Saturday, March 2, 2013

Chitradurga : ಊರು ಒಂದೇ , ಕ್ಷೇತ್ರ ಬೇರೆ ಬೇರೆ .. - ಮಾಲತೇಶ್ ಅರಸ್ ಹರ್ತಿಮಠ




 - ಮಾಲತೇಶ್ ಅರಸ್ ಹರ್ತಿಮಠ

 ಚಿತ್ರದುರ್ಗ: ಒಂದೇ ಊರಿಗೆ ಇಲ್ಲಿ ಇಬ್ಬರು ಶಾಸಕರು. ಇಬ್ಬರು ಜಿಲ್ಲಾ ಪಂಚಾಯಿತಿ. ಇಬ್ಬರು ತಾಲೂಕು ಪಂಚಾಯಿತಿ ಸದಸ್ಯರು. ಇಬ್ಬರು ತಹಶೀಲ್ದಾರ್. ಇಬ್ಬರು ತಾಲೂಕು ಪಂಚಾಯಿತಿ ಅಧ್ಯಕ್ಷರು. ಇಬ್ಬರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾ ಧಿಕಾರಿಗಳು. ಇಲ್ಲಿ  ಕೇವಲ ಒಂದು ರಸ್ತೆ ವಿಭಜನೆಯಿಂದಾಗಿ ಊರು ಇಬ್ಬಾಗವಾಗಿದೆ. ಒಂದೇ ಊರಲ್ಲಿದ್ರು ಬೇರೆ ಬೇರೆ ಕ್ಷೇತ್ರಗಳ  ಶಾಸಕರು ಇಲ್ಲಿ ದರ್ಬಾರು ನಡೆಸುತ್ತಾರೆ. ಈ ಗ್ರಾಮಗಳ ಹೆಸರು ಒಂದೇ, ಆದರೆ ಕ್ಷೇತ್ರ ಬೇರೆ ಬೇರೆ. ಇಂತಹ ಕುತೂಹಲ ಹುಟ್ಟಿಸುವ ಗ್ರಾಮಗಳ ಹೆಸರು ಎನ್. ಉಪ್ಪಾರಹಟ್ಟಿ ಹಾಗೂ  ಟಿ. ಉಪ್ಪಾರಹಟ್ಟಿ.

ಚಿತ್ರದುರ್ಗ ಜಿಲ್ಲೆಯಲ್ಲಿರುವ ಈ ಹೆಸರಿನ ಎರಡು ಗ್ರಾಮಗಳು ವಿಶೇಷವಾಗಿ ಗಮನಸೆಳೆಯುತ್ತವೆ.

No comments:

Post a Comment