ಮರಿ ಹಾಕದ ನವಿಲು ಗರಿ...
ಹೈಸ್ಕೂಲು ಓದುವ
ವಯಸ್ಸಲ್ಲಿ
ಮರಿ ಹಾಕುತ್ತದೆಂದು
ಗೆಳತಿ ಕೊಟ್ಟಿದ್ದಳು
ಪುಟ್ಟ ನವಿಲುಗರಿ
ಎಸ್ಸೆಸ್ಸೆಲ್ಸಿ ಪಾಸಾದ್ರು
ಕಾವಿಗೆ ಕೂತ
ನವಿಲುಗರಿ
ಹಾಕಲಿಲ್ಲ ಮರಿ
ಪುಸ್ತಕದೊಳಗಿನ
ನವಿಲುಗರಿ
ದಿನವೂ
ನಲಿದಾಡುತ್ತಿತ್ತು
ಗೆಳತಿಯ ಮಾತ ಕೇಳಿ
ನನ್ನ ಮನಸ್ಸಿನಲ್ಲಿ
ನವಿಲು ಗರಿ
ಹಾಕಿತ್ತು ಮರಿ
ಸದಾ ಕಾಲ
ಓದುವಾಗಲೆಲ್ಲ
ನೆನಪಾಗುತ್ತದೆ
ಹೈಸ್ಕೂಲಿನ ಹೊಳಪು
ನವಿಲುಗಳ
ನೋಡಿದಾಗಲೆಲ್ಲ
ಆಗುತ್ತದೆ
ಗೆಳತಿಯ ನೆನಪು
ಅದೇನೇ ಆಗಲಿ
ಈಗ ನನಗೂ ಮರಿ ಇದೆ
ಅವಳಿಗೂ ಮರಿ ಇದೆ
ನವಿಲುಗರಿ ಮಾತ್ರ
ಹಾಕಲಿಲ್ಲ ಮರಿ
- ಮಾಲತೇಶ್ ಅರಸ್ ಹರ್ತಿಮಠ.
No comments:
Post a Comment