಯಾಯಾಮಶಾಲೆ ಉದ್ಘಾಟಿಸಿದರು.  ರಾಘವೇಂದ್ರರು ಸ್ಥಾಪಿಸಿದ ಅನಾಥ ಸೇವಾಶ್ರಮಅನಾಥರಿಗೆಬಡಮಕ್ಕಳಿಗೆಒಂದು ಸೇವಾಕುಟೀರವಾಗಿ ಬೆಳೆಯಿತು. 

 ಅವರ ಶಿಷ್ಯ ಸೂರದಾಸ ಜೀ (ಪೂರ್ವಾಶ್ರಮದಲ್ಲಿ ಸೂರ್ಯನಾರಾಯಣ) ಅವರೊಡಗೂಡಿ  ಅನಾಥಸೇವಾಶ್ರಮದ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದರು.

ತಂತ್ರ ಯೋಗಶಾಸ್ತ್ರದ ಅಷ್ಟಾಂಗ ಯೋಗಗಳನ್ನು ಆಸಕ್ತರಿಗೆಆಸ್ತಿಕರಿಗೆ ತಿಳಿಯಹೇಳಿದರು.

ಪ್ರತೀವರ್ಷವೂ ಶ್ರಾವಣಮಾಸದಲ್ಲಿ ಒಂದು ತಿಂಗಳು ಮೌನವ್ರತ’ ಧಾರಣೆಮಾಡುತ್ತಿದ್ದರು.

ಮಲ್ಲಾಡಿಹಳ್ಳಿಯ ಸ್ವಾಮಿಗಳು ಅನೇಕ ಅತ್ಯಮೂಲ್ಯ ಪುಸ್ತಕಗಳನ್ನು ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ. 4ಕಾವ್ಯಗಳು, 9 ಕಾದಂಬರಿಗಳು, 12 ನಾಟಕಗಳು, 2 ಗೀತ ನಾಟಕ, 7 ಏಕಪಾತ್ರಾಭಿನಯ, 1 ವಚನ ಸಾಹಿತ್ಯ 3ಕಥಾ ಸಂಕಲನ, 4 ಆಯುರ್ವೇದ, 4 ಯೋಗ (ಇದರಲ್ಲಿ ಬೃಹತ್ ಯೋಗ ದರ್ಶನ” ಯೋಗ ಸಂಪುಟವೂ ಇದೆ)  5ವ್ಯಾಯಾಮ, 2 ಇತರೆ ಆತ್ಮ ನಿವೇದನೆ 3  ಜೋಳಿಗೆ ಪವಾಡ – ಇದು ರಾಘವೇಂದ್ರರ ಆತ್ಮಚರಿತ್ರೆ.

ಕರ್ನಾಟಕ ಸರ್ಕಾರಇವರನ್ನು ಸನ್ಮಾನಿಸಲು ಪದ್ಮಭೂಷಣಪದ್ಮವಿಭೂಷಣ ಪ್ರಶಸ್ತಿಗಳ ಬಗ್ಗೆ ಬಹಳ ಸಾರಿ ಪ್ರಸ್ತಾಪಿಸಿದಾಗ ಅವರ ಉತ್ತರ, “ಅವೆಲ್ಲಾ ನನಗೆ ಬೇಡಆಶ್ರಮದ ಚಟುವಟಿಕೆಗಳಿಗೆ ಹಣದ ಕೊರತೆ ಇದೆ.  ಅದನ್ನು ಕೊಡಿ”.  ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಬಗ್ಗೆ ತಿಳಿಸಿದಾಗಲೂ ಅವರ ನಿಲುವು ಬದಲಾಗಲಿಲ್ಲ.  ಆಶ್ರಮದ ಎಲ್ಲ ಖರ್ಚುಗಳಿಗೂ ಅವರು ದಾನಿಗಳ ಸಹಾಯ ಪಡೆಯಬೇಕಾಗಿತ್ತು.  ಯಾವ ನಿರಂತರ ಧನದ ವ್ಯವಸ್ಥೆಯೂ ಇರಲಿಲ್ಲ.  ಅವರು ಬರೆದ ಅನೇಕ ಪುಸ್ತಕಗಳ ಮಾರಾಟದಿಂದ ಬಂದರೆ ಅಲ್ಪಸ್ವಲ್ಪ ಹಣ ಅವರ ಸರ್ವೋದಯ ಮುದ್ರಣಾಲಯದಿಂದ ಬರುತ್ತಿತ್ತು.  ತಮ್ಮ ಜೋಳಿಗೆ ತಗಲುಹಾಕಿಕೊಂಡು ಭಿಕ್ಷೆಗೆ ಹೋಗುತ್ತಿದ್ದರು.

1991ರಲ್ಲಿ ರಾಘವೇಂದ್ರರ 100ನೇ ಹುಟ್ಟಿದ ಹಬ್ಬವನ್ನು ಊರಿನ ಜನ ಹಾಗೂ ಆಶ್ರಮದ ಹಿತೈಷಿಗಳು ಆಚರಿಸಿದರು.  ಆ ಸಮಯದಲ್ಲಿ ಅವರು ಬರೆದ ಪುಟ್ಟ ಪುಸ್ತಕ ಆತ್ಮ ನಿವೇದನೆ’ ಹೊರಗೆ ಬಂತು.  ಆತ್ಮಚರಿತ್ರೆ, ‘ಜೋಳಿಗೆಯ ಪವಾಡ’ ಬರೆದರು.  ಆಗಲೇ ಹೃದಯಾಘಾತದಿಂದ ನರಳಿದ್ದರು.  ಪುನಃ 1996ರಲ್ಲಿ ಅವರಿಗೆ ಮತ್ತೆಹೃದಯಾಘಾತವಾಯಿತು.

ತಿಂಗಳ ಮೇಲೆ ಕೋಮಾದಲ್ಲಿದ್ದ ಅವರಿಗೆ ಮತ್ತೆ ಪ್ರಜ್ಞೆ ಬರಲೇ ಇಲ್ಲ.  ಬುತ್ತಿ ಗಂಟು ತೀರಿತಿನ್ನುಹೊರಟೆ ನನ್ನ ಊರಿಗೆ’ ಎನ್ನುತ್ತಾ ಆಗಸ್ಟ್ 31, 1996 ಇಹ ತೊರೆದು ಪರದೆಡೆಗೆ ನಡೆದರು.

ಸಹಸ್ರಾರು ಜನರ ಜೀವನದಲ್ಲಿ ಬೆಳಕು ಮೂಡಿಸಿಸಮಾಜದ ಒಳಿತಿಗಾಗಿಯೇ ತಮ್ಮ ಜೀವನವಿಡೀ ದುಡಿದುತಮ್ಮ ಜೀವನವನ್ನು ಸಾರ್ಥಕಗೊಳಿಸಿದ ಮಹಾಚೇತನಅನಂತದಲ್ಲಿ ಲೀನವಾಯಿತು.

ಸ್ವಾಮಿಗಳು ಕಟ್ಟಿ ಬೆಳೆಸಿದ ಪ್ರೌಢಶಾಲೆಗಳುಮಕ್ಕಳ ವಸತಿ ಗೃಹಗಳುಬನಶಂಕರಿ ಅಮ್ಮನ ದೇವಸ್ಥಾನ,ಕಾಲೇಜುಗಳುದೈಹಿಕ ಶಿಕ್ಷಣ ಕಾಲೇಜುಆಯುರ್ವೇದ ಕಾಲೇಜುಶಿಕ್ಷಕರ ತರಬೇತಿ ಕಾಲೇಜು ಇಂದು ವಿಸ್ತೃತವಾಗಿ ಬೆಳೆದು ಉತ್ತಮ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.

https://harthikotehuduga.blogspot.in

ಮಲ್ಲಾಡಿಹಳ್ಳಿಯ ‘ತಿರುಕ’ ರಾಘವೇಂದ್ರ ಸ್ವಾಮೀಜಿ Malatesh Urs

ಮಲ್ಲಾಡಿಹಳ್ಳಿಯ ರಾಘವೇಂದ್ರಸ್ವಾಮಿಗಳು ಮಲ್ಲಾಡಿಹಳ್ಳಿ ಸ್ವಾಮಿಗಳೆಂದೇ ಖ್ಯಾತನಾಮರು.  ತಿರುಕ’ ಇವರ ಕಾವ್ಯನಾಮ.  ಸದಾ ಶ್ವೇತವಸ್ತ್ರಧಾರಿಗಳಾಗಿಹಸನ್ಮುಖರಾಗಿದ್ದವರು.  ಎಲ್ಲರಿಗೂ ಯೋಗವನ್ನು ಹೇಳಿಕೊಟ್ಟು ಅವರ ರೋಗಗಳನ್ನು ನಿವಾರಿಸಿದರು.  ಒಂದು ವಾಸ್ತವ ಸಂಗತಿಯೆಂದರೆ ತಮ್ಮನ್ನು ಕಾಡುತ್ತಿದ್ದ ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ಇವರು ಯೋಗಕ್ಕೆ ಮೊರೆಹೋದರು.  ನಿರಂತರ ಯೋಗಾಭ್ಯಾಸದಿಂದಾಗಿ ಅವರ ಅನೇಕ ಕಾಯಿಲೆಗಳು ದೂರವಾದವು.  ಅವರ ಶಿಸ್ತುಬದ್ಧ ಯೋಗಾಸನಗಳೇ ಅವರ ಆರೋಗ್ಯದ ಗುಟ್ಟು;ಶತಾಯುಷಕ್ಕೆ ಕಾರಣ.  ಮಲ್ಲಾಡಿಹಳ್ಳಿಯಲ್ಲಿ ಅನಾಥ ಸೇವಾಶ್ರಮವನ್ನೂ ಸ್ಥಾಪಿಸಿದರು.  ಜನರಿಂದ ಸ್ವಾಮೀಜಿಎಂದು ಕರೆಸಿಕೊಂಡ ಇವರು ನಾವು ಕಾಣುವ ಇತರ ಸ್ವಾಮೀಜಿಗಳಂತಲ್ಲ. ಕಾವಿ ಧರಿಸಲಿಲ್ಲ.  ಕೇವಲ ಖಾದಿ ಬಟ್ಟೆಯ ಬಿಳಿಯ ಚಡ್ಡಿ ಮತ್ತು ಅರ್ಧ ತೋಳಿನ ಅಂಗಿ ಧರಿಸಿ ತಮ್ಮ ಶಿಷ್ಯರೊಡಗೂಡಿ ದುಡಿಮೆ ಮಾಡುತ್ತಿದ್ದರು. ಕಟ್ಟುನಿಟ್ಟಿನ ದಿನಚರಿಯಶಿಸ್ತಿನ ಸಿಪಾಯಿಗಳಾದ ಇವರದು ಸರಳ ಜೀವನ. ಸೇವೆಗಾಗಿನ ಬದುಕು.

ಮಲ್ಲಾಡಿಹಳ್ಳಿ ಸ್ವಾಮಿಗಳು ಜನಿಸಿದ ದಿನ 18.03.1891.  ಮೂಲತಃ ಕೇರಳದಲ್ಲಿ  ಹುಟ್ಟಿದರೂ ಮಲ್ಲಾಡಿಹಳ್ಳಿ ಸ್ವಾಮಿಗಳು  ತಮ್ಮ ಸಂಬಂಧವನ್ನು ಮಲ್ಲಾಡಿಹಳ್ಳಿಯಲ್ಲಿ ಮಿಳಿತಗೊಳಿಸಿಕನ್ನಡ ನೆಲದ ಮಣ್ಣಿನ ಮಗನಾದರು.  106 ವರ್ಷಗಳ ಕಾಲ ಸುದೀರ್ಘವಾಗಿ ಬದುಕಿಅನೇಕರನ್ನು ತಮ್ಮ ಮಾರ್ಗದರ್ಶನದಿಂದ ಬದುಕಿಸಿದ ಮಲ್ಲಾಡಿಹಳ್ಳಿಯ ಈ ಸ್ವಾಮಿಗಳು  1996ರಲ್ಲಿ ಬೆಂಗಳೂರಿನಲ್ಲಿ ತಮ್ಮ ಲೌಕಿಕದ ವ್ಯಾಪಾರವನ್ನು ಮುಗಿಸಿದರು.

ಮಲ್ಲಾಡಿಹಳ್ಳಿ ಸ್ವಾಮಿಗಳು ಒಬ್ಬ ಮಹಾಸಾಧಕರುತಪಸ್ವಿಗಳುಪರಮಯೊಗಾಚಾಅರ್ಯರುಮಹಾಸಂಘಟಕರು,ಸಾರ್ಥಕ ಬದುಕಿನ ನಿಷ್ಕಾಮ ಕರ್ಮಯೋಗಿ.  ಮೇಲಾಗಿ ಆಯುರ್ವೇದದಲ್ಲಿ ಪರಿಣಿತರು.  ಅಭಿನವ ಧನ್ವಂತರಿಯೆಂದೇ ಜನಪ್ರಿಯರು.  ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿರುವ – ಮಲ್ಲಾಡಿಹಳ್ಳಿಗೆ ಅವರು ಬಂದದ್ದುಅಲ್ಲಿನ ಜನರ ಪಾಲಿಗೆ ವರದಾನವಾಯಿತು.  ತಮ್ಮ ಗುರು ಶಿವಾನಂದರ ಪ್ರೇರಣೆಯಂತೆಕರ್ನಾಟಕದ ಮೂಲೆ ಮೂಲೆಗಳಿಗೂ ಹಳ್ಳಿ ಹಳ್ಳಿಗೂ ಹೋಗಿದಲಿತರುಬಡವರುಅಸಹಾಯಕರುಗಳನ್ನೂ ಉದ್ಧರಿಸುವ ಕಾಯಕವನ್ನು ಒಂದು ಪೂಜೆಯಾಗಿ ಸ್ವೀಕರಿಸಿಅಲ್ಲಿ ಯೋಗ ಶಿಬಿರಗಳನ್ನುಆರೋಗ್ಯಕೇಂದ್ರಗಳನ್ನುಊರಿನ ನೈರ್ಮಲ್ಯೀಕರಣಗಳ ಕೆಲಸಗಳನ್ನು ಕೈಗೆತ್ತಿಕೊಂಡು ಗ್ರಾಮೀಣರಿಗೆ ಅರಿವು ಕೊಡುವುದರ ಮೂಲಕಅಲ್ಲಿನ ಸರ್ವತೋಮುಖ ಪ್ರಗತಿಗಳಿಗೆ ಕಾರಣರಾದರು.  1943ರಲ್ಲಿ ಮಲ್ಲಾಡಿಹಳ್ಳಿಯ ಪ್ರಜೆಗಳ ಬೇಡಿಕೆಯನ್ನು ಪರಿಗಣಿಸಿ ಅಲ್ಲಿ ಬಂದವರು ತಮ್ಮ ಜೀವಿತದ ಉಳಿದ 50 ವರ್ಷಕ್ಕೂ ಹೆಚ್ಚು ಸಮಯವನ್ನು ಅಲ್ಲಿಯ ಏಳಿಗೆಗೆ ಮುಡುಪಾಗಿಟ್ಟರು.

ಮಲ್ಲಾಡಿಹಳ್ಳಿ ಸ್ವಾಮಿಗಳವರ  ತಂದೆ ಅನಂತ ಪದ್ಮನಾಭ ನಂಬೂದರಿಮೂಲತಃ ಕೇರಳದ ಜ್ಯೋತಿಷ್ಯ ವಿದ್ವಾಂಸರುಮಹಾಪಂಡಿತರು;  ತಮ್ಮ ಬಳಿಗೆ ಬರುತ್ತಿದ್ದ ಜನಗಳ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿದ್ದರು.  ಪದ್ಮಾಂಬಾಳ್’  ಅವರ ತಾಯಿಮಹಾಸಾಧ್ವಿ.  ಅವರಿಗೆ ಜನಿಸಿದ ಮಗುವಿನ ಹೆಸರು ಕುಮಾರಸ್ವಾಮಿ’ ಎಂದು.  ಹುಟ್ಟಿದಾಗಲೇ ಆ ಶಿಶು, ‘ಬಾಲರೋಗಕ್ಕೆ ತುತ್ತಾಯಿತು.  ಸುಮಾರು 14 ವರ್ಷಯಾವ ಭಾವನೆಯನ್ನೂ ಅನುಭವಿಸದಆ ಪ್ರಜ್ಞಾಶೂನ್ಯ ಮಗುವಿನ ಮಾತೆದೂರದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ಸೇವಾರ್ಥವಾಗಿ ಕರೆದೊಯ್ಯುತ್ತಾರೆ.  ಪದ್ಮಾಂಬ ಹಾಗೂ ನಂಬೂದರಿಯವರು ನಿಶ್ಯಕ್ತಿವೃದ್ಧಾಪ್ಯ ಹಾಗೂ ರೋಗಗಳಿಂದ ಬೆಂಡಾಗಿ ಹೋಗಿದ್ದರು.  ಆದರೂ 14 ವರ್ಷದ ಮಗನನ್ನು ಎತ್ತಿಕೊಂಡೇ ಕಾಡಿನ ದುರ್ಗಮ ಹಾದಿಯಲ್ಲಿ ಅವರ ಕೊಲ್ಲೂರು ಮೂಕಾಂಬಿಕಾ ಅಮ್ಮನವರ ಯಾತ್ರೆ’  ಸಾಗಿತ್ತು.  ದಕ್ಷಿಣ ಕನ್ನಡದ ಬಾರಕೂರು ಎಂಬ ಗ್ರಾಮಕ್ಕೆ ಬಂದುಶ್ರೀ ನರಸಿಂಹಯ್ಯನವರ ಮನೆಯಲ್ಲಿ ತಂಗಿದರು.

ಅದೇ ಸಮಯಕ್ಕೆ ಮಂತ್ರಾಲಯದ ಅಂದಿನ ಮಠಾಧಿಪತಿಗಳುಬಾರಕೂರಿನಲ್ಲಿ ಬಿಡಾರಮಾಡಿದ್ದು ಈ ಬಾಲಕನಿಗೆ ಆಶೀರ್ವದಿಸಿ ಅನುಗ್ರಹಿಸಿದ ಮೇಲೆತಾಯಿ ಪದ್ಮಾಂಬಾಳ್ ಅವರಿಗೆ  ಸ್ವಲ್ಪ ಸಮಾಧಾನವಾಯಿತು.  ಮಂತ್ರಾಲಯದ ಯತಿಗಳು ಆ ಬಾಲಕನನ್ನು ರಾಘವೇಂದ್ರ’ ಎಂದು ಕರೆದರು.  ಅಷ್ಟು ಹೊತ್ತಿಗೆ ಪದ್ಮಾಂಬಾಳ್ ಅವರ ಆರೋಗ್ಯ ತೀರ ಹದಗೆಟ್ಟಿದ್ದುಅವರು ಪ್ರಯಾಣ ಮುಂದುವರೆಸಲು ಸಾಧ್ಯವಾಗದೆಮಗನ ಈ ಸ್ಥಿತಿಯನ್ನು ನೋಡಲಾರದೆ ಕೊರಗುತ್ತಾ ಬಾರಕೂರಿನಲ್ಲೆ ಅಸುನೀಗಿದರು.    ನಂಬೂದರಿಯವರು ಆ ಬಾಲಕನನ್ನು ಗೆಳೆಯ ಭಿರ್ತಿಯ ರಾಮಚಂದ್ರಶಾಸ್ತ್ರಿಗಳ ಸಲಹೆಯಂತೆ ಯಕ್ಷಗಾನ ಪಂಡಿತವಾಗ್ಮಿ,  ರಾಮಾಯಣ ಮಹಾಭಾರತ ವ್ಯಾಖ್ಯಾನಕಾರ ನರಸಿಂಹಯ್ಯ ಮತ್ತು ಅವರ ಮಡದಿ ಪುತ್ಥಲೀಬಾಯಿಗೆ ಕ್ರಿ.ಶ.  1906ರ ಯುಗಾದಿಯಂದು ಒಪ್ಪಿಸಿ ತಾವು ತಪಸ್ಸಿಗಾಗಿ ಹಿಮಾಲಯಕ್ಕೆ ಹೊರಟರು.

ಕುಮಾರಸ್ವಾಮಿಯ ಪಾಲನೆ-ಪೋಷಣೆಯಲ್ಲಿ ತಮ್ಮ ಸರ್ವಸ್ವ ತ್ಯಾಗಮಾಡಿ ತಮ್ಮ ಮಾತೃಪ್ರೇಮದ ಅಮೃತವರ್ಷದಿಂದ ಪುತ್ಥಲೀಬಾಯಿ ಅವನಲ್ಲಿ ಗಮನಾರ್ಹ ಬದಲಾವಣೆ ಮೂಡಿಸಿದರು. ದಿನ ಕಳೆದಂತೆ ಹುಡುಗನಲ್ಲಿ ಪವಾಡಸದೃಶ ಬದಲಾವಣೆ ಉಂಟಾಯಿತು.  ಕೆಲವೇ ತಿಂಗಳುಗಳಲ್ಲಿ ಎಲ್ಲರಂತಾಗಿದ್ದ.

ರಾಘವೇಂದ್ರರ ಜೀವನದಲ್ಲಿ ಹೊಸ ತಿರುವನ್ನು ಕೊಡುವಲ್ಲಿ ನೆರವಾದವರಲ್ಲಿ,  ಅವರ ಬಾಲ್ಯದ ಗುರುಗಳಾದ,ಶಿವರಾಮಯ್ಯ, ‘ತಾರಕಮಂತ್ರ’ ಉಪದೇಶಿಸಿದ ನಿತ್ಯಾನಂದಸ್ವಾಮಿರಂಗನಾಥಭಟ್ಟರುವರೂಢದ ಶಿವಾನಂದ ಶ್ರೀಗಳುಬರೋಡದ ಪ್ರೊ. ಮಾಣಿಕ್ಯರಾವ್ಪಳನಿಸ್ವಾಮಿ ಬಹಳ ಮುಖ್ಯರು.  ತಾರಕಮಂತ್ರ (ಶಕ್ತಿಪಾತ ಯೋಗ)ವನ್ನು ಉಪದೇಶಿಸುವಾಗಸ್ವಾಮಿ ನಿತ್ಯಾನಂದರುರಾಘವರ ಮಸ್ತಕದ ಮೇಲೆ ತಮ್ಮ ಕೈ ಇಟ್ಟರು.  ಅನೇಕ ಯೋಗಿವರ್ಯರೂ ಅವರಿಗೆ ಬೋಧಿಸಿದರು.  ದೇವರು’ ಎಂಬ ಸ್ಪಷ್ಟ ಕಲ್ಪನೆಯನ್ನು ಮೊದಲು ಅವರಲ್ಲಿ ಮೂಡಿಸಿದವರು  ಯತಿವರ್ಯ ಸ್ವಾಮಿ ಶಿವಾನಂದರು.   ರೋಗಿಗಳಲ್ಲಿದೀನರಲ್ಲಿಆರ್ತರಲ್ಲಿ ಕೂಡ ದೈವವನ್ನು ಕಾಣುವ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು,  ದೇವರು – ಎಂಬುದು ಒಂದು ದೃಷ್ಟಿಕೋನ – ಇಡೀ ಜಗತ್ತನ್ನು ದೈವವೆಂದು ಪರಿಭಾವಿಸಲು ಭಾವಶುದ್ಧಿ ಬೆಳೆಸಿಕೊಳ್ಳಬೇಕಾಗುತ್ತದೆ ಎಂಬುದರ ಅರಿವು ಅವರಿಗಾಗಿತ್ತು.

ರಾಘವೇಂದ್ರರ ಪ್ರೌಢಶಾಲೆಯ ಪದವಿಪೂರ್ವ ವಿದ್ಯಾಭ್ಯಾಸ ಕುಂದಾಪುರದಲ್ಲಾಯಿತು.  ಅವರು ಬರೋಡದಲ್ಲಿ ಕಲಿಯುಗದ ಭೀಷ್ಮರೆಂದೇ ಪ್ರಖ್ಯಾತರಾದ, 130 ವರ್ಷ ಬದುಕಿದ್ದ ಜುಮ್ಕಾದಾದಾರವರ ಶಿಷ್ಯ ಬಾಲಬ್ರಹ್ಮಚಾರಿ,ಪ್ರೊಫೆಸರ್ ಮಾಣಿಕ್ಯರಾಯರು ಸ್ಥಾಪಿಸಿದ್ದ ಸುಪ್ರಸಿದ್ಧ ಜುಮ್ಕಾದಾದಾ ವ್ಯಾಯಾಮಶಾಲೆಯಲ್ಲಿ ಶಬ್ಧವೇಧಿ ಕಲೆಯನ್ನು ಕಲಿತರು.  ಅಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಲಾಹೋರಿನ ವೈದ್ಯಶ್ರೇಷ್ಠರಾದ, ‘ಆಚಾರ್ಯ ಬಾಬಾ ಲಕ್ಷ್ಮಣದಾಸ’ ಅವರ ಸಮ್ಮುಖದಲ್ಲಿ ಪದವಿ ಪಡೆದರು.  ಇದಕ್ಕೆ ಮೊದಲು ಲಕ್ಷ್ಮಣದಾಸ್ ಅವರ ಕೈವಲ್ಯಧಾಮ ಆಶ್ರಮದಲ್ಲಿ ಆಯುರ್ವೇದಸಿದ್ಧವಿದ್ಯೆಅಸ್ತಿ ಸಂಧಾನ ಕಲೆಯುನಾನಿ ವೈದ್ಯ ಪದ್ಧತಿ ಕಲಿತರು.  ಲಾಹೋರಿಗೆ ಹೋಗುವ ಮೊದಲೇ ಅವರಿಗೆ 368 ಆಸನಗಳ ಪರಿಪೂರ್ಣ ಜ್ಞಾನಾಭ್ಯಾಸವಿತ್ತು.  ಸೂರ್ಯನಮಸ್ಕಾರಗಳು,ಯೋಗಾಸನಗಳುಪ್ರಾಣಾಯಾಮ ಮುಂತಾದ ಆತ್ಮವಿದ್ಯೆಯನ್ನು ಬೋಧಿಸುವ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಒಟ್ಟಾರೆಯೋಗವಿದ್ಯೆಯಲ್ಲಿ ನಿಷ್ಣಾತರಾದರು.  ರಾಘವೇಂದ್ರರಲ್ಲಿ ದಿವ್ಯ ತೇಜಸ್ಸು ಇತ್ತು.  ಯೋಗಾಭ್ಯಾಸದಿಂದ ಆದ ವಜ್ರಕಾಯಿಯಾಗಿದ್ದರು.  ಅವರ ಅಂಗಸೌಷ್ಟವಶರೀರದ ಆಕೃತಿಶಿಲ್ಪಿಗಳಿಗೂ,ಶಿಲ್ಪಚಿತ್ರಕಾರರಿಗೂ ಪ್ರೇರಣೆ ನೀಡುವಂತಿತ್ತು.

ಭಟ್ಕಳದಲ್ಲಿ ಮಾರುತಿ ವ್ಯಾಯಾಮಶಾಲೆ ಉದ್ಘಾಟಿಸಿದರು.  ರಾಘವೇಂದ್ರರು ಸ್ಥಾಪಿಸಿದ ಅನಾಥ ಸೇವಾಶ್ರಮಅನಾಥರಿಗೆಬಡಮಕ್ಕಳಿಗೆಒಂದು ಸೇವಾಕುಟೀರವಾಗಿ ಬೆಳೆಯಿತು.  ಅವರ ಶಿಷ್ಯ ಸೂರದಾಸ ಜೀ’ (ಪೂರ್ವಾಶ್ರಮದಲ್ಲಿ ಸೂರ್ಯನಾರಾಯಣ) ಅವರೊಡಗೂಡಿ  ಅನಾಥಸೇವಾಶ್ರಮದ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿ ಶ್ರಮಿಸಿದರು.

ತಂತ್ರ ಯೋಗಶಾಸ್ತ್ರದ ಅಷ್ಟಾಂಗ ಯೋಗಗಳನ್ನು ಆಸಕ್ತರಿಗೆಆಸ್ತಿಕರಿಗೆ ತಿಳಿಯಹೇಳಿದರು.

ಪ್ರತೀವರ್ಷವೂ ಶ್ರಾವಣಮಾಸದಲ್ಲಿ ಒಂದು ತಿಂಗಳು ಮೌನವ್ರತ’ ಧಾರಣೆಮಾಡುತ್ತಿದ್ದರು.

ಮಲ್ಲಾಡಿಹಳ್ಳಿಯ ಸ್ವಾಮಿಗಳು ಅನೇಕ ಅತ್ಯಮೂಲ್ಯ ಪುಸ್ತಕಗಳನ್ನು ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ. 4ಕಾವ್ಯಗಳು, 9 ಕಾದಂಬರಿಗಳು, 12 ನಾಟಕಗಳು, 2 ಗೀತ ನಾಟಕ, 7 ಏಕಪಾತ್ರಾಭಿನಯ, 1 ವಚನ ಸಾಹಿತ್ಯ 3ಕಥಾ ಸಂಕಲನ, 4 ಆಯುರ್ವೇದ, 4 ಯೋಗ (ಇದರಲ್ಲಿ ಬೃಹತ್ ಯೋಗ ದರ್ಶನ” ಯೋಗ ಸಂಪುಟವೂ ಇದೆ)  5ವ್ಯಾಯಾಮ, 2 ಇತರೆ ಆತ್ಮ ನಿವೇದನೆ 3  ಜೋಳಿಗೆ ಪವಾಡ – ಇದು ರಾಘವೇಂದ್ರರ ಆತ್ಮಚರಿತ್ರೆ.

ಕರ್ನಾಟಕ ಸರ್ಕಾರಇವರನ್ನು ಸನ್ಮಾನಿಸಲು ಪದ್ಮಭೂಷಣಪದ್ಮವಿಭೂಷಣ ಪ್ರಶಸ್ತಿಗಳ ಬಗ್ಗೆ ಬಹಳ ಸಾರಿ ಪ್ರಸ್ತಾಪಿಸಿದಾಗ ಅವರ ಉತ್ತರ, “ಅವೆಲ್ಲಾ ನನಗೆ ಬೇಡಆಶ್ರಮದ ಚಟುವಟಿಕೆಗಳಿಗೆ ಹಣದ ಕೊರತೆ ಇದೆ.  ಅದನ್ನು ಕೊಡಿ”.  ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ಬಗ್ಗೆ ತಿಳಿಸಿದಾಗಲೂ ಅವರ ನಿಲುವು ಬದಲಾಗಲಿಲ್ಲ.  ಆಶ್ರಮದ ಎಲ್ಲ ಖರ್ಚುಗಳಿಗೂ ಅವರು ದಾನಿಗಳ ಸಹಾಯ ಪಡೆಯಬೇಕಾಗಿತ್ತು.  ಯಾವ ನಿರಂತರ ಧನದ ವ್ಯವಸ್ಥೆಯೂ ಇರಲಿಲ್ಲ.  ಅವರು ಬರೆದ ಅನೇಕ ಪುಸ್ತಕಗಳ ಮಾರಾಟದಿಂದ ಬಂದರೆ ಅಲ್ಪಸ್ವಲ್ಪ ಹಣ ಅವರ ಸರ್ವೋದಯ ಮುದ್ರಣಾಲಯದಿಂದ ಬರುತ್ತಿತ್ತು.  ತಮ್ಮ ಜೋಳಿಗೆ ತಗಲುಹಾಕಿಕೊಂಡು ಭಿಕ್ಷೆಗೆ ಹೋಗುತ್ತಿದ್ದರು.

1991ರಲ್ಲಿ ರಾಘವೇಂದ್ರರ 100ನೇ ಹುಟ್ಟಿದ ಹಬ್ಬವನ್ನು ಊರಿನ ಜನ ಹಾಗೂ ಆಶ್ರಮದ ಹಿತೈಷಿಗಳು ಆಚರಿಸಿದರು.  ಆ ಸಮಯದಲ್ಲಿ ಅವರು ಬರೆದ ಪುಟ್ಟ ಪುಸ್ತಕ ಆತ್ಮ ನಿವೇದನೆ’ ಹೊರಗೆ ಬಂತು.  ಆತ್ಮಚರಿತ್ರೆ, ‘ಜೋಳಿಗೆಯ ಪವಾಡ’ ಬರೆದರು.  ಆಗಲೇ ಹೃದಯಾಘಾತದಿಂದ ನರಳಿದ್ದರು.  ಪುನಃ 1996ರಲ್ಲಿ ಅವರಿಗೆ ಮತ್ತೆಹೃದಯಾಘಾತವಾಯಿತು.

ತಿಂಗಳ ಮೇಲೆ ಕೋಮಾದಲ್ಲಿದ್ದ ಅವರಿಗೆ ಮತ್ತೆ ಪ್ರಜ್ಞೆ ಬರಲೇ ಇಲ್ಲ.  ಬುತ್ತಿ ಗಂಟು ತೀರಿತಿನ್ನುಹೊರಟೆ ನನ್ನ ಊರಿಗೆ’ ಎನ್ನುತ್ತಾ ಆಗಸ್ಟ್ 31, 1996 ಇಹ ತೊರೆದು ಪರದೆಡೆಗೆ ನಡೆದರು.

ಸಹಸ್ರಾರು ಜನರ ಜೀವನದಲ್ಲಿ ಬೆಳಕು ಮೂಡಿಸಿಸಮಾಜದ ಒಳಿತಿಗಾಗಿಯೇ ತಮ್ಮ ಜೀವನವಿಡೀ ದುಡಿದುತಮ್ಮ ಜೀವನವನ್ನು ಸಾರ್ಥಕಗೊಳಿಸಿದ ಮಹಾಚೇತನಅನಂತದಲ್ಲಿ ಲೀನವಾಯಿತು.

ಸ್ವಾಮಿಗಳು ಕಟ್ಟಿ ಬೆಳೆಸಿದ ಪ್ರೌಢಶಾಲೆಗಳುಮಕ್ಕಳ ವಸತಿ ಗೃಹಗಳುಬನಶಂಕರಿ ಅಮ್ಮನ ದೇವಸ್ಥಾನ,ಕಾಲೇಜುಗಳುದೈಹಿಕ ಶಿಕ್ಷಣ ಕಾಲೇಜುಆಯುರ್ವೇದ ಕಾಲೇಜುಶಿಕ್ಷಕರ ತರಬೇತಿ ಕಾಲೇಜು ಇಂದು ವಿಸ್ತೃತವಾಗಿ ಬೆಳೆದು ಉತ್ತಮ ಸಮಾಜದ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬರುತ್ತಿದೆ.

ಕೃಪೆ: ಕರ್ಮವೀರ ನವೆಂಬರ್ 4, 2012ರ ಸಂಚಿಕೆ

GANESH Festival---Malatheh Urs Harthikote

BBMP_Bangalure Mejestic Toilet Problems_Malatheh Urs Harthikote

Monday, August 4, 2014

ಮಾರುಕಟ್ಟೆಗೆ ಬಂದ ಗಣೇಶ..ಮಾಲತೇಶ್ ಅರಸ್

 * ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳದೇ ದರ್ಬಾರು
 * ಪರಿಸರ ಸ್ನೇಹಿ ವಿಗ್ರಹಗಳ ತಯಾರಿ * ಕಳೆದ ಬಾರಿಗಿಂದ ದುಬಾರಿ
 *ಮಣ್ಣಿನ ಗಣಪ ಬಳಸೋಣ, ನೀರಿನ ಮೂಲ ಉಳಿಸೋಣ

 ಮಾಲತೇಶ್ ಅರಸ್
 ಬೆಂಗಳೂರು: ಗಣೇಶ ಚತುರ್ಥಿಗೆ ಇನ್ನೂ 20 ದಿನ ಬಾಕಿ ಇರುವಾಗಲೇ ಸಿಲಿಕಾನ್ ಸಿಟಿಯ ಬಹುತೇಕ ಕಡೆ ಬಣ್ಣ ಬಣ್ಣದ ವಿಗ್ರಹಗಳು ರಾರಾಜಿಸುತ್ತಿವೆ. ಸಾಂಪ್ರದಾಯಿಕ ಮೂರ್ತಿಗಳ ತಯಾರಿಕೆ ಮಾಯವಾಗಿದೆ. ಎಲ್ಲೆಡೆ ಪಿಒಪಿ ಗಣೇಶ ತಯಾರಿಕೆ ಭರ್ಜರಿಯಾಗಿ ನಡೆದಿದ್ದು ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಆದರೆ ಗಣೇಶ ದುಬಾರಿಯಾಗಿ ಭಕ್ತರ ಕೈ ಸುಡಲು ಬರುತ್ತಿದ್ದಾನೆ.

   ಹಬ್ಬ ಇನ್ನೂ ದೂರವಿದ್ದರೂ ಗಣಪ ಅಲ್ಲಲ್ಲಿ ಶೃಂಗಾರಗೊಂಡು ಭಕ್ತರ ಮನೆಗೆ ಹೋಗಲು ಕಾದು ಕುಳಿತಿದ್ದಾನೆ. ಕೆಂಗೇರಿ, ದಾಸರಹಳ್ಳಿ, ಮೂಡಲಪಾಳ್ಯ, ಕಾಮಾಕ್ಷಿಪಾಳ್ಯ, ಹೇರೋಹಳ್ಳಿ, ಸುಂಕದಕಟ್ಟೆ, ಯಲಹಂಕ, ಪಾರ್ವತಿಪುರ, ಮಲ್ಲೇಶ್ವರ, ಹಲಸೂರು ಮತ್ತಿತರ ಕಡೆ ಗಣೇಶ ವಿಗ್ರಹಗಳನ್ನು ತಯಾರು ಮಾಡುತ್ತಿದ್ದಾರೆ. ವಿಶೇಷವಾಗಿ ಮೈಸೂರು ರಸ್ತೆಯ ವಿಆರ್‌ಎಲ್ ಲಾಜಿಸ್ಟಿಕ್ ಸಮೀಪ ಬೃಹತ್ ಗಾತ್ರದ ಮೂರ್ತಿಗಳನ್ನು ಪ್ಲಾಸ್ಟರ್ ಆಫ್ ಪ್ಯಾರೀಸ್‌ನಲ್ಲಿ ತಯಾರು ಮಾಡುತ್ತಿದ್ದಾರೆ.
 ಗಣೇಶ ಮೂರ್ತಿಗಳನ್ನು ಬೇರೆಡೆಯಿಂದ ತರಿಸಿ ಹಣ ಮಾಡುವವರ ಸಂಖ್ಯೆ ಕಳೆದ ಬಾರಿಗಿಂತ ಹತ್ತರಷ್ಟು ಜಾಸ್ತಿಯಾಗಿರುವುದರಿಂದ, ವಂಶ ಪಾರಂಪರ್ಯವಾಗಿ ಮಣ್ಣಿನಲ್ಲಿ ಮಾಡಿಕೊಂಡು ಬರುತಿದ್ದ ಅನೇಕ ಕುಂಬಾರಿಕೆಯ ಕಲಾವಿದರೂ ಈ ಬಾರಿ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.  ನಿಷೇಧದ ನಡುವೆ  ಪ್ಲಾಸ್ಟರ್ ಆಫ್ ಪ್ಯಾರೀಸ್‌ನಲ್ಲಿ  ತಯಾರಿಸುತ್ತಿರುವ ಮೂರ್ತಿಗಳ ಆರ್ಭಟ ಎಗ್ಗಿಲ್ಲದೆ ಮಿತಿ ಮೀರಿದೆ.

 ಮುಂಗಡ ಬುಕ್ಕಿಂಗ್: ನಗರ ಹಾಗೂ ಗ್ರಾಮೀಣ ಜನತೆ ತಮ್ಮ ಕಷ್ಟಗಳ ನಿವಾರಣೆಗಾಗಿ ವಿಘ್ನ ನಿವಾರಕನ ಮೊರೆ ಹೋಗುತ್ತಿದ್ದಾರೆ. ಬೆಂಗಳೂರು ಮಾತ್ರವಲ್ಲ ಸುತ್ತ ಮುತ್ತಲಿಂದ ಆಗಮಿಸುತ್ತಿರುವ ನೂರಾರು ಸಂಘ ಸಂಸ್ಥೆಗಳು, ಗಣೇಶೋತ್ಸವ ಸಮಿತಿಗಳು ಬೃಹತ್ ಗಾತ್ರದ ಗಣಪನಿಗೆ ಮುಂಗಡ ನೀಡಿ ಕಾಯ್ದಿರಿಸುತ್ತಿದ್ದಾರೆ. ಎಲ್ಲಿ ನೋಡಿದರು ಯುವಕರ ಪಡೆ ಬುಕ್ಕಿಂಗ್‌ನಲ್ಲಿ ನಿರತವಾಗಿದೆ. ಸಮಿತಿಗಳ ಪದಾಧಿಕಾರಿಗಳು ತಮ್ಮದೆ ಡಿಜೈನ್ ಇರುವ ವಿಶೇಷ ಗಣಪಗಳ ಆರ್ಡರ್ ಮಾಡುತ್ತಿದ್ದಾರೆ.

  ಬೆಲೆ ಹೆಚ್ಚಳ:   6 ಇಂಚಿನ ಪುಟ್ಟ ಗಣಪನಿಂದ 25 ಅಡಿ ಎತ್ತರದ ಬೃಹತ್ ಗಣಪನ ಮೂರ್ತಿಗಳು ತಯಾರಾಗುತ್ತಿವೆ. ರಸ್ತೆ ಬದಿಯ ಖಾಲಿ ಜಾಗದಲ್ಲಿ ಕಣ್ಮನ ಸೆಳೆಯುತ್ತಿವೆ. ಹಿಂದಿನ ವರ್ಷ 6 ಇಂಚಿನ ಗಣಪನ ಮೂರ್ತಿಯ ಬೆಲೆ 70 ರೂ. ಇದ್ದದ್ದು ಈ ಬಾರಿ 100 ಮುಟ್ಟಿದೆ. ದೊಡ್ಡ ಗಣಪನ ಮೂರ್ತಿಗಳ ದರ ಅಳತೆ, ವಿನ್ಯಾಸ, ಬಣ್ಣಕ್ಕೆ ಅನುಗುಣವಾಗಿ ಏರಿಕೆ ಆಗಿವೆ. 8 ಸಾವಿರದಿಂದ 50 ಸಾವಿರ ತನಕವೂ ಮುಟ್ಟಿದ್ದು, ಸರಾಸರಿ 20ರಷ್ಟು ಬೆಲೆ ಹೆಚ್ಚಳವಾಗಿದೆ. ಗೌರಮ್ಮನ ಮೂರ್ತಿಗಳ ಬೆಲೆಯೂ ಇದಕ್ಕೆ ಹೊರತಾಗಿಲ್ಲ.
 ಭಿನ್ನ - ವಿಭಿನ್ನ:   ಬೆಂಗಳೂರು ಮಾರುಕಟ್ಟೆಗೆ ವಿವಿಧ ಆಕಾರದ, ಅಳತೆಯ ಗಣಪನ ಮೂರ್ತಿಗಳು ಬಂದಿವೆ. ಸ್ಪೈಡರ್ ಮ್ಯಾನ್, ಕಮಾಂಡೋ, ಪುಟ್‌ಬಾಲ್, ಕುಸ್ತಿ ಪೈಲ್ವಾನ್, ಬಸವನ ಮೇಲೆ ನಿಂತಿರುವ, ಶಿವಲಿಂಗವನ್ನಿಡಿದು ನಿಂತಿರುವ, ಶಿವನ ಅವತಾರ, ಸರ್ಪ, ನವಿಲು, ಕಮಲ,  ಗರುಡ, ಹಂಸ, ಬೈಕ್, ಬಸ್ ಮೇಲಿರುವ ಹಾಗೆಯೇ ವಿಶೇಷವಾಗಿ ಕೃಷ್ಣ ಮೀರಾ, ಶ್ರೀರಾಮನ ಅವತಾರದಲ್ಲಿ, ಕ್ರಿಕೆಟ್ ತಂಡದ ಆಟಗಾರ, ಚೋಟಾಭೀಮ್, ಹನುಮ,  ಓಂ ಆಕಾರದಲ್ಲಿ ಹೀಗೆ  ನೂರಾರು ಭಿನ್ನ - ವಿಭಿನ್ನ ವೇಷದ ಗಣಪ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾನೆ.

  ಪರಿಸರ ಸ್ನೇಹಿ:   ಕೆಲವೆಡೆ ನೀರಿನಲ್ಲಿ ಕರಗುವ ಜೇಡಿ ಮಣ್ಣಿನ ಮತ್ತು ಬಣ್ಣ ಇಲ್ಲದ ಮಣ್ಣಿನ ಗಣೇಶನನ್ನು ತಯಾರಿಸುತ್ತಿದ್ದರೇ ಹಲವೆಡೆ ಪ್ಲಾಸ್ಟರ್ ಆಫ್ ಪ್ಯಾರೀಸ್ ಮೂರ್ತಿಗಳೇ ಗೋಚರಿಸುತ್ತಿವೆ. ಪರಿಸರ ಪ್ರೇಮಿ ಮಾರಾಟಗಾರರು ಕೂಡ ವಿಶೇಷ ಕಾಳಜಿವಹಿಸಿದ್ದಾರೆ. ಹಲವರು ಪರಿಸರ ಸ್ನೇಹಿ ಗಣೇಶವನ್ನು ಕೇಳುವುದರಿಂದ ಅವುಗಳನ್ನೂ ಸಿದ್ದಪಡಿಸಿದ್ದಾರೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪರಿಸರ ಸ್ನೇಹಿ ಗಣಪನ ಪೂಜಿಸಿ, ಪರಿಸರ ಉಳಿಸಲು ಶ್ರಮಿಸಬೇಕು ಎನ್ನುವುದು ಪರಿಸರ ಪ್ರೇಮಿಗಳ ಮಾತು.

  ಕಳೆದ ಬಾರಿಗಿಂತ ಗಣೇಶ ಮೂರ್ತಿಗಳ ದರ ಶೇ 20ರಷ್ಟು ದುಬಾರಿಯಾಗಿದೆ. ಆದರೂ ಕೂರಿಸುವುದನ್ನು ಬಿಡುವಂತಿಲ್ಲ. ಮೊದಲೆಲ್ಲ ಎರೆಮಣ್ಣಿನಿಂದ ತಯಾರಿಸಿದ ಮೂರ್ತಿಗಳು ಕುಂಬಾರರಿಂದಲೇ ತಯಾರಾಗುತ್ತಿದ್ದವು. ಸರ್ಕಾರ ನಿಷೇಧಿಸಿದರೂ ಈಗ ಪಿಒಪಿಯಲ್ಲಿಯೇ ಮಾಡುತ್ತಾರೆ. ನೋಡಲು ಸುಂದರವಾಗಿದ್ದು ಭಕ್ತರನ್ನು ಆಕರ್ಷಿಸುವುದರಿಂದ ಖರೀದಿ ಅನಿವಾರ್ಯ, ದುಬಾರಿ ಅಂತ ಗಣೇಶ ಚತುರ್ಥಿ ಬಿಡುವಂತಿಲ್ಲವಲ್ಲ.
 ದಿಲೀಪ್ ಭಂಡಾರಿ, ರಾಜರಾಜೇಶ್ವರಿ ನಗರ.

 ಕೆಲವರು ವಿಶೇಷವಾಗಿ ಮೂರ್ತಿ ಮಾಡಿಕೊಡುವಂತೆ ಆರ್ಡರ್ ಕೊಡುತ್ತಾರೆ. ಸಾರ್ವಜನಿಕ ಗಣೇಶೋತ್ಸವ ಮಾಡುವವರು ಅಡ್ವಾನ್ಸ್ ಕೊಟ್ಟು ಬುಕ್ ಮಾಡಿ ಹೋಗುತ್ತಾರೆ, ಹೀಗಾಗಿ ಅವರ ಗಮನ ಸೆಳೆಯಲು ತಿಂಗಳ ಮೊದಲೇ ಗಣೇಶ ತರುತ್ತೇವೆ. ನಮ್ಮಲ್ಲಿರುವ ಉತ್ತರ ಪ್ರದೇಶ, ಅಸ್ಸಾಂನ ಕಲಾವಿದರೂ ವಿಶೇಷವಾಗಿ ರಚಿಸುತ್ತಾರೆ.
 ನವೀನ್ ಕುಮಾರ್, ಗಣೇಶ ಮಾರಾಟಗಾರ

 ಎಲ್ಲೆಡೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನನ್ನು ನಿಷೇಧಿಸಿದ್ದು, ಪರಿಸರ ಸ್ನೇಹಿಯಾದ ಮಣ್ಣಿನ ಹಾಗೂ ಬಣ್ಣ ರಹಿತ ಗಜಮುಖನನ್ನು ತಯಾರಿಸಬೇಕು. ಗಣೇಶ ಹಬ್ಬವನ್ನು ಪರಿಸರ ಹಬ್ಬವಾಗಿ ಆಚರಿಸಿ. ಬಳಸುವ ಮೂರ್ತಿ ಚಿಕ್ಕದಿರಲಿ ಮತ್ತು ಮಣ್ಣಿನ ಮೂರ್ತಿಯಾಗಿರಲಿ. ವಿಷಕಾರಿ ಬಣ್ಣ ಬಳಸಿದ ಮೂರ್ತಿಗಳನ್ನು ಖರೀದಿಸುವುದು ಬೇಡ. ಒಟ್ಟಿನಲ್ಲಿ ಪರಿಸರ ಮಾಲಿನ್ಯವಾಗದಂತೆ ಗಣೇಶನ ಆಯ್ಕೆಮಾಡಿ.
  ಡಾ. ವಾಮನಾಚಾರ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

 ಬಣ್ಣ ರಹಿತ ಗಣಪನ ತನ್ನಿ...
  ರಾಸಾಯನಿಕಯುಕ್ತ ಗಣೇಶನ ವಿಗ್ರಹ ಬಳಕೆಯ ಬದಲು ಬಣ್ಣ ರಹಿತ ಮಣ್ಣಿನ ವಿಗ್ರಹಗಳನ್ನು ಪೂಜಿಸಬೇಕಾಗಿದೆ. ಪ್ಲಾಸ್ಟಿಕ್ ಮತ್ತು ರಾಸಾಯನಿಕ ಬಣ್ಣಗಳ ಬಳಕೆಯಿಂದಾಗಿ ಪ್ರಕೃತಿ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತಿದೆ. ನೀರು ಕಲುಷಿತವಾಗುತ್ತದೆ. ಭೂಮಿಯ ರಕ್ಷಾ ಕವಚದಂತಿರುವ ಓಜೋನ್ ಪದರ ಸವೆಯುತ್ತಿದೆ. ಹವಾಮಾನದಲ್ಲಿಯೂ ವ್ಯತ್ಯಾಸವಾಗಿದ್ದು, ಪಕ್ಷಿಗಳ ಸಂತತಿ ಕ್ಷೀಣಿಸಿದೆ. ಈ ಬಾರಿಯಾದರೂ ಗಣೇಶ ಹಬ್ಬಕ್ಕೆ ರಾಸಾಯನಿಕ ಹಾಗೂ ಪ್ಲಾಸ್ಟಿಕ್ ಮುಕ್ತ ವಿಗ್ರಹಗಳನ್ನು ಬಳಸಬೇಕಾಗಿದೆ. ಮಣ್ಣಿನ ಗಣಪ ಬಳಸೋಣ, ನೀರಿನ ಮೂಲ ಉಳಿಸೋಣ.

 ಪಾಯಿಂಟ್ಸ್...
 * ರಾಸಾಯನಿಕ ಮಿಶ್ರಿತ ಬಣ್ಣ ಲೇಪಿಸುವುದರಿಂದ ಪರಿಸರಕ್ಕೆ ಧಕ್ಕೆ
 *ಕೆರೆ, ಬಾವಿ, ಕುಂಟೆಗಳಲ್ಲಿ ವಿಸರ್ಜಿಸುವುದರಿಂದ ನೀರು ಮಲಿನ.
 *ಕರಗರ ಗಣೇಶಗಳಿಂದ ಜಲಚರಗಳ ಪ್ರಾಣಕ್ಕೂ ಸಂಚಕಾರ
 *ಚಿಕ್ಕ ಗಾತ್ರದ ಮೂರ್ತಿಗಳ ಪ್ರತಿಷ್ಠಾಪಿಸಿ ಪೂಜಿಸಿ, ವಿಸರ್ಜಿಸಿ.