Wednesday, January 29, 2014

ಸೂಳೆಗೇರಿಯೊಳಗೊಂದು ಸುತ್ತು......



 


ಪೋಲಿ ಸೂರ್ಯ ಅಸ್ತಂಗತ
  ನಾಗುವ ಅರ್ಧ ತಾಸು ಮುಂಚೆ
  ಪೋಲಿ ಹುಡುಗರ ದಂಡು ಸಾಗಿತ್ತು 
  ಜೋಡಿ ರಸ್ತೆಯಲಿ ತರಲೆ ಮಾತುಗಳೊಂದಿಗೆ
  
  'ಕೇಳಿತಿಳಿ ಮಾಡಿಕಲಿ" ಸರ್ಕಾರ
  ಬರೆಸಿದ ಗೋಡೆ ಬರಹ ಕಂಡ
  ಹುಡುಗರ ಗುಂಪು
  ‘ಸೆಕ್ಸು ಅರ್ಥಕ್ಕೆ ಬಳಸಿ, ಸಾಗಿತ್ತು
  ಪರಮ ಪೋಲಿ ಹುಡುಗ ನುಡಿದ
  ‘ನೋಡಿ ಕಲಿ ಮಾಡಿನಲಿ' ಅಂದ
  ಪುಳಕಗೊಂಡ ದಂಡು ನಡೆಯಿತು
  ಕೆಂಪು ದೀಪದ ಕೇರಿಗೆ
  
  ಆಗಿನ್ನು ನಿದ್ದೆಯಿಂದ ಎದ್ದು
  ಮೈ ಮುರಿಯುತ ನಿಂತ ಮೈಗಳು
  ಸ್ನಾನ ಮಾಡಿ ಸೆಂಟು-ಸ್ನೋಗಳ 
  ಹಾಕಿಕೊಂಡ ವಾಸನೆ
  ಮಾರುದ್ದ ಮಲ್ಲಿಗೆ ಮುಡಿದು
  ಬೀದಿಯಲ್ಲಿ ಅಲೆಯುತ್ತಿದ್ದ ಕನ್ಯೆಯರು
  
  ಮುಖಕ್ಕೆ ಕ್ರೀಮು ಹಚ್ಚಿಕೊಳ್ಳುತ್ತಿದ್ದ
  ತುಂಡು ಲಂಗದ ಲಲನೆಯರು
  ಕಣ್ಣಡಿಸಿದರೇ ಕಂಡವು
  ನೇತಾಡುವ ಬ್ರಾಗಳು
  ಜೋತು ಬಿದ್ದ ಮೊಲೆಗಳಿಗೆ
  ಬ್ರಾ ಹಾಕಿ ಬಿಗಿದುಕೊಳ್ಳುತ್ತಿದ್ದ ಮಾನಿನಿಯರು
 
  ತೊಡೆ ತೋರಿಸಿ ಕೊಂಡು
  ಸೀಗರೇಟು ಸೇದುತ್ತಿದ್ದ
  ಮೂವತೈದು ದಾಟಿದ ಹೆಂಗಸರು
  ನಾಟಕ ಶುರುವಾಗುವ ಮುಂಚೆ
  ಹಾಕುವ ಮಿರಿ ಮಿರಿ ಲೈಟಿನಂತೆ 
  ಕಾಣುವ ದಷ್ಟು ಪುಷ್ಟ ಮೊಲೆಗಳು
  ಕೆಲವಾದರೇ
  ಕನ್ನಡಿ ಮುಂದೆ ನಿಂತು ಒಕ್ಕುಳಕ್ಕೆ 
  ಸಿಂಗಾರ ಮಾಡಿಕೊಳ್ಳುತ್ತಿದ್ದ
  ಹದಿನೆಂಟರ ಹರೆಯದ ಕನ್ಯೆಯರು
  ತಿರುವಿ ಹಾಕಿದಂತೆ ಕಂಡ ಹಾಸಿಗೆಯ
  ಹಳೆಯ ಬೆಡಸಿಟ್ಟುಗಳು.
 
  ತಪ್ಪಿಲ್ಲದಿದ್ದರು ನರಳುತ್ತಿದ್ದ
  ಮೆತ್ತನೆಯ ಹಾಸಿಗೆಯ ಮಂಚಗಳು
  ಸಂತಸಪಡಲು ಸಿದ್ದವಾಗಿ ರವಿಕೆಯಲ್ಲಿ
  ಸುಖ ಅನುಭವಿಸುತ್ತಿದ್ದ 
  ನಿರೋದುಗಳು
  
  ಗಿರಾಕಿಗಾಗಿ ಆ ಕಡೆ ಈ ಕಡೆ
  ನೋಡುತ್ತಿದ್ದ ದಾಹದ  ಕಣ್ಣುಗಳು.
  ಹಾಗೆ ನಡೆದ ಹುಡುಗರಿಗೆ
  ಕಂಡದ್ದು
  ಹಾವು- ಏಣಿಯಾಟ
  ಸೋಲುವವರೆಗೆ 
  ಹತ್ತುವುದು - ಇಳಿಯುವುದು

  ಗೆಲುವು ಯಾರಿಗೋ ?
  ಎಂಬ ಪ್ರಶ್ನೆ, ಯಕ್ಷ ಪ್ರಶ್ನೆ
  ರಾತ್ರಿ ಆಟ ಇಷ್ಟಾದರೇ......
  
  ಬೆಳಗ್ಗೆ...
  ಬೊಗಳುವ ನಾಯಿಯ ಸದ್ದು
  ಕೇರಿಯಲಿ
  ಅರೆ ಬೆತ್ತಲೆಯಾಗಿ ಬಿದ್ದಿದ್ದ ದೇಹ
  ಹಾಗೆ ಇತ್ತು ಹಾಸಿಗೆಯಲಿ
  ಕೊರೆ ಬೀಡಿ, ಸೀಗರೇಟು ತುಂಡುಗಳು
  ಬಳಸಿ ಎಸೆದ ಹತ್ತರು ಬಗೆಯ 
  ಕಾಂಡೋಮ್‌ಗಳು ಮೂಲೆಯಲಿ
  
  ಸೂರ್ಯ ಹುಟ್ಟಿದರೇ  ಇವರಿಗೆ
  ಆಗ ನಿದ್ದೆ ಆರಂಭ.
  ಸೊಂಟ ನೋವು, ತೊಡೆ ನೋವು
  ಎಂಬ ಸದ್ದು ಕೆಲವೆಡೆ
  ‘ಅಭ್ಯಾಸ ಆದ್ರೆ ಸರಿ ಹೋಗುತ್ತೆ ಕಣೆ
  ಎನ್ನುವ ಉತ್ತರ ಅವರಿಗೆ
  
  ಮುಡಿದ ಮಲ್ಲಿಗೆಯ ಬತ್ತಿದ ವಾಸನೆ
  ಕಿಟಕಿಯಲ್ಲೆ ನೇತಾಡುವ ಬ್ರಾಗಳು
  ಮಂಚದ ಮೇಲೆ ಬಿದ್ದಿದ್ದ 
  ಬಣ್ಣಗೆಟ್ಟ ಲಂಗಗಳು. 
  ಉದ್ದುದ್ದ ಬಿದ್ದಿದ್ದ ಲಾಡಿಗಳು
  ಚೂಡಿದಾರದ ಪ್ಯಾಂಟುಗಳು
  ಬಾಟಲಿಯಲಿ ಅರ್ಧರ್ಧ
  ಉಳಿದಿದ್ದ ಬ್ರಾಂದಿ, ಬೀರು, ವಿಸ್ಕಿ ವೈನು
  ಈಗ ದಾಹ ನೀಗಿಸುವ ತಾಕತ್ತಿಲ್ಲ. 
  
 
  ಕೆಂಪು ದೀಪದ ಸುತ್ತ
  ಹಗಲು – ರಾತ್ರಿಯ ಪಾಳಿ
  ಬಾಗಿಲು ಹಾಕಿದರೂ ಅದೇ ಸದ್ದು
  ತೆರೆದರೂ ಅದೇ ಕೆಲಸ
  ಒಟ್ಟಿನಲ್ಲಿ ಬಂದವರ ಪಾಲು 
  ಸರಿಯಾಗಿ ಇರುತ್ತದೆ ಅಲ್ಲಿ
  
  ನಿತ್ಯ ಸೂರ್ಯ ಮುಳುಗುವ 
  ಹೊತ್ತಿಗೆ 
  ಮತ್ತದೇ ಕಾರ್ಯ
  ಕನ್ನಡಿಯ ಮುಂದೆ ನಿಂತು
  ಬಣ್ಣ ಹಚ್ಚುವುದು
  ಬ್ರಾ ಹಾಕಿ ಮೊಲೆಗಳ ಬಿಗಿಯುವುದು
  ಸ್ನೋ ಹಾಕಿ ತಿಕ್ಕುವುದು
  ಕಾಂಡೋಮ್ ಕೈಲಿ ಹಿಡಿದು
  ಬರುವ ಗಿರಾಕಿಗೆ ಕಾಯುವುದು
  ಕಾಸು ಪೀಕಿ ದೇಹ ನೀಡಿ
  ತಣ್ಣಗೆ ಮಾಡಿ ಕಳಿಸುವುದು
  ಮುಂಜಾನೆದ್ದು ಸ್ನಾನ ಮಾಡಿ
  ಏನೂ ಆಗಿಲ್ಲದಂತೆ ಮೌನವಿರುವುದು...
                                                       - ಮಾಲತೇಶ್ ಅರಸ್  . ಬೆಂಗಳೂರು 


Monday, January 20, 2014

ಹರ್ತಿಕೋಟೆ ಮಾಲತೇಶ್ ಅರಸ್‌ಗೆ ಕನಕ ಗೌರವ ಸಮ್ಮಾನ.

2013ರ ನ.20 ರಂದು ಹಿರಿಯೂರು ಪಟ್ಟಣದಲ್ಲಿ ನಡೆದ ಕನಕ ಜಯಂತಿಯಂದು ತಾಲೂಕು ಆಡಳಿತದ ವತಿಯಿಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹರ್ತಿಕೋಟೆ ಮಾಲತೇಶ್ ಅರಸ್‌ಗೆ ಕನಕ ಗೌರವ ಸಮ್ಮಾನ.




ಮರಿ ಹಾಕದ ನವಿಲು ಗರಿ... - ಮಾಲತೇಶ್ ಅರಸ್ ಹರ್ತಿಮಠ. ಬೆಂಗಳೂರು

  ಮರಿ ಹಾಕದ ನವಿಲು ಗರಿ...


 ಹೈಸ್ಕೂಲು ಓದುವ
 ವಯಸ್ಸಲ್ಲಿ
 ಮರಿ ಹಾಕುತ್ತದೆಂದು
 ಗೆಳತಿ ಕೊಟ್ಟಿದ್ದಳು 
 ಪುಟ್ಟ ನವಿಲುಗರಿ
 ಎಸ್ಸೆಸ್ಸೆಲ್ಸಿ ಪಾಸಾದ್ರು
 ಕಾವಿಗೆ ಕೂತ
 ನವಿಲುಗರಿ
 ಹಾಕಲಿಲ್ಲ ಮರಿ
 ಪುಸ್ತಕದೊಳಗಿನ
 ನವಿಲುಗರಿ
 ದಿನವೂ 
 ನಲಿದಾಡುತ್ತಿತ್ತು
 ಗೆಳತಿಯ ಮಾತ ಕೇಳಿ
 ನನ್ನ ಮನಸ್ಸಿನಲ್ಲಿ
 ನವಿಲು ಗರಿ
 ಹಾಕಿತ್ತು ಮರಿ
 ಸದಾ ಕಾಲ
 ಓದುವಾಗಲೆಲ್ಲ
 ನೆನಪಾಗುತ್ತದೆ
 ಹೈಸ್ಕೂಲಿನ ಹೊಳಪು
 ನವಿಲುಗಳ 
 ನೋಡಿದಾಗಲೆಲ್ಲ
 ಆಗುತ್ತದೆ
 ಗೆಳತಿಯ ನೆನಪು
 ಅದೇನೇ ಆಗಲಿ
 ಈಗ ನನಗೂ ಮರಿ ಇದೆ
 ಅವಳಿಗೂ ಮರಿ ಇದೆ
 ನವಿಲುಗರಿ ಮಾತ್ರ 
 ಹಾಕಲಿಲ್ಲ ಮರಿ

                            - ಮಾಲತೇಶ್ ಅರಸ್  ಹರ್ತಿಮಠ.  ಬೆಂಗಳೂರು 

Friday, January 17, 2014

ಹರ್ತಿಮಠದ ಗುಡಿಗೌಡತಿಪ್ಪೇಸ್ವಾಮಿ ನಿಧನ_Harthikote Thippeswamy





ಹರ್ತಿಮಠದ ಗುಡಿಗೌಡತಿಪ್ಪೇಸ್ವಾಮಿ ನಿಧನ

 ಹಿರಿಯೂರು: ತಾಲೂಕಿನ ಹರ್ತಿಕೋಟೆ ಗ್ರಾಮದ ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಹರ್ತಿಮಠದ ಗುಡಿಗೌಡರಾದ ಶ್ರೀ ಎಚ್.ಒ. ತಿಪ್ಪೇಸ್ವಾಮಿ(75) ಶುಕ್ರವಾರ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ  ಅವರಿಗೆ ಸಾಕಷ್ಟು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ  ಬೆಳಗ್ಗೆ 10 ಗಂಟೆಗೆ ಸ್ವರ್ಗಸ್ಥರಾದರು. ಪತ್ನಿ ಶಾಂತಮ್ಮ. ಮೂವರು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.  ಶನಿವಾರ ಬೆಳಗ್ಗೆ 10.35ರ ಸುಮಾರಿಗೆ  ಹರ್ತಿಕೋಟೆ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


Wednesday, January 15, 2014

Chitradurga_Malatesh Urs Harthimath Vijayavani Spl Stoyrs

Chitradurga Fort Monkey food Problam story_Malatesh Urs
ಹಸಿವು. ಹಸಿವು.. ಹಸಿವು..

Chitradurga Onion Seeds Story
ಈರುಳ್ಳಿ ಬೆಳೆದರೆ ಕಣ್ಣೀರಿಲ್ಲ...

Election Story
ಉಪ್ಪಾರಟ್ಟಿ : ಊರು ಒಂದೆ.ಕ್ಷೇತ್ರ ಬೇರೆ ಬೇರೆ


Lambani Deepavali Story
ಕಾಳೇರ್‌ಮಾಸ್ ಲಂಬಾಣಿ ಹಟ್ಟಿಯಲ್ಲಿ ಜೊತೆ ಜೊತೆಯಲ್ಲಿ

Dr. Vishnuvardan Story
ವಿಷ್ಣುವರ್ಧನ್..ನೂರೊಂದು ನೆನಪು ಎದೆಯಾಳದಿಂದ


Belagam Suvarna Sowda Adiveshana
ಸದನದಲ್ಲಿ ಕದನ ವೀಕ್ಷಿಸಿದ ಮಕ್ಕಳು


















Friday, January 10, 2014

ಸಾಹಿತಿ ರಮೇಶ್‌ ಹಿರೇಜಂಬೂರು ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ

 ಸಾಹಿತಿ ರಮೇಶ್‌ ಹಿರೇಜಂಬೂರು ಅವರಿಗೆ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ವಿತರಿಸಿದ ಕೇರಳ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಬನ್ನೂರ್ ಮಠ.

ಮಡಿಕೇರಿಯಲ್ಲಿ ದಿನಾಂಕ 2014 ಜನವರಿ 7.8.9 ರಂದು ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಲತೇಶ್ ಅರಸ್ ಮತ್ತು ಶೃತಿ ಎಂ ಅರಸ್ ಹರ್ತಿಕೋಟೆ.

ಮಡಿಕೇರಿಯಲ್ಲಿ ದಿನಾಂಕ 2014 ಜನವರಿ 7.8.9 ರಂದು ನಡೆದ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ
 ಮಾಲತೇಶ್ ಅರಸ್  ಮತ್ತು ಶೃತಿ ಎಂ ಅರಸ್ ಹರ್ತಿಕೋಟೆ.








MADIKERI 80 KANNADA SAHITYA SAMMELANAdalli STUDENTs_ Malatesh Urs



Tuesday, January 7, 2014

Vikhyath Urs with Grand Mam Netravati

Vikhyath Urs with Grand Mam Netravati



Shruthi Malatesh Urs


Shruthi Urs Family


Malathesh Urs Harthikote - Bayaluseeme Barahagaarara Vedike.Chitradurga


ಹರ್ತಿಕೋಟೆ : Rudranna Harthikote. Journalist.

ಹರ್ತಿಕೋಟೆ : Rudranna Harthikote. Journalist. 

ಹರ್ತಿಕೋಟೆ : Rudranna Harthikote. Journalist.

 Rudranna Harthikote. Journalist. 

ಹರ್ತಿಕೋಟೆ: ಕಾಗಿನೆಲೆ ಶ್ರೀಗಳ ಪೂರ್ವಾಶ್ರಮದ ತಂದೆ ಗುರುಸಿದ್ದಯ್ಯ ಒಡೆಯರ್ Harthikote, Gurusiddaiah Wdeyar




14.03.2012 :ಹರ್ತಿಕೋಟೆ: ಕಾಗಿನೆಲೆ ಶ್ರೀಗಳ ಪೂರ್ವಾಶ್ರಮದ ತಂದೆ ಗುರುಸಿದ್ದಯ್ಯ ಒಡೆಯರ್

 ಚಿತ್ರದುರ್ಗ 14 ; ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ ಅವರ ತಂದೆಯವರಾದ  ಚಿತ್ರದುರ್ಗ ಜಿಲ್ಲೆ ಹರ್ತಿಕೋಟೆಯ ಶ್ರೀ ಗುರು ರೇವಣಸಿದ್ದೇಶ್ವರ ಹರ್ತಿಮಠದ ಪೀಠಾಧ್ಯಕ್ಷರಾದ ಶ್ರೀ ಗುರುಸಿದ್ದಯ್ಯ ಒಡೆಯರ್(78) ಇಂದು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ  ಹರ್ತಿಕೋಟೆಯಲ್ಲಿ ವಾಸವಾಗಿದ್ದ ಗುರುಸಿದ್ದಯ್ಯ ಒಡೆಯರ್ ಹಾಲುಮತ ಸಮುದಾಯದ ಗುರುಗಳಾಗಿದ್ದರು. ಶ್ರೀ ರೇವಣಸಿದ್ದೇಶ್ವರ ಹರ್ತಿಮಠದ ಪೀಠಾಧ್ಯಕ್ಷರಾಗಿದ್ದರು.  ಕಾಗಿನೆಲೆ ಶ್ರೀಗಳು ತಾಯಿ ರುದ್ರಾಯಣಮ್ಮ ಅವರನ್ನು 4 ವರ್ಷಗಳ ಹಿಂದಷ್ಟೇ ಕಳೆದುಕೊಂಡಿದ್ದರು. ಇದೀಗ ತಂದೆಯನ್ನು ಕಳೆದುಕೊಂಡಿದ್ದಾರೆ.    ಗುರುಸಿದ್ದಯ್ಯ ಒಡೆಯರ್ ಅವರಿಗೆ ರೇವಯ್ಯ ಒಡೆಯರ್. ಪರಮೇಶ್ವರ ಒಡೆಯರ್. ನಾಗಯ್ಯ ಒಡೆಯರ್. ತಿಪ್ಪೇಸ್ವಾಮಿ ಒಡೆಯರ್. ರಾಜ ರಾಜೇಶ್ವರ ಒಡೆಯರ್  ಆರು ಮಂದಿ ಗಂಡು ಮಕ್ಕಳಿದ್ದು ಕಾಗಿನೆಲೆ ಶ್ರೀಗಳು ನಾಲ್ವನೇ ಮಗನಾಗಿ ಜನಿಸಿದ್ದರು.