ಬಂತು ಹೊಸವರುಷ ಭದ್ರ ಬುನಾದಿ ಹಾಕೋಣ ಭವಿಷ್ಯದ ಸೌಧ ನಿರ್ಮಿಸೋಣ ಇಂದಿನಿಂದ ಎಲ್ಲವೂ ಹೊಸತಾಗಿರಲಿ ಬದುಕು ಸುಂದರವಾಗಿರಲಿ ಉತ್ಸಾಹ ಪುಟಿದೇಳಲಿ ಕನಸುಗಳು ಅರಳಲಿ ಹೊಸ ಯೋಜನೆಗಳಿರಲಿ ಹೊಸ ನಿರ್ಧಾರಗಳಿರಲಿ ಹೊಸ ಆಸೆಗಳು ಚಿಗುರಲಿ ಬದುಕು ನೈಜವಾಗಿರಲಿ ಕಾಯಕ ಆದರ್ಶವಾಗಿರಲಿ ಹುಮ್ಮಸ್ಸಿನೊಂದಿಗೆ ಸಂಕಲ್ಪದೊಂದಿಗೆ ಹೊಸ ಗೆಳೆತನವ ಕಟ್ಟೋಣ ಕೋಪ, ಅಸೂಯೆ, ದ್ವೇಷವ ಸುಟ್ಟು ಹಾಕೋಣ ಉತ್ತಮ ಬದುಕಿಗೆ ಮುನ್ನುಡಿ ಬರೆಯೋಣ ಹೊಸ ಗುರಿಯೊಂದಿಗೆ ಜೀವನ ನಡೆಸೋಣ ಹೊಸ ಬದುಕು ಕಟ್ಟೋಣ.... ಹೊಸತಾಗಿ ಬಾಳೋಣ
No comments:
Post a Comment