14.03.2012 :ಹರ್ತಿಕೋಟೆ: ಕಾಗಿನೆಲೆ ಶ್ರೀಗಳ ಪೂರ್ವಾಶ್ರಮದ ತಂದೆ ಗುರುಸಿದ್ದಯ್ಯ ಒಡೆಯರ್
ಚಿತ್ರದುರ್ಗ 14 ; ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀ ನಿರಂಜನಾನಂದ ಪುರಿ ಮಹಾಸ್ವಾಮೀಜಿ ಅವರ ತಂದೆಯವರಾದ ಚಿತ್ರದುರ್ಗ ಜಿಲ್ಲೆ ಹರ್ತಿಕೋಟೆಯ ಶ್ರೀ ಗುರು ರೇವಣಸಿದ್ದೇಶ್ವರ ಹರ್ತಿಮಠದ ಪೀಠಾಧ್ಯಕ್ಷರಾದ ಶ್ರೀ ಗುರುಸಿದ್ದಯ್ಯ ಒಡೆಯರ್(78) ಇಂದು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಹರ್ತಿಕೋಟೆಯಲ್ಲಿ ವಾಸವಾಗಿದ್ದ ಗುರುಸಿದ್ದಯ್ಯ ಒಡೆಯರ್ ಹಾಲುಮತ ಸಮುದಾಯದ ಗುರುಗಳಾಗಿದ್ದರು. ಶ್ರೀ ರೇವಣಸಿದ್ದೇಶ್ವರ ಹರ್ತಿಮಠದ ಪೀಠಾಧ್ಯಕ್ಷರಾಗಿದ್ದರು. ಕಾಗಿನೆಲೆ ಶ್ರೀಗಳು ತಾಯಿ ರುದ್ರಾಯಣಮ್ಮ ಅವರನ್ನು 4 ವರ್ಷಗಳ ಹಿಂದಷ್ಟೇ ಕಳೆದುಕೊಂಡಿದ್ದರು. ಇದೀಗ ತಂದೆಯನ್ನು ಕಳೆದುಕೊಂಡಿದ್ದಾರೆ. ಗುರುಸಿದ್ದಯ್ಯ ಒಡೆಯರ್ ಅವರಿಗೆ ರೇವಯ್ಯ ಒಡೆಯರ್. ಪರಮೇಶ್ವರ ಒಡೆಯರ್. ನಾಗಯ್ಯ ಒಡೆಯರ್. ತಿಪ್ಪೇಸ್ವಾಮಿ ಒಡೆಯರ್. ರಾಜ ರಾಜೇಶ್ವರ ಒಡೆಯರ್ ಆರು ಮಂದಿ ಗಂಡು ಮಕ್ಕಳಿದ್ದು ಕಾಗಿನೆಲೆ ಶ್ರೀಗಳು ನಾಲ್ವನೇ ಮಗನಾಗಿ ಜನಿಸಿದ್ದರು.
No comments:
Post a Comment