Saturday, March 2, 2013

Chitradurga : ಊರು ಒಂದೇ , ಕ್ಷೇತ್ರ ಬೇರೆ ಬೇರೆ .. - ಮಾಲತೇಶ್ ಅರಸ್ ಹರ್ತಿಮಠ




 - ಮಾಲತೇಶ್ ಅರಸ್ ಹರ್ತಿಮಠ

 ಚಿತ್ರದುರ್ಗ: ಒಂದೇ ಊರಿಗೆ ಇಲ್ಲಿ ಇಬ್ಬರು ಶಾಸಕರು. ಇಬ್ಬರು ಜಿಲ್ಲಾ ಪಂಚಾಯಿತಿ. ಇಬ್ಬರು ತಾಲೂಕು ಪಂಚಾಯಿತಿ ಸದಸ್ಯರು. ಇಬ್ಬರು ತಹಶೀಲ್ದಾರ್. ಇಬ್ಬರು ತಾಲೂಕು ಪಂಚಾಯಿತಿ ಅಧ್ಯಕ್ಷರು. ಇಬ್ಬರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾ ಧಿಕಾರಿಗಳು. ಇಲ್ಲಿ  ಕೇವಲ ಒಂದು ರಸ್ತೆ ವಿಭಜನೆಯಿಂದಾಗಿ ಊರು ಇಬ್ಬಾಗವಾಗಿದೆ. ಒಂದೇ ಊರಲ್ಲಿದ್ರು ಬೇರೆ ಬೇರೆ ಕ್ಷೇತ್ರಗಳ  ಶಾಸಕರು ಇಲ್ಲಿ ದರ್ಬಾರು ನಡೆಸುತ್ತಾರೆ. ಈ ಗ್ರಾಮಗಳ ಹೆಸರು ಒಂದೇ, ಆದರೆ ಕ್ಷೇತ್ರ ಬೇರೆ ಬೇರೆ. ಇಂತಹ ಕುತೂಹಲ ಹುಟ್ಟಿಸುವ ಗ್ರಾಮಗಳ ಹೆಸರು ಎನ್. ಉಪ್ಪಾರಹಟ್ಟಿ ಹಾಗೂ  ಟಿ. ಉಪ್ಪಾರಹಟ್ಟಿ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ಈ ಹೆಸರಿನ ಎರಡು ಗ್ರಾಮಗಳು ವಿಶೇಷವಾಗಿ ಗಮನಸೆಳೆಯುತ್ತವೆ.

ಮಕ್ಕಳ ಸಾಹಿತಿ, ಹಾಸ್ಯ ಚಕ್ರವರ್ತಿ ಬಿ. ತಿಪ್ಪೇರುದ್ರಪ್ಪ ಒಂದು ನೆನಪು


Chitradurga B. Thipperudrappa.. 
 - Malatesh Urs Hartimath  Vijayavani 27th Feb2013




 -ಮಾಲತೇಶ್ ಅರಸ್ ಹರ್ತಿಮಠ

 *ಹಾಸ್ಯ ಚಕ್ರವರ್ತಿ ಅಸ್ತಂಗತರಾಗಿ ಮೂರು ವರ್ಷ.(27.02.2011)

 * 23 ಕೃತಿಗಳ ರಚಿಸಿದ ಹಿರಿಯ ಸಾಹಿತಿ
 * ರಂಗ ನಿರ್ದೇಶಕ, ಅಂಕಣಕಾರ, ಉಪನ್ಯಾಸಕರು
 *ಜೀವವನ್ನು ಬಿಟ್ಟರು. ಸಾಹಿತ್ಯವನ್ನು, ದೇಹವನ್ನು ಕೊಟ್ಟರು.
 *ನೇತ್ರದಾನ, ದೇಹದಾನದ ಮಾಡಿದ ಅಪರೂಪದ ಸಾಹಿತಿ
 *ದೇಹ ಮಣ್ಣಲ್ಲಿ ಮಣ್ಣಾಗದೇ ವೈದ್ಯಲೋಕದಲ್ಲಿ ಬಳಕೆ
 *ಶಿಷ್ಯರ ಮನದಲ್ಲಿ ಸದಾ ಉಸಿರು
 *ಹಾಸ್ಯ ಮಾಡುವ ಕಲೆ  ಕಲಿಸಿದ ಗುರುವು


  ಬೆಂಗಳೂರು: ಬದುಕಿನುದ್ದಕ್ಕೂ ಹಾಸ್ಯಮಯ, ಸರ್ವರಿಗೂ ನಿತ್ಯ ನಗಿಸುವ ಕಾಯಕ, ಮಕ್ಕಳ ಸಾಹಿತ್ಯ ಮತ್ತು ಹಾಸ್ಯ ಸಾಹಿತ್ಯವೇ ಜೀವ, 50 ವರ್ಷಗಳ ಸುದೀರ್ಘ ಹಾಸ್ಯ ಪಯಣ, ಸಾಹಿತ್ಯದ ಚಟಾಕಿ,  ಕರ್ನಾಟಕದಲ್ಲಿ ಹಾಸ್ಯದ ಹೊನಲನ್ನು ಬಿತ್ತರಿಸಿದ ಚಿತ್ರದುರ್ಗದ ಹಾಸ್ಯ ಚಕ್ರವರ್ತಿ, ಸಾಹಿತಿ ಬಿ. ತಿಪ್ಪೇರುದ್ರಪ್ಪ ನಮ್ಮನಗಲಿ ಇಲ್ಲಿಗೆ ಮೂರು ವರ್ಷ.