ಹರ್ತಿಮಠದ ಗುಡಿಗೌಡತಿಪ್ಪೇಸ್ವಾಮಿ ನಿಧನ
ಹಿರಿಯೂರು: ತಾಲೂಕಿನ ಹರ್ತಿಕೋಟೆ ಗ್ರಾಮದ ಶ್ರೀಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಹರ್ತಿಮಠದ ಗುಡಿಗೌಡರಾದ ಶ್ರೀ ಎಚ್.ಒ. ತಿಪ್ಪೇಸ್ವಾಮಿ(75) ಶುಕ್ರವಾರ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಸಾಕಷ್ಟು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಬೆಳಗ್ಗೆ 10 ಗಂಟೆಗೆ ಸ್ವರ್ಗಸ್ಥರಾದರು. ಪತ್ನಿ ಶಾಂತಮ್ಮ. ಮೂವರು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಶನಿವಾರ ಬೆಳಗ್ಗೆ 10.35ರ ಸುಮಾರಿಗೆ ಹರ್ತಿಕೋಟೆ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
No comments:
Post a Comment