Sunday, May 1, 2011

ಚಿತ್ರದುರ್ಗದ ಕೋಟೆ

ಚಿತ್ರದುರ್ಗ ಜಿಲ್ಲೆ, ಶೌರ್ಯ, ತ್ಯಾಗ, ವೀರ ಹೋರಾಟಗಳ ಪ್ರತೀಕ. ಸಂಪ್ರದಾಯವನ್ನು ಮೆರೆದ ಸುಕ್ಷೇತ್ರ. ಗಂಡು ಮೆಟ್ಟಿದ, ವೀರ ನಾರಿಯ ನಾಡು. ಮಠ ಮಾನ್ಯಗಳು. ಪವಾಡ ಪುರುಷರು, ಸಿದ್ದರು ನೆಲೆಸಿದ ಬೀಡು. ಮದಕರಿ ನಾಯಕರಾಳಿದ ಸಿಡಿಲಿಗು ಬೆಚ್ಚದ ಉಕ್ಕಿನ ಏಳುಸುತ್ತಿನಕೋಟೆ ಇರುವ ಸ್ಥಳ. ಪ್ರಾಚೀನ, ಐತಿಹಾಸಿಕ, ಧಾರ್ಮಿಕ, ಪ್ರಾಶಸ್ತ್ಯದ ಸ್ಥಳಗಳಿಂದ ತುಂಬಿರುವ ಚಿತ್ರದುರ್ಗ ಜಿಲ್ಲೆ ಸಾವಿರಾರು ವರ್ಷಗಳ ನಾಗರೀಕತೆಗಳ ತವರು .ಪ್ರಾಚೀನತೆ, ಆಧುನಿಕತೆಗಳ ಸಮ್ಮಿಲನ ಹೊಂದಿರುವ ಸುಂದರ ಪ್ರದೇಶ.

ಜಡೆ ಹುಡುಗಿ..

ಸಂಜೆ ಜಾತ್ರೆಯಲಿ ನಾ ಹೋಗುತ್ತಿದ್ದೆ
ಗೆಳೆಯನ ಹುಡುಕಿ.
ಹಗ್ಗ ದಾಟುವಾಗ ಬಿದ್ದಳು
ನನ್ನ ಮೇಲೆ ಒಂಟಿ ಜಡೆಯ ಹುಡುಗಿ.
ದಾಟಿ ಮುಂದೆ ನಡೆದೆ ನಡೆದೆ
ಒಂದು ಕ್ಷಣ ತಿರುಗಿ ನೋಡಿದೆ.
ಆಕೆಯನ್ನು ನಾ ನೋಡಿರಲಿಲ್ಲ
ಯಾರೆಂದು ತಿಳಿಯಲಿಲ್ಲ
ಮುಖ ಕಾಣದಿದ್ದರೂ
ಒಂಟಿ ಜಡೆ ಮಾತ್ರ ಕಾಣಿಸಿತು.
ಜನ ಜಾತ್ರೆಯಲ್ಲಿ
ರಾಶಿ ರಾಶಿ ಹುಡುಗಿಯರ ತರಲೆ
ಅಷ್ಟೂ ಜನರಲ್ಲಿ ನನಗೆ
ಕಾಣಿಸುತ್ತಿದ್ದವಳು ನೀನೊಬ್ಬಳೇ
ದುರ್ಗದ ಜಾತ್ರೆಯಲಿ ಮತ್ತೆ ನೀ ಕಾಣಿಸಲೇ ಇಲ್ಲ.
ತುಂಬಿದ ತೇರಿನಲಿ ದೇವರೇ ಕಾಣಿಸುತ್ತಿಲ್ಲ.
ನಿನ್ನನೇ ಹುಡುಕುತಿಹದು ನನ್ನ ಉಸಿರೆಲ್ಲಾ.
ಥಟ್ ಅಂತ ಮಾಯವಾದಳು ಹುಡುಗಿ
ಮನೆಗೆ ಬಂದು ಉಸ್ಸಪ್ಪಾ ಎನ್ನುವುದರಲ್ಲಿ
ಲಂಗಾ ಧಾವಣಿ ತೊಟ್ಟು
ಕಣ್ ಮುಂದೆ ಕಂಡಳು ಬೆಡಗಿ.
ಆಕೆ ಬೇರಾರು ಅಲ್ಲ ಪಕ್ಕದ ಮನೆಯ ಮಗಳು.
ಅಂಗನವಾಡಿಯಲಿ ನನ್ನ ಕೆನ್ನೆಗೆ ಮುತ್ತಿಕ್ಕಿದ್ದಳು.
ಈಗ ಮತ್ತೆ ಕಾಡತೊಡಗಿಹಳು.
ನೀ ನನ್ನ ಪ್ರೀತಿಸುತ್ತೀಯಾ ಅಂತ ಕೇಳೋದಿಲ್ಲ.
ಆದರೇ ಬದುಕಿರುವವರೆಗೂ
ನಿನ್ನ ಒಂಟಿ ಜಡೆ ಮರೆಯೋದಿಲ್ಲ.

                             - ಮಾಲತೇಶ್ ಅರಸ್ ಚಿತ್ರದುರ್ಗ. 9480472030