ಕೂಲಿ ಬದುಕಿನ ಸಾಮ್ರಾಜ್ಯ
ನೆತ್ತಿ ಮೇಲೆ ಬಿಸಿಲು ಝಳಪಿಸುತ್ತಿತ್ತು
ಸುತ್ತಲೂ ಮೋಡಗಳು ಆವರಿಸಿದ್ದವು
ಹನಿ ಮಳೆ ಬರುವ ನಿರೀಕ್ಷೆಯೊಂದಿಗೆ
ಸಾಲು ಜನರ ಬದುಕು ಸಾಗುತ್ತಿತ್ತು.
ನಿತ್ಯವೂ ಮುಂಜಾನೆ ಕೂಲಿಗೋಗೋದು
ಇನ್ನೂ ನಿಂತಿಲ್ಲ ನಮ್ಮೂರಿನ ಮನೆಗಳಲಿ
ಜಾತಿ ಭೇದವಿಲ್ಲ, ಎಲ್ಲರಿಗೂ ಕೂಲಿ ತಪ್ಪಲ್ಲ
ಹೆಣ್ಣಾಳುಗಳಿಗಿಷ್ಟು, ಗಂಡಾಳುಗಳಿಗಿಷ್ಟು
ಎಂಬ ಅಲಿಖಿತ ಕಾನೂನು ನಮ್ಮೂರಿನಲಿ
ಬಯಲು ಸೀಮೆಯ ಬೆಂಗಾಡಿನಲಿ
ಬೆವರು ಹರಿಸುವ ಜನರು ನಮ್ಮವರು
ಹಸಿವು ನೀಗಿಸಲು ಕೂಲಿ ಮಾಡುತಲಿ
ನಲಿವಿಗಾಗಿ ನಿತ್ಯವೂ ನಲುಗುವರು.
ನಲುಗಿದವರಿಗೆ ನಗುವಾಗಬೇಕು
ಜೀವಕ್ಕಾಗಿ ಸಾಯುವವರು
ಅಸಂಘಟಿತರು ನಮ್ಮವರು
ತುತ್ತು ಅನ್ನಕ್ಕಾಗಿ ಜೀವಿಸುವವರು
ಕೂಲಿಯಲೇ ಬದುಕಿನ ಸಾಮ್ರಾಜ್ಯ ಕಟ್ಟಿದವರು
ನಲುಗಿದವರಿಗೆ ನಗುವಾಗಬೇಕು ನಾವು....
----------------------------- ------------------------------ -----------------
No comments:
Post a Comment