* ರಾಮಗಿರಿ : ಆದಾಯ ಮಾತ್ರ ಬೇಕು ಆದ್ರೆ ಅಭಿವೃದ್ದಿ ಮಾತ್ರ ಬೇಡ ಎಂಬುದಕ್ಕೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ರಾಮಗಿರಿ ಐತಿಹಾಸಿಕ ದೇಗುಲ ಸಾಕ್ಷಿಯಾಗಿದೆ. ನೂರಾರು ವರ್ಷಗಳ ಪುರಾತನ ದೇಗುಲ ಇದೀಗ ಅಧಿಕಾರಿಗಳ ಮತ್ತು ಧರ್ಮದರ್ಶಿಗಳ ಶೀತಲ ಸಮರಕ್ಕೆ ನಲುಗಿ ಹೋಗಿದ್ದು ಭಕ್ತರ ಹಿಡಿಶಾಪಕ್ಕೆ ಕಾರಣವಾಗಿದೆ.
ಕಳೆದ ವರ್ಷ ಸುರಿದ ಧಾರಾಕಾರ ಮಳೆ ಇಲ್ಲಿನ ಶ್ರೀ ಕರಿಸಿದ್ದೇಶ್ವರ ಸ್ವಾಮಿ ದೇಗುಲದ ಪಾಲಿಗೆ ಯಮಪಾಶವಾಗಿದೆ. ದೇವಾಲಯದ ಮುಂದಿರುವ ಕಾಂಪೊಂಡ್ ಸಂರ್ಪೂ ಕುಸಿದು ಬಿದ್ದಿದ್ದು ಸಂಚಾಲಕರು ಮತ್ತು ಧರ್ಮದರ್ಶಿಗಳು ಅತ್ತ ಮುಖ ಮಾಡಿಲ್ಲ. ಭಕ್ತ ರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ. ಪುಕ್ಕಟೆ ಅಧಿಕಾರ ಮಾತ್ರ ಬೇಕು. ಆದ್ರೆ ಅಭಿವೃದ್ದಿ ಯಾರಿಗ್ ಬೇಕು ಎನ್ನುವ ಮಾತು ಇವರದ್ದು. ಸಂಚಾಲಕ ಟಿ ಎನ್ ಪಾಳೇಗಾರ್ ಈ ಬಗ್ಗೆ ಚಕಾರ ಎತ್ತದೇ ಇರೋದು ಹಾಸ್ಯಾಸ್ಪದವಾಗಿದೆ.
ಸಮೀಪವೇ ಭಕ್ತರ ಬಲಿಗೆ ಕಾದಿರುವ ೬೦ ಅಡಿ ಕಂದಕ ಇದ್ದು, ಭಕ್ತರು ನಿತ್ಯ ಜೀವವನ್ನು ಕೈಲಿ ಹಿಡಿದು ಸಾಗುತ್ತಿದ್ದಾರೆ. ಅಲ್ಲದೆ ಇದು ಕುಸಿದಿದ್ದು ಮೆಟ್ಟಿಲುಗಳು ಬಿರುಕುಬಿಟ್ಟಿವೆ. ಅಲ್ಲದೆ ಮೂಲ ದೇಗುಲಕ್ಕೆ ಸಾಕಷ್ಟು ಧಕ್ಕೆಯಾಗಿದೆ. ದೇಗುಲದ ಗೋಡೆ ಬಿರುಕು ಬಿಟ್ಟಿದೆ. ಹಾಸು ಬಂಡೆ ಹಾಳಾಗಿವೆ. ಐತಿಹಾಸಿಕ ದೀಪಸ್ಥಂಭ ಅವನತಿಯತ್ತ ಸಾಗಿದೆ. ದೇಗುಲ ಸಾಕಷ್ಟು ಆದಾಯ ತಂದು ಕೊಡುತ್ತಿದ್ದರೂ ಧರ್ಮದರ್ಶಿಗಳು ಮಾತ್ರ ನಿದ್ದೆಗೆ ಜಾರಿರೋದು ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ಸಾಕಷ್ಟು ಭಕ್ತರು ಮನವಿ ಮಾಡಿಕೊಂಡರು ಅದನ್ನು ಜೀರ್ಣೋದ್ದಾರ ಮಾಡುವ ಕಾರ್ಯ ಮಾತ್ರ ಕನಸಾಗಿಯೇ ಉಳಿದಿದೆ.
ಎತ್ತಗೋದ್ರು ಶಾಸಕರು?: ಸದಾ ಕಾಲ ಮೈದುಂಬಿಕೊಂಡಿರುವ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ‘ ಕೊಟ್ಟೋನ್ ಕೋಡಂಗಿ ಇಸ್ಕೋಂಡೋನ್ ವೀರಭದ್ರ ‘ ಎನ್ನುವಂತೆ ಓಟು ಪಡೆದು ಹೋದೋರು ಇತ್ತ ಬಂದೆ ಇಲ್ಲ . ಬಂದ್ರೆ ಅದು ಬಿಜೆಪಿ ಭಕ್ತರ ಮನೆಗೆ ಬಂದು ಬೋಜನ ಸ್ವೀಕರಿಸಿ ಮಾಯವಾಗೋದು ಅವರ ಹುಟ್ಟುಗುಣವಾಗಿದೆ.
ಒಟ್ಟಾರೆ ಧರ್ಮದರ್ಶಿಗಳು ಮತ್ತು ಅಧಿಕಾರಿಗಳ ಶೀತಲ ಸಮರಕ್ಕೆ ದೇಗುಲ ಬಲಿಯಾಗಿದೆ. ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳು. ತಹಶೀಲ್ದಾರ್ ಇತ್ತ ಬಂದು ಹೋದವರೂ ಮತ್ತೆ ಗಮನ ಹರಿಸಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ದೇಗುಲ ರಕ್ಷಿಸದೇ ಹೋದರೇ ಪುರಾತನ ದೇಗುಲವೊಂದು ಯುಗಾಂತ್ಯ ವಾಗುವುದರಲ್ಲಿ ಸಂದೇಹವಿಲ್ಲ. ಎಲ್ಲಾ ಶಿವಮಯವೂ .ಇಲ್ಲಿ ಎಲ್ಲಾ ಶಿವಮಯವೂ ಎನ್ನುವಂತಾಗಿದೆ ಇದೀಗ ಭಕ್ತರ ಸ್ಥಿತಿ.

No comments:
Post a Comment