Tuesday, March 4, 2014

Katte Hole Solar Story _ Malathesh Ursಮಾಲತೇಶ್‌ ಅರಸ್‌- ಕತ್ತಲೆಯ ಕತ್ತೆ ಹೊಳೆಯಲ್ಲಿ ಸಂಭ್ರಮದ ಬೆಳಕು...

ಕತ್ತೆಹೊಳೆಯಲ್ಲಿ ಸದಾ ಬೆಳಕು.



-ಮಾಲತೇಶ್‌ ಅರಸ್‌
ಇಂದು ಇಡೀ ರಾಜ್ಯ ಕತ್ತಲೆಯಲ್ಲಿ ಕಾಲ ಕಳೆಯುತ್ತಿದೆ. ಓದುವ ಮಕ್ಕಳು ಸೀಮೆಎಣ್ಣೆ ಬುಡ್ಡಿಯ ಮುಂದೆ ಕುಳಿತಿದ್ದಾರೆ. ರೈತರು ಕಂಗಾಲಾಗಿದ್ದಾರೆ. ಕೈಗಾರಿಕೆಗಳ ಸ್ಥಬ್ತವಾಗುತ್ತಿವೆ. ಮಳೆಬಾರದೆ ಬಿತ್ತಿದ ಬೀಜಗಳೆಲ್ಲ ಸಾವನ್ನಪ್ಪಿವೆ. ನೆಲವಂತೂ ಬಿರುಕು ಬಿಟ್ಟು ಮೌನವಾಗಿದೆ. ಸರ್ಕಾರದ ಅವಿವೇಕತನದಿಂದಾಗಿ ಎಲ್ಲಿ ನೋಡಿದ್ರೂ ಕತ್ತಲೆ ಕತ್ತಲೆ ಕತ್ತಲೆ.  ಆದ್ರೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗುಡಿಸಲು ಗ್ರಾಮ ಕತ್ತೆಹೊಳೆಯಲ್ಲಿ ಮಾತ್ರ ಸದಾ ಬೆಳಕು. ಕೆಇಬಿ ಬಿಲ್ ಕಟ್ಟೊಂಗ್ ಇಲ್ಲ ಆದ್ರೂ ಇಲ್ಲಿ  ಸದಾ ಬೆಳಕಿನ ಬದುಕು.
 ಇಲ್ಲಿ ಒಂದು ಕಾಲದಲ್ಲಿ ಕತ್ತಲ ಸಾಮ್ರಾಜ್ಯ, ಹಾವು ಚೇಳುಗಳ ರಾಜ್ಯಭಾರ, ಚಿರತೆ, ಕರಡಿಗಳ ಚೀತ್ಕಾರ. ಬೆಳಕಿಲ್ಲದೆ ಪರದಾಡಿ ಅಕ್ಷರ ಮರೆತ ಮಕ್ಕಳು.  ಕತ್ತಲೆಯಲ್ಲಿಯೇ ಬದುಕು ಸಾಗಿಸಿದ ನಾರಿಯರು. ಓಟು ಪಡೆದು ಕೈ ಕೊಟ್ಟ ರಾಜಕಾರಣಿಗಳು. ಆದ್ರೆ ಇದೀಗ ಇಂದು ಕತ್ತಲೆ ದೂರಾಗಿದೆ. ಬೆಳಕು ನಳನಳಿಸುತ್ತಿದೆ.
       ಚಿತ್ರದುರ್ಗ ಜಿಲ್ಲೆ ಹಿರಿಯೂರಿನಿಂದ 30 ಕೀಲೊ ಮೀಟರ್ ಕಾಡ ಹಾದಿಯಲ್ಲಿ ಸಾಗಿದರೆ ಸಿಗುವುದೇ ಈ ಕತ್ತೆಹೊಳೆ ಗ್ರಾಮ. ನಿಜಕ್ಕೂ ಇದು ಕತ್ತೆಹೊಳೆ ಅಲ್ಲ ಕತ್ತಲೆಹೊಳೆ ಗ್ರಾಮ ಅನ್ನಬಹುದು. ಸದಾ ಕತ್ತಲೆಯಲ್ಲಿದ್ದ ಗ್ರಾಮದಲ್ಲಿ ಸೀಮೆಎಣ್ಣೆ ಬುಡ್ಡಿಗಳೇ ಲೈಟುಗಳು.  ಆದ್ರೆ ಕತ್ತಲೆಯ ಜಗತ್ತು. ಕತ್ತಲ ಬದುಕ ಕಂಡ ಸೋಲಾರ್ ಸೇಲ್‌ಕೋ ಕಂಪನಿ ಈ ಗ್ರಾಮಕ್ಕೆ ಬೆಳಕು ನೀಡಿದೆ. ಇದೀಗ ಇಲ್ಲಿ   ಬೆಸ್ಕಾಂ ಕಾಟ ಇಲ್ಲದಂತೆ ಬೆಳಕಿನ ಬದುಕು ಇದೆ.
 ಸುಮಾರು 40-50 ವರ್ಷಗಳಿಂದ ಸರ್ಕಾರದ ಪೊಳ್ಳು ಅಶ್ವಾಸನೆಗಳನ್ನು ಕೇಳಿಕೇಳಿ ರೋಸಿ ಹೋಗಿದ್ದ ಮುಗ್ದ ಜನರು ಇಂದು ಸರ್ಕಾರ ಭರವಸೆಗಳನ್ನು ಗಾಳಿಗೆ ತೂರಿ ತಾವೇ ಬೆಳಕು ಕಂಡುಕೊಂಡಿದ್ದಾರೆ. ಕತ್ತೆಹೊಳೆ ಗ್ರಾಮದವರು ತಮ್ಮ ಅರ್ಧ ಜೀವನವನ್ನು ಬರೀ ಕತ್ತಲಲ್ಲೆ ಕಳೆದಿದ್ದಾರೆ. ಇನ್ನು ಸಹಾಯ ಮಾಡುವವರು ಬರೀ ಸುಳ್ಳು ಅಶ್ವಾಸನೆಗಳಲ್ಲೆ ದಶಕಗಳನ್ನು ಕಳೆದಿದ್ದಾರೆ.      
   ಈ ಗ್ರಾಮಕ್ಕೆ ಬೆಳಕನ್ನು ಕೊಡಲು ಮುಂದೆ ಬಂದ ಸೇಲ್ ಕೋ ಕಂಪನಿ ಇವರ ಮನವೊಲಿಸಲು ಹರಸಹಾಸ ಪಡಬೇಕಾಯಿತು. ನಂತರ ಸೂರ್ಯನ ಪ್ರಕಾಶವನ್ನು ಬಡವರಿಗೆ ನೀಡಿದೆ. ಸೋಲಾರ್ ನ ಸೇಲ್ ಕೋ ಕಂಪನಿ ಈ ಗ್ರಾಮಕ್ಕೆ ಬೆಳಕನ್ನು ತರುವ ಪ್ರಯತ್ನಕ್ಕೆ ಮುಂದಾದಾಗ ಹಳ್ಳಿಯ ಜನರು ಸುತಾರಾಂ ಒಪ್ಪಲೆ ಇಲ್ಲ, ನಿತ್ಯಕತ್ತಲೆಯ ಬದುಕನ್ನು ಸೋಲಾರ್ ಲೈಟುಗಳು ದೂರಮಾಡಿವೆ. ಈ ಒಂದು ಪ್ರಯತ್ನದಿಂದ ಪ್ರಗತಿ ಗ್ರಾಮಿಣ ಬ್ಯಾಂಕ್ ಕೂಡ  ಗ್ರಾಮಸ್ಥರಿಗೆ ಸಹಾಯ ಹಸ್ತ ಚಾಚಿದೆ.

ಹಳ್ಳಿಗೆ ಬೆಳಕು ತಂದು ಮಕ್ಕಳ ಭವಿಷ್ಯ ರೂಪಿಸಬೇಕು ಅನ್ನೊ ಬಯಕೆಯಿಂದ ಸುಮಾರು ಮನೆ ಬಾಗಿಲು ತಿರುಗಿದ ಗ್ರಾಮಸ್ಥರು, ಸೋಲಾರ್ ಬಂದ ಮೇಲೆ ನಿಶ್ಚಿಂತೆ ಇಂದ ಇದ್ದಾರೆ. ಸೇಲ್ ಕೋ ಕಂಪನಿ ಯೂ ಬ್ಯಾಂಕಿಗೆ 15 ಪರ್ಸೆಂಟ್ ಮಾರ್ಜಿನ್  ಹಣವನ್ನು ಕಟ್ಟಿ ಸುಮಾರು  ಅರ್ಧ ಊರಿಗೆ ಕರೆಂಟ್ ತರೋ ಪ್ರಯತ್ನ ಮಾಡಿದೆ.
       ಸುಮಾರು 300 ಕ್ಕೂ ಹೆಚ್ಚು ಜನ ಈ ಇರೋ ಗ್ರಾಮದಲ್ಲಿ ಸಾಕಷ್ಟು ಮಕ್ಕಳಿದ್ದಾರೆ. ಆದ್ರೆ ಇಲ್ಲಿ ಇನ್ನು ಕೂಡಾ ಅನೇಕ ಮೂಲ ಭೂತ ಸೌಕರ್ಯಗಳು ಇಲ್ಲ. ಜನತೆ ನಲುಗಿ ಹೋಗಿದ್ದಾರೆ. ರಸ್ತೆ, ನೀರು, ಶಾಲೆ. ಅಂಗನವಾಡಿ ಇಲ್ಲಿ  ಇಲ್ಲವೆ ಇಲ್ಲ. ಈ ಬಗ್ಗೆ  ಓಟು ಹಾಕಿಸಿಕೊಂಡ ಭೂಪರು ಮರೆತು ಹೋಗಿದ್ದಾರೆ ಎಂದು  ಆಕ್ರೋಶ ವ್ಯಕ್ತ ಪಡಿಸುತ್ತಾರೆ  ಕತ್ತೆಹೊಳೆ ಗ್ರಾಮಸ್ಥರು.
ಕೇವಲ ಸಾಪ್ಟ್ ವೇರ್ ಎಂಜಿನಿಯರ್ಗಳ ಸಂಖ್ಯೆ, ಕಂಪನಿಗಳ ಸಂಖ್ಯೆ ಹೆಚ್ಚಿದರೇ ದೊಡ್ಡ ದೊಡ್ಡ ಕಟ್ಟಡಗಳು ನಿರ್ಮಾಣವಾದ  ಮಾತ್ರಕ್ಕೆ ಕರ್ನಾಟಕ ಅಭಿವೃದ್ದಿ ಹೊಂದಿದೆ ಎಂದು ಹೇಳಲಾಗದು,  ಗ್ರಾಮೀಣ  ಪ್ರದೇಶಗಳ ಕಷ್ಟನೂ ಗೊತ್ತಾಗಬೇಕು. ಸರ್ಕಾರ ಕರೆಂಟ್ ತರೋ ನಂಬಿಕೆ ಅಂತೂ ಇಲ್ಲ ಕೊನೆಪಕ್ಷ ಸೋಲಾರ್ ಲೈಟ್ ಗಳನ್ನು ತರುವಲ್ಲಿ ಸರ್ಕಾರ ಸಹಾಯ ಮಾಡುತ್ತ ನೋಡಬೇಕು. ಒಟ್ಟಾರೆ ಇಂಥ ಹಳ್ಳಿಗಳಿಗೆ ಟೈಮ್ ಟೈಮ್ ಗೆ ಓಟು ಕೇಳಲು ಹೋಗುವ ನಾಯಕರು ಕೊನೆ ಪಕ್ಷ ಸಣ್ಣ ಪುಟ್ಟ ಮೂಲಭೂತ ಸೌಕರ್ಯಗಳನ್ನು ಹೊದಗಿಸುವಲ್ಲಿ ವಿಫಲವಾಗಿದೆ. ಆಗಲಿ ರಾಜ್ಯದಲ್ಲಿ ಕತ್ತಲೆಯ ಮೋಡ ಕವಿದಿದ್ದ ಇ ಈ ಗ್ರಾಮದಲ್ಲಿ ಮಾತ್ರ ಕತ್ತಲೆ ದೂರಾಗಿ ಬೆಳಕು ನಳನಳಿಸುತ್ತಿದೆ.


No comments:

Post a Comment