Wednesday, January 29, 2014

ಸೂಳೆಗೇರಿಯೊಳಗೊಂದು ಸುತ್ತು......



 


ಪೋಲಿ ಸೂರ್ಯ ಅಸ್ತಂಗತ
  ನಾಗುವ ಅರ್ಧ ತಾಸು ಮುಂಚೆ
  ಪೋಲಿ ಹುಡುಗರ ದಂಡು ಸಾಗಿತ್ತು 
  ಜೋಡಿ ರಸ್ತೆಯಲಿ ತರಲೆ ಮಾತುಗಳೊಂದಿಗೆ
  
  'ಕೇಳಿತಿಳಿ ಮಾಡಿಕಲಿ" ಸರ್ಕಾರ
  ಬರೆಸಿದ ಗೋಡೆ ಬರಹ ಕಂಡ
  ಹುಡುಗರ ಗುಂಪು
  ‘ಸೆಕ್ಸು ಅರ್ಥಕ್ಕೆ ಬಳಸಿ, ಸಾಗಿತ್ತು
  ಪರಮ ಪೋಲಿ ಹುಡುಗ ನುಡಿದ
  ‘ನೋಡಿ ಕಲಿ ಮಾಡಿನಲಿ' ಅಂದ
  ಪುಳಕಗೊಂಡ ದಂಡು ನಡೆಯಿತು
  ಕೆಂಪು ದೀಪದ ಕೇರಿಗೆ
  
  ಆಗಿನ್ನು ನಿದ್ದೆಯಿಂದ ಎದ್ದು
  ಮೈ ಮುರಿಯುತ ನಿಂತ ಮೈಗಳು
  ಸ್ನಾನ ಮಾಡಿ ಸೆಂಟು-ಸ್ನೋಗಳ 
  ಹಾಕಿಕೊಂಡ ವಾಸನೆ
  ಮಾರುದ್ದ ಮಲ್ಲಿಗೆ ಮುಡಿದು
  ಬೀದಿಯಲ್ಲಿ ಅಲೆಯುತ್ತಿದ್ದ ಕನ್ಯೆಯರು
  
  ಮುಖಕ್ಕೆ ಕ್ರೀಮು ಹಚ್ಚಿಕೊಳ್ಳುತ್ತಿದ್ದ
  ತುಂಡು ಲಂಗದ ಲಲನೆಯರು
  ಕಣ್ಣಡಿಸಿದರೇ ಕಂಡವು
  ನೇತಾಡುವ ಬ್ರಾಗಳು
  ಜೋತು ಬಿದ್ದ ಮೊಲೆಗಳಿಗೆ
  ಬ್ರಾ ಹಾಕಿ ಬಿಗಿದುಕೊಳ್ಳುತ್ತಿದ್ದ ಮಾನಿನಿಯರು
 
  ತೊಡೆ ತೋರಿಸಿ ಕೊಂಡು
  ಸೀಗರೇಟು ಸೇದುತ್ತಿದ್ದ
  ಮೂವತೈದು ದಾಟಿದ ಹೆಂಗಸರು
  ನಾಟಕ ಶುರುವಾಗುವ ಮುಂಚೆ
  ಹಾಕುವ ಮಿರಿ ಮಿರಿ ಲೈಟಿನಂತೆ 
  ಕಾಣುವ ದಷ್ಟು ಪುಷ್ಟ ಮೊಲೆಗಳು
  ಕೆಲವಾದರೇ
  ಕನ್ನಡಿ ಮುಂದೆ ನಿಂತು ಒಕ್ಕುಳಕ್ಕೆ 
  ಸಿಂಗಾರ ಮಾಡಿಕೊಳ್ಳುತ್ತಿದ್ದ
  ಹದಿನೆಂಟರ ಹರೆಯದ ಕನ್ಯೆಯರು
  ತಿರುವಿ ಹಾಕಿದಂತೆ ಕಂಡ ಹಾಸಿಗೆಯ
  ಹಳೆಯ ಬೆಡಸಿಟ್ಟುಗಳು.
 
  ತಪ್ಪಿಲ್ಲದಿದ್ದರು ನರಳುತ್ತಿದ್ದ
  ಮೆತ್ತನೆಯ ಹಾಸಿಗೆಯ ಮಂಚಗಳು
  ಸಂತಸಪಡಲು ಸಿದ್ದವಾಗಿ ರವಿಕೆಯಲ್ಲಿ
  ಸುಖ ಅನುಭವಿಸುತ್ತಿದ್ದ 
  ನಿರೋದುಗಳು
  
  ಗಿರಾಕಿಗಾಗಿ ಆ ಕಡೆ ಈ ಕಡೆ
  ನೋಡುತ್ತಿದ್ದ ದಾಹದ  ಕಣ್ಣುಗಳು.
  ಹಾಗೆ ನಡೆದ ಹುಡುಗರಿಗೆ
  ಕಂಡದ್ದು
  ಹಾವು- ಏಣಿಯಾಟ
  ಸೋಲುವವರೆಗೆ 
  ಹತ್ತುವುದು - ಇಳಿಯುವುದು

  ಗೆಲುವು ಯಾರಿಗೋ ?
  ಎಂಬ ಪ್ರಶ್ನೆ, ಯಕ್ಷ ಪ್ರಶ್ನೆ
  ರಾತ್ರಿ ಆಟ ಇಷ್ಟಾದರೇ......
  
  ಬೆಳಗ್ಗೆ...
  ಬೊಗಳುವ ನಾಯಿಯ ಸದ್ದು
  ಕೇರಿಯಲಿ
  ಅರೆ ಬೆತ್ತಲೆಯಾಗಿ ಬಿದ್ದಿದ್ದ ದೇಹ
  ಹಾಗೆ ಇತ್ತು ಹಾಸಿಗೆಯಲಿ
  ಕೊರೆ ಬೀಡಿ, ಸೀಗರೇಟು ತುಂಡುಗಳು
  ಬಳಸಿ ಎಸೆದ ಹತ್ತರು ಬಗೆಯ 
  ಕಾಂಡೋಮ್‌ಗಳು ಮೂಲೆಯಲಿ
  
  ಸೂರ್ಯ ಹುಟ್ಟಿದರೇ  ಇವರಿಗೆ
  ಆಗ ನಿದ್ದೆ ಆರಂಭ.
  ಸೊಂಟ ನೋವು, ತೊಡೆ ನೋವು
  ಎಂಬ ಸದ್ದು ಕೆಲವೆಡೆ
  ‘ಅಭ್ಯಾಸ ಆದ್ರೆ ಸರಿ ಹೋಗುತ್ತೆ ಕಣೆ
  ಎನ್ನುವ ಉತ್ತರ ಅವರಿಗೆ
  
  ಮುಡಿದ ಮಲ್ಲಿಗೆಯ ಬತ್ತಿದ ವಾಸನೆ
  ಕಿಟಕಿಯಲ್ಲೆ ನೇತಾಡುವ ಬ್ರಾಗಳು
  ಮಂಚದ ಮೇಲೆ ಬಿದ್ದಿದ್ದ 
  ಬಣ್ಣಗೆಟ್ಟ ಲಂಗಗಳು. 
  ಉದ್ದುದ್ದ ಬಿದ್ದಿದ್ದ ಲಾಡಿಗಳು
  ಚೂಡಿದಾರದ ಪ್ಯಾಂಟುಗಳು
  ಬಾಟಲಿಯಲಿ ಅರ್ಧರ್ಧ
  ಉಳಿದಿದ್ದ ಬ್ರಾಂದಿ, ಬೀರು, ವಿಸ್ಕಿ ವೈನು
  ಈಗ ದಾಹ ನೀಗಿಸುವ ತಾಕತ್ತಿಲ್ಲ. 
  
 
  ಕೆಂಪು ದೀಪದ ಸುತ್ತ
  ಹಗಲು – ರಾತ್ರಿಯ ಪಾಳಿ
  ಬಾಗಿಲು ಹಾಕಿದರೂ ಅದೇ ಸದ್ದು
  ತೆರೆದರೂ ಅದೇ ಕೆಲಸ
  ಒಟ್ಟಿನಲ್ಲಿ ಬಂದವರ ಪಾಲು 
  ಸರಿಯಾಗಿ ಇರುತ್ತದೆ ಅಲ್ಲಿ
  
  ನಿತ್ಯ ಸೂರ್ಯ ಮುಳುಗುವ 
  ಹೊತ್ತಿಗೆ 
  ಮತ್ತದೇ ಕಾರ್ಯ
  ಕನ್ನಡಿಯ ಮುಂದೆ ನಿಂತು
  ಬಣ್ಣ ಹಚ್ಚುವುದು
  ಬ್ರಾ ಹಾಕಿ ಮೊಲೆಗಳ ಬಿಗಿಯುವುದು
  ಸ್ನೋ ಹಾಕಿ ತಿಕ್ಕುವುದು
  ಕಾಂಡೋಮ್ ಕೈಲಿ ಹಿಡಿದು
  ಬರುವ ಗಿರಾಕಿಗೆ ಕಾಯುವುದು
  ಕಾಸು ಪೀಕಿ ದೇಹ ನೀಡಿ
  ತಣ್ಣಗೆ ಮಾಡಿ ಕಳಿಸುವುದು
  ಮುಂಜಾನೆದ್ದು ಸ್ನಾನ ಮಾಡಿ
  ಏನೂ ಆಗಿಲ್ಲದಂತೆ ಮೌನವಿರುವುದು...
                                                       - ಮಾಲತೇಶ್ ಅರಸ್  . ಬೆಂಗಳೂರು 


1 comment: