Saturday, April 12, 2014

ಸಂಸ್ಕಾರ



 ನುಕುಲದ ಶ್ರೇಯಸ್ಸಿಗಾಗಿ ಸನಾತನ ಧರ್ಮದಲ್ಲಿ ಷೋಡಶ ಸಂಸ್ಕಾರಗಳಉಲ್ಲೇಖವಿದೆ.ವಿವಾಹ, ಗರ್ಭಧಾರಣೆ ಸೇರಿದಂತೆ ಮಾತಾ ಪಿತೃಗಳಿಂದ ಹಾಗೂ ಪುತ್ರಅಥವಾ ಪುತ್ರಿಯಿಂದ ಮೋಕ್ಷಪ್ರಾಪ್ತಿಯವರೆಗೆ ಪ್ರತಿಯೊಂದನ್ನೂ ಈಸಂಸ್ಕಾರದಲ್ಲಿ ಸೇರಿಸಲಾಗಿದೆ. ಬದುಕಿನ ಪ್ರತಿಯೊಂದು ಹಂತವೂ ಸಾತ್ವಿಕಕೃತಿಗಳಾಗಬೇಕೆಂಬ ಉದ್ದೇಶದಿಂದ ವೇದಗಳಲ್ಲಿ ಈ ಸಂಸ್ಕಾರಗಳನ್ನುಹೇಳಲಾಗಿದೆ.
 ಯಾವ ಕ್ರಿಯಾಯೋಗದಿಂದ ಮನುಷ್ಯನಲ್ಲಿ ಸದ್ಗುಣಗಳವಿಕಸನ ಹಾಗೂ ಸಂವರ್ಧನೆ ಮತ್ತು ದೋಷಗಳ ನಿವಾರಣೆಆಗುತ್ತದೆಯೋ ಆ ಕ್ರಿಯೆಗಳಿಗೆ ಸಂಸ್ಕಾರ ಎನ್ನುವರು.

 1.ಗರ್ಭಾಧಾನ,
2.ಪುಂಸವನ,
3.ಸೀಮಂತೋನ್ನಯನ,
4.ಜಾತಕರ್ಮ,
5.ನಾಮಕರಣ,
6.ನಿಷ್ಕೃಮಣ,
7.ಅನ್ನಪ್ರಾಶನ,
 8.ಚೌಲಕರ್ಮ,
9.ಉಪನಯನ,
10ರಿಂದ 13 ಚತುರ್ವೇದ ವ್ರತ,
14.ಕೇಶಾಂತ 1
5. ಸಮಾವರ್ತನ
16.ವಿವಾಹ
 -ಇವುಗಳೇ ಈ ಷೋಡಶ ಸಂಸ್ಕಾರಗಳು. ಇವುಗಳಿಂದ ಜೀವಕ್ಕೆ ಅಪಾರವಾದಉತ್ಕರ್ಷ ಉಂಟಾಗುತ್ತದೆ. ಇವುಗಳಲ್ಲಿ ಕೇಂದ್ರ ಸ್ಥಾನದಲ್ಲಿ ಇರುವವಿವಾಹದ ಉದ್ದೇಶ ಹಾಗೂ ಮಹತ್ವದ ಕುರಿತು ಇಲ್ಲಿ ವಿವರಿಸಲಾಗಿದೆ. ವ್ಯಾಸ ಮಹರ್ಷಿಗಳು ಕಲಿಯುಗದಲ್ಲಿನ ಸಿಉೀ ಪುರುಷರ ಸ್ವಚ್ಛಂದ ನಡವಳಿಕೆಗಳ ಕುರಿತಾಗಿ ಮೊದಲೇ ಬರೆದಿಟ್ಟಿರುವ ಹಾಗೂಈಗ ಪ್ರಚಲಿತವಿರುವ ಶಾಸಉಕ್ಕೆ ವಿರೋಧವಾದ ಆಚರಣೆಗಳತ್ತ ನೋಡದೆ ಶಾಸಾಉಧಾರಿತವಾದ ವಿವಾಹಸಂಸ್ಕಾರದ ಬಗ್ಗೆ ತಿಳಿಯೋಣ.
 ವಿವಾಹ ಶಬ್ದಾರ್ಥ: ವಿವಾಹ ಅಥವಾ ಉದ್ವಾಹ ಎಂದರೆ ವಧುವನ್ನು ಶಾಸೊಉೀಕ್ತವಾಗಿ ತಂದೆಯಮನೆಯಿಂದ ವರನು ಪಾಣಿಗ್ರಹಣ(ಕೈ ಹಿಡಿಯುವುದು) ಉಪಯಮ (ವಧುವನ್ನು ಸ್ವೀಕರಿಸುವುದು)ಹಾಗೂ ಪರಿಣಯ (ವಧುವಿನ ಕೈ ಹಿಡಿದು ಅಗ್ನಿಯ ಸುತ್ತಲೂ ಪ್ರದಕ್ಷಿಣೆ ಹಾಕುವುದು) ಇತ್ಯಾದಿವಿಧಿಗಳಿಂದ ತನ್ನ ಮನೆಗೆ ಕರೆದೊಯ್ಯುವುದು. ಶಾಸಉಗಳಲ್ಲಿ ಮದುವೆ ಅಂದರೆ ಜನ್ಮ ಜನ್ಮಗಳ ಅನುಬಂಧ.ಹೃದಯ ಹೃದಯಗಳ ಪ್ರೇಮಾನುಬಂಧ. ಕುಟುಂಬಗಳನ್ನು, ಊರುಕೇರಿಗಳನ್ನು ಬೆಸೆಯಬಲ್ಲ
 ಸ್ನೇಹಸೇತು. ಜನ್ಮ ಜನ್ಮಾಂತರಗಳ ಕೊಡುಕೊಳ್ಳುವಿಕೆಯ ತೀರುವಳಿಯ ದೃಷ್ಟಿಯಿಂದ ಬ್ರಹ್ಮನುಬ್ರಹ್ಮಗ್ರಂಥಿಯಿಂದ ನಿರ್ಮಿಸಿದ ಬಂಧನ.ಧರ್ಮ ಸಂಪತ್ತಿ-ಪ್ರಜಾ ಸಂಪತ್ತಿ: ಶಿವ-ಶಕ್ತಿ ಸ್ವರೂಪಿಗಳಾಗಿರುವ ಪತಿ ಪತ್ನಿಯರು ಒಂದಾಗಿ ಧರ್ಮದಮೂಲಕ ಅರ್ಥ ಮತ್ತು ಕಾಮ ಎಂಬ ಪುರುಷಾರ್ಥಗಳನ್ನು ಸಾಧಿಸಿ ಮೋಕ್ಷಕ್ಕೆ ಸೋಪಾನ ಕಲ್ಪಿಸುವಪೂರ್ವನಿರ್ಧರಿತ ದೈವೀ ಘಟನೆಯೇ ವಿವಾಹವಾಗಿದೆ. ಪತಿ ಪತ್ನಿಯರ ಸಮಾಗಮದಿಂದ ಧರ್ಮಾಚರಣೆ,ಧರ್ಮರಕ್ಷಣೆ ಹಾಗೂ ರಾಷ್ಟ್ರರಕ್ಷಣೆ-ಇವುಗಳ ಕಾರ್ಯ(ಧರ್ಮ ಸಂಪತ್ತಿ) ಮತ್ತು ಈ ಉದ್ದೇಶಗಳನ್ನು ಸಮರ್ಥವಾಗಿ ಈಡೇರಿಸಬಲ್ಲ ಸುಪ್ರಜೆಗಳನಿರ್ಮಾಣ(ಪ್ರಜಾ ಸಂಪತ್ತಿ) ಉಂಟಾಗುತ್ತವೆ.ಮುಕ್ತಿ ಮಾರ್ಗ: ವಿವಾಹದಲ್ಲಿ ಬಹುತೇಕ ವಿಧಿಗಳು ಇದಕ್ಕೆ ಅವಶ್ಯಕವಾಗಿರುವ ಪ್ರಜನನಕ್ಕೆ ಸಂಬಂಧಪಟ್ಟದ್ದಾಗಿವೆ. ಪುತ್ರಪ್ರಾಪ್ತಿ ಆಯಿತೆಂದರೆ, ಆಪುತ್ರನು ಪೂಜೆ, ಯಜ್ಞ ಇತ್ಯಾದಿಗಳನ್ನು ಮಾಡಿ ದೇವಋಣದಿಂದ ಮತ್ತು ಶ್ರಾದಟಛಿ-ಪಕ್ಷ ಇತ್ಯಾದಿಗಳನ್ನು ಮಾಡಿ ಪಿತೃಋಣದಿಂದ ಮುಕ್ತಿ ಹೊಂದಲು
 ಸಹಾಯ ಮಾಡುತ್ತಾನೆ. ಕನ್ಯೆಯು ಅತ್ತೆಯ ಮನೆಗೆ ಹೋಗುವುದರಿಂದ ಅವಳ ಧಾರ್ಮಿಕ ಕಾರ್ಯಗಳಿಂದ ಆ ಮನೆಯ ಪಿತೃಗಳಿಗೂ ಸದ್ಗತಿಸಿಗುತ್ತದೆ.
 ಸಭ್ಯತೆಯ ವಿಕಸಿತ ಸ್ವರೂಪ: ವಿವಾಹವು ಸಭ್ಯ ನಾಗರಿಕತೆಯ ವಿಕಸಿತ ಸ್ವರೂಪ. ಇಲ್ಲಿ ನವದಂಪತಿಗೆ ಮಾಡುವ ಉಪದೇಶದ ಹಿನ್ನೆಲೆಯಲ್ಲಿ ಅವರಸ್ವಾರ್ಥಪರಾಯಣತೆ ನಷ್ಟವಾಗಬೇಕು ಹಾಗೂ ತಾವು ಸಮಾಜದ ಉಪಕಾರಕ ಅಂಗವಾಗಿದ್ದೇವೆ ಎನ್ನುವ ಭಾವನೆ ಅವರಲ್ಲಿ ಬರಬೇಕೆಂಬ ಉದ್ದೇಶವಿದೆ.ಸ್ವಚ್ಛಂದತೆಗೆ ಅಂಕುಶ: ವಿವಾಹದಿಂದ ಸಿಉೀ-ಪುರುಷರ ಸಮಾಜವಿಘಾತಕ ಸ್ವಚ್ಛಂದತೆ ನಿಯಂತ್ರಿಸಲ್ಪಡುತ್ತದೆ. ಪುರುಷನಿಗೆ ಅವಶ್ಯವಾಗಿರುವನಿಯಂತ್ರಣ ಅವನಿಗೆ ಪತ್ನಿಯಿಂದ ಲಭಿಸುತ್ತದೆ. ಅವಿವಾಹಿತನು ಸಮಾಜದಲ್ಲಿಯೇ ಇದ್ದು ಸಮಾಜದೊಂದಿಗೆ ಸಾಮರಸ್ಯವನ್ನುಸಾಧಿಸಲಾರನು. ಭಾರ್ಯೆ ಬಂದ ನಂತರ ಆತನು ಸಮಾಜದೊಂದಿಗೆ ಏಕರೂಪನಾಗುತ್ತಾನೆ. ವಿವಾಹದಿಂದ ನೆಂಟರೊಂದಿಗೆ ಆತನಸಂಬಂಧಗಳು ಬೆಳೆಯುತ್ತವೆ ಮತ್ತು ಅವನ ಜೀವನವು ವ್ಯಾಪಕವಾಗುತ್ತದೆ. ಕನ್ಯಾದಾನ ವಿಧಿಯಲ್ಲಿ ಧರ್ಮೇ ಚ ಅರ್ಥೇ ಚ ನಾತಿ ಚರಾಮಿಅಂದರೆ ಧರ್ಮ, ಅರ್ಥ ಮತ್ತು ಕಾಮಗಳಲ್ಲಿ ನಾನು ಇವಳನ್ನು ಉಲ್ಲಂಘಿಸಲಾರೆ. ಎಲ್ಲ ಧರ್ಮಕಾರ್ಯಗಳನ್ನು ನಾನು ಇವಳ ಜೊತೆಯಲ್ಲೇಮಾಡುವೆ. ಎಲ್ಲ ಆರ್ಥಿಕ ವ್ಯವಹಾರಗಳನ್ನು ಇವಳ ಅನುಮತಿಯಿಂದ ಮಾಡುವೆ ಮತ್ತು ಇವಳನ್ನು ಬಿಟ್ಟು ಬೇರೆ ಯಾವ ಸಿಉೀಯ ಬಗ್ಗೆಯೂ
 ನನ್ನ ಮನಸ್ಸಿನಲ್ಲೂ ಸಹ ಕಾಮವಾಸನೆ ಬರಲು ಬಿಡಲಾರೆ ಎಂದು ವರನು ಕನ್ಯಾ ಪಿತೃವಿಗೆ ವಾಗ್ದಾನ ಮಾಡಿರುತ್ತಾನೆ.
 ಸೌಭಾಗ್ಯವತಿಯೆನಿಸುವ ವಧು: ವಿವಾಹದ ನಂತರ ಸಿಉೀಯ ಹೆಸರು ಬದಲಾಗುತ್ತದೆ. ಅವಳು ತನ್ನ ಮನೆಯನ್ನು ಬಿಟ್ಟು ಗಂಡನ ಮನೆಯಲ್ಲಿರಲುಹೋಗುತ್ತಾಳೆ. ವಿವಾಹವು ಒಂದರ್ಥದಲ್ಲಿ ಸಿಉೀಯ ಪುನರ್ಜನ್ಮವೇ ಆಗಿರುವುದರಿಂದ ಈ ವಿಧಿಗಳಲ್ಲಿ ಸಿಉೀಗೆ ಪ್ರಾಧಾನ್ಯ ಇರುತ್ತದೆ. ವಿವಾಹದಿಂದ

 ಪತಿ ಪ್ರಾಪ್ತಿಯಾಗುವುದನ್ನು ಸಿಉೀಯು ತನ್ನ ಭಾಗ್ಯವೆಂದು ಪರಿಗಣಿಸುತ್ತಾಳೆ ಮತ್ತು ಸೌಭಾಗ್ಯವತಿ ಎನ್ನಿಸಿಕೊಳ್ಳುತ್ತಾಳೆ.
 (ಮಾಹಿತಿ: ಹದಿನಾರು ಸಂಸ್ಕಾರಗಳು ಮತ್ತು ಕೆಲವು ವಿಧಿಗಳು ಗ್ರಂಥ.)

No comments:

Post a Comment