Thursday, June 12, 2014

ಅಪ್ಪಂದಿರ ದಿನ.....

ನಿನ್ನಂಥ ಅಪ್ಪ ಇಲ್ಲ

1910ರಲ್ಲಿ ವಾಷಿಂಗ್ಟನ್‌ನ ಸೊನಾರಾ ಸ್ಮಾರ್ಟ್ ಡೊಡ್ ಎಂಬಾಕೆ `ವಿಶ್ವ ಅಪ್ಪಂದಿರ ದಿನಾಚರಣೆ'ಯನ್ನು ಜಾರಿಗೆ ತರಲು ಶ್ರಮಿಸಿದಳು. ಸೊನಾರಾಳ ತಾಯಿ ತೀರಿ ಹೋದ ನಂತರ, ಸೇನೆಯಲ್ಲಿದ್ದ ಆಕೆಯ ತಂದೆ ತನ್ನ ಆರೂ ಮಕ್ಕಳನ್ನು ತಾಯಿಯ ಪ್ರೀತಿ- ಮಮತೆಗೆ ಯಾವುದೇ ಕೊರತೆ ಆಗದಂತೆ ಬೆಳೆಸಿದ.
1909ರಲ್ಲಿ `ವಿಶ್ವ ತಾಯಂದಿರ ದಿನ' ಜಾರಿಗೆ ಬಂದ ನಂತರ, ತಂದೆಗೂ ಅಷ್ಟೇ ಮಹತ್ವ ನೀಡಬೇಕೆಂದು ಸೊನಾರಾ ಆರಂಭಿಸಿದ ಹೋರಾಟದ ಫಲವಾಗಿ ಆಕೆಯ ತಂದೆಯ ಹುಟ್ಟಿದ ತಿಂಗಳಾದ ಜೂನ್ ತಿಂಗಳ ಮೂರನೇ ಭಾನುವಾರವನ್ನು `ಅಪ್ಪಂದಿರ ದಿನ'ವಾಗಿ ಆಚರಿಸಲು ನಿರ್ಧರಿಸಲಾಯಿತು.

ಬಹುತೇಕರಿಗೆ ಅಪ್ಪಂದಿರ ದಿನಾಚರಣೆಯ ಇತಿಹಾಸ ಗೊತ್ತಿರಲಾರದು. ಆದರೂ ವಿಜೃಂಭಣೆಯಿಂದ ಅಲ್ಲದಿದ್ದರೂ ಕನಿಷ್ಠ `ಹ್ಯಾಪಿ ಫಾದರ್ಸ್ ಡೇ' ಎಂಬ ಶುಭಾಶಯವನ್ನು ಪ್ರೀತಿಪಾತ್ರನಾದ ನಮ್ಮ ಅಪ್ಪನಿಗೆ ತಿಳಿಸದೇ ಇರಲಾರೆವು. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು!

ಈ ದಿನಾಚರಣೆ ಭಾರತೀಯ ಸಂಸ್ಕೃತಿಯದಲ್ಲವಾದರೂ ನಾವೂ ಈ ವಿಶೇಷ ದಿನವನ್ನು ಆಚರಿಸಿದರೆ ತಪ್ಪಾಗಲಾರದು. ಏಕೆಂದರೆ  ಭಾರತೀಯ ಕುಟುಂಬಗಳಲ್ಲಿ ತಂದೆಯ ಸ್ಥಾನ ಬಹಳ ದೊಡ್ಡದು. ಅದಕ್ಕಾಗೇ ಪಿತೃ ದೇವೋ ಭವ ಎನ್ನುತ್ತಾ, ಹೆತ್ತ ತಾಯಿಯ ನಂತರದ ಸ್ಥಾನವನ್ನು ತಂದೆಗೆ ನೀಡಿರುವುದು. ಕೆಲವು ದಶಕಗಳ ಹಿಂದೆ ಎಂಟು-ಹತ್ತು ಮಕ್ಕಳ ದೊಡ್ಡ ಕುಟುಂಬಗಳು ಇರುತ್ತಿದ್ದವು. ಆ ಅವಿಭಕ್ತ ಕುಟುಂಬಗಳಲ್ಲಿ ತಂದೆ ಎಂದರೆ ಭಯ, ಭಕ್ತಿ, ಗೌರವದ ಭಾವವಿತ್ತು.
ಅಲ್ಲದೆ ಭಯದ ವಾತಾವರಣದಿಂದ ಮಕ್ಕಳು ತಂದೆಯಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುತ್ತಿದ್ದರು. ಅಮ್ಮನ ಮುಖಾಂತರವೇ ಅಪ್ಪನ ಜೊತೆ ಎಲ್ಲ ರೀತಿಯ ವ್ಯವಹಾರ, ಮಾತುಕತೆ ನಡೆಯುತ್ತಿತ್ತು. ಮನೆಯಲ್ಲಿ ತಂದೆಯ ನಿರ್ಧಾರವೇ ಎಂದೆಂದಿಗೂ ಅಂತಿಮ ಆಗಿರುತ್ತಿತ್ತು. ಅಲ್ಲಿ ಮಕ್ಕಳ ಯಾವ ಹಟವೂ ನಡೆಯುತ್ತಿರಲಿಲ್ಲ.

ತಂದೆಯನ್ನು ಅಪ್ಪಯ್ಯ, ಅಪ್ಪಾಜಿ ಎಂದು ಕರೆಯುತ್ತಿದ್ದರೆ, ಪತ್ರ ವ್ಯವಹಾರಗಳಲ್ಲಿ ತೀರ್ಥರೂಪ ಪಾದಚರಣ/ ಪಾದಪದ್ಮಗಳಲ್ಲಿ ಎಂದು ಗೌರವಪೂರ್ವಕವಾಗಿ ಸಂಬೋಧಿಸಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ದೊಡ್ಡ ಕುಟುಂಬಗಳು ಸಣ್ಣವಾಗಿ, ಅವಿಭಕ್ತ ಕುಟುಂಬಗಳು ವಿರಳವಾಗಿ ತಂದೆಯೊಂದಿಗೆ ತಾಯಿಯಷ್ಟೇ ಸಲುಗೆ ಬೆಳೆಯಿತು. ಅಪ್ಪಯ್ಯ ಈಗ ಅಪ್ಪ, ಪಪ್ಪ, ಡ್ಯಾಡಿ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಾನೆ. ಅಪ್ಪ ಹೊರಗೆ ದುಡಿಯುವುದರ ಜೊತೆಗೆ ಮನೆಯ ಒಳಗೂ ಅಮ್ಮನ ಸಹಾಯಕ್ಕೆ ನಿಲ್ಲುತ್ತಾನೆ, ಮಕ್ಕಳ ಪಾಲನೆ-ಪೋಷಣೆಯಲ್ಲಿ ಕೈ ಜೋಡಿಸುತ್ತಾನೆ.

ಮಕ್ಕಳ ನೆನಪಿನಂಗಳದಲ್ಲಿ ಸದಾ ಹಚ್ಚಹಸಿರಾಗಿ ಇರುವವನು ಅಪ್ಪ. ತನ್ನ ನಿದ್ದೆಯನ್ನು ಕಡೆಗಣಿಸಿ ಸುಂದರವಾದ ಕಥಾಲೋಕಕ್ಕೆ ಕರೆದೊಯ್ಯುತ್ತಾ ತನ್ನ ಬಾಹುಗಳಲ್ಲೇ ಮಲಗಿಸುವವ, ಅಮ್ಮನ ವಿರುದ್ಧ ದೂರು ತಂದಾಗ ಸಹನೆಯಿಂದ ಆಲಿಸಿ `ನಾನಿದ್ದೇನೆ ನಿನ್ನ ಜೊತೆ' ಎಂದು ಭರವಸೆ ತುಂಬುವವ, ಇಷ್ಟವಾದುದನ್ನು ಕೇಳುವ ಮೊದಲೇ ಅದನ್ನರಿತು ಕೈಗಿರಿಸುವವ, ಕೆಲವೇ ಮಾರು ದೂರದಲ್ಲಿರುವ ಶಾಲೆಗೆ ದಿನವೂ ತಪ್ಪದೇ ತನ್ನ ಸ್ಕೂಟರ್‌ನಲ್ಲೇ ಕರೆದೊಯ್ಯುವವ.
ಆಟ, ಪಾಠ, ಸಂಗೀತ, ಚಿತ್ರಕಲೆ, ನೃತ್ಯ ಎಲ್ಲ ಕ್ಷೇತ್ರಗಳಲ್ಲೂ ಪ್ರೋತ್ಸಾಹಿಸುವವ, ಸದಾ ಮಕ್ಕಳ ಪರ ವಹಿಸುವವ, ಮಕ್ಕಳ ಚಿಕ್ಕ-ಪುಟ್ಟ ಯಶಸ್ಸುಗಳನ್ನೂ ಹೆಮ್ಮೆಯಿಂದ ಹೇಳಿಕೊಳ್ಳುವವ, ತನ್ನ ಕಚೇರಿಯ ಸಮಸ್ಯೆ ಅಥವಾ ಅನಾರೋಗ್ಯ ಯಾವುದನ್ನೂ ಲೆಕ್ಕಿಸದೆ ಮಕ್ಕಳ ಸುಖ-ಸಂತೋಷಕ್ಕಾಗಿ ಅವಿರತ ಶ್ರಮಿಸುವವ, ದೂರದ ಊರಿಂದ ಬರುವಾಗ ಮರೆಯದೇ ಪ್ರೀತಿಯ ಉಡುಗೊರೆ ಹಿಡಿದೇ ಬರುವವ, ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡುವವ, ತನ್ನ ಸಮಸ್ಯೆಗಳಾವುದೂ ನಮಗೆ ತಾಕದೇ ಇರುವಂತೆ ಎಚ್ಚರ ವಹಿಸುವವ, ಎಂಥ ದುಃಖದ ಸಮಯದಲ್ಲೂ ತನ್ನನ್ನು ತಾನೇ ಸಂತೈಸಿಕೊಂಡು ಅಮ್ಮನನ್ನು ಸಂತೈಸುವವ, ಪರೀಕ್ಷೆ ಸಮೀಪಿಸಿದಾಗ ತಡರಾತ್ರಿ ಕುಳಿತು ಓದುವಾಗ `ಸಾಕು ಮಲಗು' ಎಂದು ಆರೋಗ್ಯದ ಕಡೆಗೆ ನಿಗಾ ವಹಿಸುವವ, ನಮ್ಮ ಒಂಟಿತನವನ್ನು ನೀಗಿಸುವ ಉತ್ತಮ ಗೆಳೆಯನಾಗುವವ.
ಉನ್ನತ ವಿದ್ಯಾಭ್ಯಾಸಕ್ಕೆ ದೂರ ಕಳಿಸಲು ಕಷ್ಟವಾದರೂ ಮಕ್ಕಳ ಭವಿಷ್ಯವನ್ನು ಸುಭದ್ರವಾಗಿರಿಸಲು ನಗುತ್ತಲೇ ಕಳಿಸುವವ, ನೌಕರಿ ದೊರೆತಾಗ ಹೆಮ್ಮೆಯಿಂದ ಬೀಗಿ ಸಿಹಿ ಹಂಚುವವ, ರಜೆಯ ದಿನಗಳನ್ನು ಇನ್ನೆರಡು ದಿನಕ್ಕೆ ಮುಂದೂಡು ಎನ್ನುವವ, ಇವೆಲ್ಲದರ ನಡುವೆಯೂ ಜೀವನದ ಮೌಲ್ಯ, ಶಿಸ್ತುಗಳನ್ನು ಕಲಿಸಲು ಮರೆಯದವ, ಮಕ್ಕಳಿಗೆ ಸೂಕ್ತ ಸಂಗಾತಿಯನ್ನು ಹುಡುಕಿ ಬಾಳನ್ನು ಹಸನಾಗಿಸುವವ, ಮಗಳಾಗಿದ್ದರೆ ತಕ್ಕ ಗಂಡನನ್ನು ಅರಸಿ ಭಾರವಾದ ಮನಸ್ಸಿನಿಂದ ಧಾರೆಯೆರೆದು, ತನ್ನ ಜವಾಬ್ದಾರಿ ಮುಗಿಯಿತು ಎಂದುಕೊಳ್ಳದೇ ತನ್ನ ಪ್ರೀತಿ-ಮಮಕಾರದ ಮಳೆ ಹರಿಸುತ್ತಲೇ ಇರುವವ- ಹೀಗೆ  ಅಪ್ಪ  ಎಂದರೆ ಒಂದು ಭಾವುಕ ಸಂಬಂಧ ಮತ್ತು ಬಿಡಿಸಲಾಗದ ಕೊಂಡಿ. ಇಂತಹ ಅಪ್ಪನನ್ನು ಪಡೆದ ಜನ್ಮ ಸಾರ್ಥಕವೇ ಸರಿ. ಆದರೆ ಅದೆಷ್ಟು ಜನರಿಗುಂಟು ಈ ಭಾಗ್ಯ?

ಜಗತ್ತಿನಲ್ಲಿ ಕೆಟ್ಟ ತಾಯಿ ಇರಲಾರಳು, ಆದರೆ ಕೆಟ್ಟ ತಂದೆ ಇರಬಹುದಂತೆ! ಕುಡುಕ ತಂದೆ, ತಾಯಿಯನ್ನು ಹೊಡೆಯುವ ತಂದೆ, ಮಕ್ಕಳನ್ನು ಕೂಲಿ ಕೆಲಸಕ್ಕೆ ದಬ್ಬುವ ತಂದೆ, ಜೂಜು, ಕಳ್ಳತನ, ದರೋಡೆಗಳಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವವ, ಹುಟ್ಟುವ ಮಗು ಹೆಣ್ಣು ಎನ್ನುವುದು ತಿಳಿಯುತ್ತಲೇ ಭ್ರೂಣ ಹತ್ಯೆ ಮಾಡುವವ, ಹೆಣ್ಣು ಮಗು ಎನ್ನುವ ಕಾರಣಕ್ಕೆ ಮಗಳನ್ನು ತಾತ್ಸಾರದಿಂದ ನೋಡುವವ... ಇಂಥವರ ಮಕ್ಕಳಿಗೆ ತಂದೆ ಎಂದರೆ ಗೌರವ- ಪ್ರೀತಿಯ ಭಾವ ಹೇಗೆ ತಾನೇ ಹುಟ್ಟಲು ಸಾಧ್ಯ? ಅವರಿಗೆ ಅಪ್ಪಂದಿರ ದಿನಾಚರಣೆ ಅರ್ಥಹೀನ ಎನಿಸದೇ ಇರದು.
ಇವರಷ್ಟೇ ಅಲ್ಲದೆ ಹೆಂಡತಿಯೊಂದಿಗೆ ದಿನನಿತ್ಯವೂ ಜಗಳವಾಡುವವರು, 24 ಗಂಟೆ ತಮ್ಮ ಉದ್ಯೋಗ, ವ್ಯವಹಾರಗಳಲ್ಲಿ ತಲ್ಲೀನರಾದವರು, ಹಣವೊಂದಿದ್ದರೆ ಮಕ್ಕಳನ್ನು ಖುಷಿ ಪಡಿಸಬಹುದೆಂಬ ಭ್ರಮೆಯಲ್ಲಿ ಇರುವವರು, ಮಕ್ಕಳು ಏಳುವ ಮೊದಲೇ ಮನೆಯಿಂದ ಹೊರಬಿದ್ದು, ಅವರು ಮಲಗಿದ ನಂತರ ಮನೆ ಸೇರುವವರು, ದಿನದ ಕೆಲ ಸಮಯವನ್ನಾದರೂ ಮಕ್ಕಳಿಗಾಗಿ  ಮೀಸಲಿಡದವರು, ಹೆತ್ತ ಮಕ್ಕಳ ಮೇಲೇ ಲೈಂಗಿಕ ದೌರ್ಜನ್ಯ ಎಸಗುವ ಕಡು ಪಾಪಿಗಳೂ ಇದ್ದಾರೆ. ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧ ಏರ್ಪಡದೇ ಇದ್ದಾಗ ತಂದೆಯು `ಅಪ್ಪ'ನಾಗದೆ ಕೇವಲ `ಜನಕ' ಎನಿಸುತ್ತಾನೆ.

ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಒಳ್ಳೆಯ ಸಂಸ್ಕಾರ ಬೆಳೆಸಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಅಪ್ಪನ ಪಾತ್ರ ಬಹಳ ದೊಡ್ಡದು. ಅಪ್ಪನ ಒಂದು ಬಿಂದು ಪ್ರೀತಿಗಾಗಿ ಹಾತೊರೆಯುವ ಎಷ್ಟೋ ಮಕ್ಕಳಿಗೆ ಅವನ ಪ್ರೀತಿ, ಸ್ನೇಹ, ಭರವಸೆ, ಪ್ರೋತ್ಸಾಹ, ಮಮಕಾರಗಳು ಸಿಗುವಂತಾಗಿ `ನಿನ್ನಂಥ ಅಪ್ಪ ಇಲ್ಲ' ಎಂದು ಎಲ್ಲರೂ ಹೇಳುವಂತಾದರೆ, ಅಪ್ಪಂದಿರ ದಿನಾಚರಣೆ ಸಾರ್ಥಕವಾಗುತ್ತದೆ.    
 

ಪ್ರಮುಖ ರಾಷ್ಟ್ರೀಯ &ಅಂತರಾಷ್ಟ್ರೀಯ ದಿನಾಚರಣೆಗಳು

ಕ್ರ.ಸಂತಿಂಗಳುದಿನಾಂಕಆಚರಣೆ
1ಜನವರಿ01ವಿಶ್ವ ಶಾಂತಿ ದಿನ
202ವಿಶ್ವ ನಗುವಿನ ದಿನ
312ರಾಷ್ಟ್ರೀಯ ಯುವ ದಿನ/
ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ
415ಸೇನಾ ದಿನಾಚರಣೆ
525ಅಂತರಾಷ್ಟ್ರೀಯ ತೆರಿಗೆ ದಿನ
626ಗಣರಾಜ್ಯೋತ್ಸವ ದಿನ
728ಸರ್ವೋಚ್ಚ ನ್ಯಾಯಾಲಯ ದಿನ
830ಸರ್ವೋದಯ ದಿನ/
ಹುತಾತ್ಮರ ದಿನ/
ಕುಷ್ಠರೋಗ ನಿವಾರಣಾ ದಿನ
9ಫೆಬ್ರುವರಿ07ವಿಶ್ವ ಆರೋಗ್ಯ ದಿನಾಚರಣೆ
1021ವಿಶ್ವ ಮಾತೃಭಾಷಾ ದಿನ
1122ಸ್ಕೌಟ್ ಗೈಡ್ ದಿನ
1223ವಿಶ್ವ ಹವಾಮಾನ ದಿನ
1324ರಾಷ್ಟ್ರೀಯ ಸುಂಕದ ದಿನ
1428ರಾಷ್ಟ್ರೀಯ ವಿಜ್ಞಾನ ದಿನಾಚರಣೆ
15ಮಾರ್ಚ್08ಅಂತರಾಷ್ಟ್ರೀಯ ಮಹಿಳಾ ದಿನ
1612ದಂಡಿ ಸತ್ಯಾಗ್ರಹ ದಿನ
1715ವಿಶ್ವ ಬಳಕೆದಾರರ ದಿನ
1816ವಿಶ್ವ ಅಂಗವಿಕಲರ ದಿನ
1918ವಿಶ್ವ ಪರಂಪರೆ ದಿನ
2021ವಿಶ್ವ ಅರಣ್ಯ ದಿನ
2122ವಿಶ್ವ ಜಲ ನಿಧಿ
2223ವಿಶ್ವ ವಾತಾವರಣ ದಿನ
2327ವಿಶ್ವ ರಂಗಭೂಮಿ ದಿನ



24ಏಪ್ರಿಲ್01ವಿಶ್ವ ಅಂಧತ್ವ ದಿನ/ಮೂರ್ಖರ ದಿನ
2502ರಾಷ್ಟ್ರೀಯ ನಾವಿಕರ ದಿನ
2605ರಾಷ್ಟ್ರೀಯ ಸಾಗರ ಯಾನ ದಿನ
2707ವಿಶ್ವ ಆರೋಗ್ಯ ದಿನ
2812ವಿಶ್ವ ಬಾಹ್ಯಾಕಾಶ ದಿನ
2914ಡಾ.ಅಂಬೇಡ್ಕರ್ ಜಯಂತಿ/ಅಗ್ನಿಶಾಮಕ ದಿನ
3018ವಿಶ್ವ ಪರಂಪರೆ/ಸಂಸ್ಕೃತಿ ದಿನ
3122ವಿಶ್ವ ಭೂ ದಿನ
3223ವಿಶ್ವ ಪುಸ್ತಕ ದಿನ
33ಮೇ01ಕಾರ್ಮಿಕರ ದಿನ
34
02ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
35
05ರಾಷ್ಟ್ರೀಯ ಶ್ರಮಿಕರ ದಿನ
36
08ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನ/
ವಿಶ್ವ ಮಾತೆಯರ ದಿನ
37
11ರಾಷ್ಟ್ರೀಯ ತಂತ್ರಜ್ಞಾನ ದಿನ
38
14ವಿಶ್ವ ಮಾತೃ ದಿನ
39
15ಅಂತರಾಷ್ಟ್ರೀಯ ಕುಟುಂಬ ದಿನ
40
17ವಿಶ್ವ ದೂರಸಂಪರ್ಕ ದಿನ
41
21ಭಯೋತ್ಪಾದಕ ವಿರೋಧಿ ದಿನ
42
24ಕಾಮನ್ ವೆಲ್ತ್ ದಿನ
43
31ವಿಶ್ವ ತಂಬಾಕು ತಾಜ್ಯ ದಿನ
44ಜೂನ್05ವಿಶ್ವ ಪರಿಸರ ದಿನ
4512ಬಾಲ ಕಾರ್ಮಿಕ ವಿರೋಧಿ ದಿನ
4614ವಿಶ್ವ ರಕ್ತ ದಾನಿಗಳ ದಿನ
473rd Sundayವಿಶ್ವ ಅಪ್ಪಂದಿರ ದಿನ
4821ವಿಶ್ವ ಮಕ್ಕಳ ಹಕ್ಕು ದಿನ
4926ವಿಶ್ವ ಮಧುಮೇಹಿ ದಿನ/ಔಷಧ ದುರ್ಬಳಕೆ ವಿರೋಧಿ ದಿನ 
ಅಂತರಾಷ್ಟ್ರೀಯ ಮಾದಕ ವಸ್ತು ನಿಷೇಧ ದಿನ
50

ಜುಲೈ01ರಾಷ್ಟ್ರೀಯ ವೈದ್ಯರ ದಿನ
5111ವಿಶ್ವ ಜನಸಂಖ್ಯಾ ದಿನ
52ಅಗಸ್ಟ್06ಹಿರೋಶಿಮಾ ದಿನಾಚರಣೆ
ವಿಶ್ವ ಸ್ನೇಹ ದಿನ
5309ಕ್ವಿಟ್ ಇಂಡಿಯಾ ದಿನಾಚರಣೆ
ನಾಗಾಸಾಕಿ ದಿನಾಚರಣೆ
5415ಸ್ವಾತಂತ್ರ್ಯ ದಿನಾಚರಣೆ
5516ಮಹಿಳಾ ಸಮಾನತೆ ದಿನ
5629ರಾಷ್ಟ್ರೀಯ ಕ್ರೀಡಾ ದಿನ
57ಸೆಪ್ಟೆಂಬರ್05ಶಿಕ್ಷಕರ ದಿನಾಚರಣೆ
5808ವಿಶ್ವ ಸಾಕ್ಷರತಾ ದಿನಾಚರಣೆ
5910ಮಾನವತಾ ಹಕ್ಕುಗಳ ದಿನ
6014ಹಿಂದಿ ದಿನ
6115ಅಭಿಯಂತರರ ದಿನಾಚರಣೆ(ಸರ್.ಎಮ್.ವಿಶ್ವೇಶ್ವರಯ್ಯ ನವರ ಜನ್ಮ ದಿನ)
6216ವಿಶ್ವ ಓಜೋನ್ ದಿನ
6321ಅಂತರಾಷ್ಟ್ರೀಯ ಶಾಂತಿ ದಿನ
6422ರಾಷ್ಟ್ರೀಯ ಗುಲಾಬಿ ದಿನ
6525ವಿಶ್ವ ಹೃದಯ ದಿನ
6627ವಿಶ್ವ ಶ್ರವಣ ಮಾಂದ್ಯರ ದಿನ
ವಿಶ್ವ ಪ್ರವಾಸೋದ್ಯಮ ದಿನ
67ಅಕ್ಟೋಬರ್01ಅಂತರಾಷ್ಟ್ರಿಯ ವೃದ್ಯಾಪ್ಯರ ದಿನ
6802ಗಾಂಧೀ ಜಯಂತಿ
ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ
ವಿಶ್ವ ವಸತಿ ದಿನ
ಅಂತರಾಷ್ಟ್ರೀಯ ಅಹಿಂಸಾ ದಿನ
6903ವಿಶ್ವ ಪಕೃತಿ ದಿನ
7004ವಿಶ್ವ ಪ್ರಾಣಿ ಕಲ್ಯಾಣ ದಿನ
7105ವಿಶ್ವ ಶಿಕ್ಷಕರ ದಿನಾಚರಣೆ
7208ವಾಯು ದಳ ದಿನಾಚರಣೆ
73ಅಕ್ಟೋಬರ್09ವಿಶ್ವ ಅಂಚೆ ದಿನ
7410ವಿಶ್ವ ಮಾನಸಿಕ ಆರೋಗ್ಯ ದಿನ
ಅಂಧರ ಮಾರ್ಗದರ್ಶನ ದಿನ
7512ವಿಶ್ವ ಅರ್ಥರೈಟಾಸ್ ದಿನ
7613ವಿಶ್ವ ಪಾಕೃತಿಕ ವಿಕೋಪ ಮುಂಜಾಗರುಕತಾ ದಿನ
7717ವಿಶ್ವ ಆಹಾರ ದಿನ
7824ವಿಶ್ವ ಸಂಸ್ಥೆ ಯ ದಿನಾಚರಣೆ
7930ವಿಶ್ವ ಉಳಿತಾಯ ದಿನ
8031ರಾಷ್ಟ್ರೀಯ ಏಕತಾ ದಿನ
81ನವೆಂಬರ್01ಕನ್ನಡ ರಾಜ್ಯೋತ್ಸವ ದಿನ
8209ಕಾನೂನು ಸೇವಾದಿನ
8313ರಾಷ್ಟ್ರೀಯ ವಿಪತ್ತು ಕಡಿಮೆಗೊಳಿಸುವ ದಿನ
8414ಮಕ್ಕಳ ದಿನಾಚರಣೆ
8529ಅಂತರಾಷ್ಟ್ರೀಯ ಸಾಮರಸ್ಯ ದಿನಾಚರಣೆ
86ಡಿಸೆಂಬರ್01ವಿಶ್ವ ಏಡ್ಸ್ ದಿನಾಚರಣೆ
8702ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚರಣೆ
8803ವಿಶ್ವ ಅಂಗವಿಕಲರ ದಿನ
8904ನೌಕಾದಳ ಧ್ವಜ ದಿನ
9007ಧ್ವಜ ದಿನಾಚರಣೆ
9110ವಿಶ್ವ ಮಾನವ ಹಕ್ಕುಗಳ ದಿನಾಚರಣೆ
9217ನಿವೃತ್ತಿಗರ ಹಕ್ಕುದಿನ
9323ರೈತ ದಿನ



ವಿಶ್ವ ಅಪ್ಪಂದಿರ ದಿನ.. 15.ಜೂನ್ 2014 ‘ಅಪ್ಪ ಮತ್ತು ನಾನು’ - ಮಾಲತೇಶ್ ಅರಸ್ ಹರ್ತಿಮಠ+ Warld Fathers Day_June 15 Appa Mattu Naanu Malatesh Urs

                                    ವಿಶ್ವ ಅಪ್ಪಂದಿರ ದಿನದ ನಿಮಿತ್ತ..... 15.ಜೂನ್ 2014


 ‘ಅಪ್ಪ ಮತ್ತು ನಾನು’              
                                                                 - ಮಾಲತೇಶ್ ಅರಸ್ ಹರ್ತಿಮಠ

 ಅಪ್ಪನು ಆಡಿ ಕುಣಿದ
 ಕನಸುಗಳ ಕಂಡ ಹುಟ್ಟೂರಿಗೆ
 ನಾನೂ ಅಪ್ಪನ ಕನಸುಗಳ
 ಬೆನ್ನಹತ್ತಿ ಹೊರಟೆ,
 ನನ್ನಜ್ಜಿ ಕುಳಿತಿದ್ದಳು ಒಂಟಿಯಾಗಿ
 ಭಣಗುಡುತ್ತಿದ್ದ ಅಂಗಳದಲ್ಲಿ
 ಮನೆಯ ಮುಂದೆ  ನೀರಿಲ್ಲದೆ
 ಒಣಗಿ ಸೊರಗಿದ್ದ ತುಳಸಿ ಗಿಡ.

 ಜಗುಲಿ ಮೇಲೆ ಮಲಗಿದ್ದ
 ನಮ್ಮಪ್ಪ ಸಾಕಿದ್ದ ನಾಯಿಯ
 ವಂಶದ್ದೆ ಆಗಿದ್ದ ನಾಯಿ ಕುನ್ನಿ,
 ಸುಂದರ ಅಂದವಾಗಿದ್ದು
 ಈಗ ತೆರೆದರೆ ಕಟಿಕಟಿ
 ಸದ್ದಾಗುವ ಗಾಡ್ರೇಜು, ಟ್ರಂಕು.

 ಮಾಳಿಗೆಯ ಮನೆ ಹಳೆಯದಾಗಿ-
 ಸೂರಿನಿಂದ ಇಳಿದ ಮಳೆಯ ನೀರಿನ ಗುರುತು,
 ದನಕರುಗಳು ಮೇವುಂಡು ಮಲಗಿದ್ದ-
 ಜಾಗದಲ್ಲಿ ಉರಿಯುತ್ತಿತ್ತು
 ನನ್ನಜ್ಜಿ ಮುದ್ದೆಗಿಟ್ಟಿದ್ದ ಒಲೆ,
 ಸೀದು ಕರಕಲಾಗಿದ್ದ ಸೌದೆಯ ತುಂಡುಗಳು
 ಮಿಣಿ, ಮಿಣಿ ಉರಿಯುತ್ತಿದ್ದ ಚಿಮಣಿ ಬುಡ್ಡಿ

 ಗೋಡೆಯಲಿ ನೇತಾಡುತ್ತಿದ್ದ
 ಕನ್ನಡಿ! ಅದು ಚೂರಾಗಿ
 ನಾನು ಕಂಡದ್ದು ನಾಲ್ಕಾಗಿ...
 ಮುಸುರೆ ಬಾನಿಯಲ್ಲಿ ಸುರಿದಿದ್ದ ನೆಲಗಡಲೆ
 ಪಕ್ಕದಲ್ಲಿದ್ದವು ಹತ್ತಾರು ತುಂಬಿದ್ದ ಚೀಲಗಳು

 ಅಪ್ಪ ಸ್ಕೂಲಿಗೆ ಕೊಂಡೊಯ್ಯುತ್ತಿದ್ದ
 ಹಳೇ ಸ್ಲೇಟು, ಪಾಠಿ ಚೀಲ,
 ಹಳೆಯ ಬಳಪ ಚೀಲದಲಿ ನೇತಾಡುತ್ತಿದ್ದವು
 ಬಾಲ್ಯದಲ್ಲಿ ಜೋಡಿಸಿಟ್ಟ ಬುಗುರಿ,
 ಚಿನ್ನಿಕೋಲು, ಈಜು ಬುರುಡೆ
 ಕಂಡವು ಲಗೋರಿ ಬಚ್ಚಗಳು.

 ಅಪ್ಪನ  ಹಳೆಯ ಸೀಸುಕಡ್ಡಿ
 ಖಾಲಿಯಾಗಿದ್ದರು ಬಿಸಾಕದೇ
 ಜೋಡಿಸಿಟ್ಟಿದ್ದ ಪೆನ್ನುಗಳು, ಪುಸ್ತಕಗಳು
 ಸುಂದರವಾಗಿ ಬರೆದ  ನೋಟು ಪುಸ್ತಕಗಳು.
 ಅರ್ಧ ಬರೆದ ಡೈರಿಗಳು, ಕಂಡವು
 ಅಡ್ಡ ಗೋಡೆಯ ಮೇಲೆ ಕೈ ಚೀಲದಲಿ.

 ನಡುಮನೆಯ ಕೊನೆಯಲಿ
 ಗೋಣಿ ತಾಟು ಕಟ್ಟಿದ್ದ ಗಂಟು.
 ಪಕ್ಕದಲ್ಲಿದ್ದ ಲಾಟೀನು,
 ಅಪ್ಪನು ಓದುವಾಗ ತೆಗೆಸಿದ್ದ
 ಕಪ್ಪು ಬಿಳುಪು ಚಿತ್ರ
 ಜತೆಗೆ ನನ್ನಜ್ಜ ಪಕ್ಕದಲಿ,
 ನಾನೂ ಕಂಡೆ ಫ್ಯಾಮಿಲಿ
 ಪೋಟೊದಲಿ, ನಮ್ಮಪ್ಪನ ಪಕ್ಕದಲಿ.

 ದೇವರ ಗುಡಿಯಲಿ ಸವೆದಿದ್ದ ವಿಭೂತಿ,
 ಮೈಲಾರದಿಂದ ತಂದ ಹಳೆಯ ಭಂಡಾರ
 ಅದರಲ್ಲಿ ಓಡಾಡುತ್ತಿದ್ದ ದುಂಡು ಹುಳುಗಳು
 ದೇವರಿಗೆ ನಮಿಸುವೆನೆಂದರೆ ದೇವರ ಪೊಟೋ ಇಲ್ಲ.

 ಪಕ್ಕದಲ್ಲಿದ್ದ ಹಳೆಯ ಕುರ್ಚಿ ಏರಿದೆ,
 ಅಟ್ಟದ ಮೂಲೆಯಲಿ ಹಳೆಯದಾದ
 ಅಪ್ಪ ಬಳಸಿದ ಹಿತ್ತಾಳೆಯ ಬಿಂದಿಗೆಗಳು
 ಸೌದೆ ತರುತ್ತಿದ್ದ ಗಟ್ಟಿ ಹಗ್ಗಗಳು,
 ಕಸಮರಿಗೆಗಳು, ಕೂಲಿಗೋಗುತ್ತಿದ್ದ
 ಪಿಕಾಸಿ, ಚಲಿಕೆ, ಕುಡುಗೋಲು,
 ಪಕ್ಕದಲ್ಲಿ ನೇತಾಡುತ್ತಿತ್ತು ನನ್ನಜ್ಜಿ ಗಟ್ಟಿ
 ಮೊಸರು ಕಡೆಯುತ್ತಿದ್ದ ಹಳೆಯ ಕಡಗೋಲು.

 ಅಡುಗೆ ಮನೆಯಲ್ಲಿ ಬೆಂಕಿ ಕಾಣದೆ
 ಹಲವು ವರುಷಗಳಿಂದ ಖಾಲಿಯಾಗಿದ್ದ ಒಲೆ,
 ಪಕ್ಕದಲಿ ತಣ್ಣನೆ ನೀರಿನ ಗಡಿಗೆ,
 ಮಾಳಿಗೆಗೆ ಕಟ್ಟಿದ್ದ ನೇತಾಡುತ್ತಿದ್ದ ನೆಲ್ಲಿಕಾಯಿ,
 ಅದರಲಿ ಮೊಸರು, ರೊಟ್ಟಿ ಚಟ್ನಿ.
 ಒಣಗಿದ್ದ ಉಪ್ಪಿನಕಾಯಿ.
 ‘ಹೇ ಏನೋ ಅದು.. ಕತ್ಲಲ್ಲಿ ಅಜ್ಜಿಯ ಪ್ರಶ್ನೆ’
 ಮಾಂತೇಶಿ... ಧೂಳು ಕಣೋ ಮಗ
 ಹೋಗಬೇಡ ಬಾರೋ’ ಮತ್ತೆ ಅಜ್ಜಿ ಧ್ವನಿ..!

 ಬಚ್ಚಲಗೂಡಿನ ಬಟ್ಟಲಲಿ ತುಂಬಿದ್ದ ಸೌಳು,
 ನೀರಿಲ್ಲದ ತೊಟ್ಟಿ, ಧೂಳಿನಲ್ಲಿದ್ದ ಬಿಂದಿಗೆ,
 ತುಕ್ಕು ಹಿಡಿದ ಬಕೇಟು, ಕಂಚಿನ ಕಡಾಯಿ,
 ಕೊನೆಗೆ ಭಯ ತರಿಸಿದ ನೆನಪು.

 ಅಪ್ಪ ಬರೆದ ಪತ್ರಗಳೇ ಇರಲಿಲ್ಲ,
 ಕೆಲವೊಮ್ಮೆ ಅಪ್ಪನ ಒತ್ತಡಕ್ಕೆ
 ಮಣಿದು, ‘ಹಬ್ಬಕ್ಕೆ ಬಾ’  ಎಂದು
 ಅಜ್ಜಿಗೆ ನಾ ಬರೆದ ಕಾಗದಗಳು ಸಿಕ್ಕವು.
 ಸಂತಸ ಪಟ್ಟೆ, ಹಾಗೇ ಅಲ್ಲೆ ಬಿಟ್ಟೆ.

 ಅರಮನೆಯಂತಹ ಮನೆ
 ಹಳೆಮನೆಯಾದದ್ದು
 ನನ್ನ ಕವಿತೆಗೆ  ವಸ್ತುವಾದದ್ದು.
 ಅಪ್ಪ ಆಡಿದ ಮನೆಯಲ್ಲಿ
 ಈಗ  ನಾನೂ ಆಡುತ್ತಿರುವೆ...
 ಅಪ್ಪನ ನೆನಪುಗಳೊಂದಿಗೆ.
 ಅಜ್ಜಿಯ ಕೈ ತುತ್ತಿನೊಂದಿಗೆ.


                              - ಮಾಲತೇಶ್ ಅರಸ್ ಹರ್ತಿಮಠ. ಬೆಂಗಳೂರು
 9480472030/8884432093








Friday, June 6, 2014

Tuesday, June 3, 2014

Mylara lingeswara Slokam_ Vikhyath Malatesh Urs Harthikote Chitradura


Mylara lingeswara Slokam_ Vikhyath Malatesh Urs Harthikote 1


Mylaralingeswara Swamy Slokam_ Vikhyath Malatesh Urs Harthikote


Hiriyuru Girisha Bed Colleage First batch_Chitradurga Dist_ Malatesh Urs Harthikote Hiriyuru


Hiriyuru Girisha Bed Colleage First batch Students_Chitradurga Dist_ Malatesh Urs Harthikote


Nerale Malatesh Urs Harthimath_ vijayavani


01.10.13 Seniors Day_SangenaHalli Patel Adiveppa _Malatesh Urs Harthimath_ vijayavani


Malatesh Urs Harthimath_ vijayavani


Chitradurga Upparatti Village Election Spl _Malatesh Urs Harthimath_ vijayavani


Dr Vishnuvardan @ Chitradurga_Malatesh Urs Harthimath_ vijayavani


Lambaani Girls _Malatesh Urs Harthimath_ vijayavani


Chicken farm business_ KOLI Sakane Vittavani_Malatesh Urs Harthimath_ vijayavani


Kaaginele kanaka gurupeeta HOSADURGA_ Former Eswaranandapuri Swamiji_Malatesh Urs Harthimath_ vijayavani


Indian flag 27.01.13_Malatesh Urs Harthimath_ vijayavani


GS Shivarudrappa RAMAGIRI ರಾಮಗಿರಿ_ Malatesh Urs Harthimath_ vijayavani ಹೊಳಲ್ಕೆರೆ ತಾಲೂಕಿನ ರಾಮಗಿರಿ


Gowri ganesh habba MORA_Malatesh Urs Harthimath_ vijayavani


Dhakshina Kashi Chitradurga Dist Hiriyur Terumalleswara swamy_Malatesh Urs Harthimath_ vijayavani


Deepavali Danger Pataki_Malatesh Urs Harthimath_ vijayavani


Chitradurga Turuvanuru Gandhiji Temple_Malatesh Urs Harthimath_ vijayavani


Chitradurga Onion _Malatesh Urs Harthimath_ vijayavani


Chitradurga Ex CM Nijalingappa story_Malatesh Urs Harthimath_ vijayavani


Chitradurga B.Tipperudrappa story _Malatesh Urs Harthimath_ vijayavani


Belagavi Adiveshana _Malatesh Urs Harthimath_ vijayavani


Gutka Beeda_Malatesh Urs Harthimath_ vijayavani


Chitradurga Fort Monkeys_Malatesh Urs Harthimath_ vijayavani


25022013_ Chitradurga Upparatti _Malatesh Urs Harthimath_ vijayavani


12.02.13 kallangadi Dubari story_Malatesh Urs Harthimath_ vijayavani


Maatru Bhoomi Yuvaka Sangha Bangalure_janapadada Yuva Nadige_Malatesh Urs Harthimath_ vijayavani