Sunday, January 25, 2015

ಭಂಡಾರದೊಡೆಯನ ಜಾತ್ರೆಗೆ ಬನ್ನಿ/ ಮೈಲಾರ ಜಾತ್ರೆಗೆ ಬನ್ನಿ - MAILARA Jaatre

ಭಂಡಾರದೊಡೆಯನ ಜಾತ್ರೆಗೆ ಬನ್ನಿ/  ಮೈಲಾರ ಜಾತ್ರೆಗೆ ಬನ್ನಿ 

 ಮೈಲಾರ ತುಂಗಭದ್ರ ನದಿ ದಂಡೆಯಲ್ಲಿರುವ ಚಿಕ್ಕ ಗ್ರಾಮ. ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಈ ಗ್ರಾಮ ಐತಿಹಾಸಿಕ ಪ್ರಸಿದ್ಧ ಹಾಗೂ ರಾಜ್ಯದ ಅತಿ ದೊಡ್ಡ ಜಾತ್ರೆ ನಡೆಯುವ ಸ್ಥಳ. ಈ ಊರಿನ ಹೆಸರೇ ಸೂಚಿಸುವಂತೆ ಇಲ್ಲಿನ ದೇವರಾದ ಶ್ರೀ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಲಕ್ಷಾಂತರ ಜನ ಸೇರುವ ಜಾತ್ರಾಮಹೋತ್ಸವ.
 ಕಾರ್ಣಿಕೋತ್ಸವ ಎಂದರೆ ಭವಿಷ್ಯ ಹೇಳುವುದು ಎಂದರ್ಥ. ಕಾರ್ಣಿಕದ ಗೊರವ ಇಡೀ ವರ್ಷದ ಭವಿಷ್ಯವನ್ನು ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಹೇಳುವುದು ಕಾರ್ಣಿಕೋತ್ಸವ. ಈ ಉತ್ಸವ ನಡೆಯುವುದೇ ಒಂದು  ಇತಿಹಾಸ.
 ಮೈಲಾರಲಿಂಗೇಶ್ವರನನ್ನು ‘ಏಳು ಕೋಟಿ’ಎಂದೇ ಕರೆಯುತ್ತಾರೆ. ದೇಶದ ಏಳುಕೋಟಿ ಭಕ್ತರ ಆರಾಧ್ಯ ದೈವ ಎಂಬ ಕಾರಣಕ್ಕೆ ಈ ರೀತಿ ಕರೆಯಲಾಗುತ್ತದೆ. ಜಾತ್ರೆಗೆ ಬಂದವರೆಲ್ಲ ‘ಏಳು ಕೋಟಿ’, ‘ಏಳುಕೋಟಿ’ ಎಂದೇ ಕೂಗುತ್ತಿರುತ್ತಾರೆ.ಇದಕ್ಕೆ ಪುರಾಣದಲ್ಲಿ ಕತೆಯೂ ಇದೆ. ಏಳು ಕೋಟಿ ಮಂತ್ರ ಜಪಿಸಿ ಬ್ರಹ್ಮನಿಂದವರ ಪಡೆದು ಲೋಕಕಂಟಕರಾದ ಅಸುರರನ್ನು ತನ್ನ ಏಳು ಕೋಟಿ ದೇವಗಣದೊಂದಿಗೆ ಸಂಹರಿಸಿದ ಎಂಬುದು ಇಲ್ಲಿರುವ ಕತೆ. ಮೈಲಾರ ಎಂಬುದು ಅತ್ಯಂತ ಪ್ರಾಚೀನವಾದ ಹೆಸರು. ಬ್ರಹ್ಮಾಂಡ ಪುರಾಣದ 18ನೇ ಅಧ್ಯಾಯದಲ್ಲಿ ಈ ಕ್ಷೇತ್ರದವರ್ಣನೆ ಇದೆ. ದ್ವಾಪರಯುಗಕ್ಕೂ ಮುನ್ನವೇ ಮೈಲಾರಲಿಂಗೇಶ್ವರ ಇದ್ದ ಎಂಬುದಕ್ಕೆ ಸಾಕಷ್ಟು ಕತೆಗಳಿವೆ.
  ಲೋಕಕಂಟಕರಾದ ಅಸುರರನ್ನು ಸಂಹಾರ ಮಾಡಲು ಶಿವ ಮೈಲಾರಲಿಂಗನ ವೇಷಧಾರಿಯಾಗಿದ್ದ. ಇದೇ ಸ್ಥಳದಲ್ಲಿ ಸಂಹಾರ ಮಾಡಿದ ಎಂಬುದು ಇಲ್ಲಿನ ಪುರಾಣ. ಹನ್ನೊಂದು ದಿನಗಳ ಯುದ್ಧವನ್ನು ಗೆದ್ದ ದಿನವೇ ಕಾರ್ಣಿಕ. ಇತರೆ ದಿನಗಳ ಪ್ರತೀಕವಾಗಿ ಸರಪಳಿ, ಓಕಳಿ ಇವೆ ಮೊದಲಾದ ಕಾರ್ಯಕ್ರಮಗಳು ಇದ್ದರೂ ಕಾರ್ಣಿಕವೇ ಅತ್ಯಂತ ಪ್ರಮುಖ.
   ಕಪಿಲ ವಂಶಸ್ಥರು :
 ಇಲ್ಲಿನ ಮೈಲಾರಲಿಂಗನ ದೇವಸ್ಥಾನವನ್ನು 1901ರಲ್ಲಿ ನಿರ್ಮಾಣ ಮಾಡಲಾಗಿದೆ. ಕಪಿಲ ವಂಶಸ್ಥರು ಪೂಜಾ ಕಾರ್ಯ ನಡೆಸುತ್ತಿದ್ದಾರೆ. ಕರ್ನಾಟಕದ ಅನೇಕ ಕಡೆಗಳಲ್ಲಿ ಮೈಲಾರಲಿಂಗನ ದೇವಾಲಯಗಳಿವೆ. ಆದರೆ ಹಡಗಲಿ ತಾಲ್ಲೂಕಿನ ಮೈಲಾರವೇ ಮೂಲ ಕ್ಷೇತ್ರ. ಕರ್ನಾಟಕದಲ್ಲಿ ಮಾತ್ರವಲ್ಲದೇ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಿಂದ ಭಕ್ತವೃಂದವೇ ಇಲ್ಲಿಗೆ ಹರಿದುಬರುತ್ತದೆ.
 ಜಾತ್ಯಾತೀತ ಸ್ವರ್ಗ:
 ಜಾತಿ, ಮತ, ಪಂಥ ಮೀರಿದ ಜಾತ್ಯಾತೀತ ದೇವರು ಮೈಲಾರಲಿಂಗ, ಏಕೆಂದರೆ ಇಲ್ಲಿಗೆ ಎಲ್ಲಾ ಜಾತಿಯವರು ಭಕ್ತರೇ. ಪ್ರತಿ ವರ್ಷ ಫೆಬ್ರವರಿಯಲ್ಲಿ ಬರುವ ಭರತ ಹುಣ್ಣಿಮೆಯ ಸಂದರ್ಭದಲ್ಲಿ ಮೈಲಾರದಲ್ಲಿ ದೊಡ್ಡ ಜಾತ್ರೆಯೆ ನಡೆಯುತ್ತದೆ. ಹುಣ್ಣಿಮೆಯ ಎರಡನೇ ದಿನಕ್ಕೆ ಕಾರ್ಣಿಕೋತ್ಸವ ನಡೆಯುತ್ತದೆ. ನಾಡಿನಾದ್ಯಂತ ಗೊರವರಿದ್ದು  ಕಾರ್ಣಿಕ ಹೇಳುವುದು ಮಾತ್ರ ಒಂದೇ ಕುಟುಂಬಕ್ಕೆ ಹೇಳಿದ ಗೊರವ. ಆತ ಹನ್ನೊಂದು ದಿನಗಳ ಕಾಲ ಉಪವಾಸ ಕುಳಿತಿರುತ್ತಾನೆ. ಮೈಲಾರದ ದೇವಾಲಯದಿಂದ ಸುಮಾರು ಒಂದೂವರೆ ಕಿ.ಮೀ.ಗಳಷ್ಟು ದೂರದಲ್ಲಿರುವ ಡೆಂಕನ ಮರಡಿ ಎಂಬಲ್ಲಿ ಇರುವ ಮಂದಿರದಲ್ಲಿ ಈತಉಪವಾಸ ಇರುತ್ತಾನೆ. ಕಾರ್ಣಿಕದ ದಿವಸ ಮಧ್ಯಾಹ್ನ ದೇವಾಲಯದಿಂದಸ್ವಾಮೀಜಿಗಳು ಮತ್ತು ದೇವರ ಮೆರವಣಿಗೆ ಹೊರಡುತ್ತದೆ. ಮರಡಿಗೆ ಹೋಗಿ ಮೈಲಾರನಭಕ್ತರಾದ ಗೊರವರು ನಡೆಸುವ ದೋಣಿಸೇವೆ ಪ್ರಮುಖವಾದದ್ದು.
 ದೋಣಿಸೇವೆ:
 ಪ್ರತಿಯೊಬ್ಬ ಭಕ್ತರು ದೋಣಿ ತುಂಬಿಸುವುದು ಅದನ್ನು ಗೊರವರು ಪ್ರಾಣಿಗಳಂತೆ ತಿನ್ನುವುದು ದೋಣಿಸೇವೆ. ಕಂಬಳಿಯ ಅಂಗಿ ತೊಟ್ಟು, ಒಂದು ಕೈಯಲ್ಲಿ ಕೊಳಲು ಹಿಡಿದು, ಡಮರುಗ ಬಾರಿಸುತ್ತ ಹೆಗಲ ಮೇಲೆ ಮರದ ಅಥವಾ ಹಿತ್ತಾಳೆಯ ದೋಣಿಯಾಕಾರದ ಪಾತ್ರೆ ಹಾಕಿಕೊಂಡು ಗೊರವರು ಊರೂರು ಸುತ್ತುತ್ತಾರೆ.ಆದರೆ ಜಾತ್ರೆಯ ಸಂದರ್ಭದಲ್ಲಿ ಮಾತ್ರ ಮೈಲಾರಕ್ಕೆ ಬರುತ್ತಾರೆ. ಭಕ್ತರು ಇವರನ್ನು ಕರೆದು ಎಡೆಯಾಕುತ್ತಾರೆ. ದೋಣಿಯನ್ನು ಕಂಬಳಿಯ ಮೇಲೆ ಇಟ್ಟು ಅದಕ್ಕೆ ಬಾಳೆಹಣ್ಣು, ಹಾಲು, ತುಪ್ಪ, ದೋಸೆ, ಒಬ್ಬಟ್ಟು ಹೀಗೆ ತಲೆವಾರಿ ತಿಂಡಿಗಳನ್ನು ಅದರಲ್ಲಿ ಬೆರೆಸಲಾಗುತ್ತದೆ. ಗೊರವರು ನಾಲ್ಕೈದು ಜನ ಪ್ರಾಣಿಗಳಂತೆ ಆಟವಾಡುತ್ತ, ನಂತರ ತಮ್ಮಲ್ಲೇ ಒಬ್ಬರನ್ನು ಸತ್ತು ಹೋದವನೆಂದು ಕಂಬಳಿಯಿಂದ ಮುಚ್ಚುತ್ತಾರೆ. ನಂತರ ಭಕ್ತರಿಂದ ಆತನ ತಿಥಿ ಮಾಡುವುದಾಗಿ ಹಣ ಸಂಗ್ರಹಿಸುತ್ತಾರೆ. ಅನಂತರ ಆತನನ್ನು ದೇವರಭಂಡಾರ ಹಾಕಿ ಎಬ್ಬಿಸಿ ದೋಣಿಯಲ್ಲಿ ಪ್ರಾಣಿಯಂತೆತಿನ್ನುತ್ತಾರೆ. ಈ ಜಾನಪದ ಉತ್ಸವ ನೋಡಲು ಆಕರ್ಷಕವಾಗಿರುತ್ತದೆ.

 ಫೆ. 5 .2015 ಕ್ಕೆ ಕಾರ್ಣಿಕೋತ್ಸವ
 ಮೈಲಾರಲಿಂಗೇಶ್ವರನನ್ನು ‘ಏಳು ಕೋಟಿ’ ಎಂದೇ ಕರೆಯುತ್ತಾರೆ. ದೇಶದ ಏಳು ಕೋಟಿ ಭಕ್ತರ ಆರಾಧ್ಯ ದೈವ ಎಂಬ ಕಾರಣಕ್ಕೆ ಈ
 ರೀತಿ ಕರೆಯಲಾಗುತ್ತದೆ. ಜಾತ್ರೆಗೆ ಬಂದವರೆಲ್ಲ ‘ಏಳು ಕೋಟಿ’,‘ಏಳು ಕೋಟಿ’ ಎಂದೇ ಕೂಗುತ್ತಿರುತ್ತಾರೆ. ಇದಕ್ಕೆ ಪುರಾಣದಲ್ಲಿ
 ಕತೆಯೂ ಇದೆ. ಏಳು ಕೋಟಿ ಮಂತ್ರ ಜಪಿಸಿ ಬ್ರಹ್ಮನಿಂದ ವರಪಡೆದು ಲೋಕಕಂಟಕರಾದ ಅಸುರರನ್ನು ತನ್ನ ಏಳು ಕೋಟಿ
 ದೇವಗಣದೊಂದಿಗೆ ಸಂಹರಿಸಿದ ಎಂಬುದು ಇಲ್ಲಿರುವ ಕತೆ. ವಿದ್ಯುತ್ ಕಂಬದಷ್ಟು ಎತ್ತರದ ಕಬ್ಬಿಣದ ಬಿಲ್ಲು ಮತ್ತು ದೇವರನ್ನು ಕಾರ್ಣಿಕದ ಮೈದಾನಕ್ಕೆ ಕರೆತರಲಾಗುತ್ತದೆ. ಬಿಲ್ಲಿಗೆ ಬಾಳೆಹಣ್ಣು, ತುಪ್ಪ, ಹಾಲು, ಸಕ್ಕರೆಯಿಂದ ಅಭಿಷೇಕ ಮಾಡಿರುತ್ತಾರೆ.
 ಮೈಲಾರಲಿಂಗ ಅಸುರರ ಜತೆ ಈ ಮೇದಾನದಲಿ ್ಲ ಕಾರ್ಣಿಕ ನಡೆಯುತ್ತದೆ.  ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಸ್ವಾಮೀಜಿ ಕುದುರೆಯ ಮೇಲೆ ಸವಾರಿ ಹೋಗುತ್ತಾರೆ. ಇದು ಮೈಲಾರಲಿಂಗನ ವಾಹನ ಕುದುರೆ ಎಂಬುದರ ಪ್ರತೀಕವಾಗಿದೆ. ಈ ಮೈದಾನ ಹೊಲವಾಗಿದ್ದರೂ ಜಾತ್ರೆಯ ಸಂದರ್ಭದಲ್ಲಿ ಸ್ವಚ್ಛ ಮಾಡಿಕೊಡಲಾಗುತ್ತದೆ. ಮೆರವಣಿಗೆ ಅಲ್ಲಿಗೆ ಬರುವ ವೇಳೆಗೆ ಲಕ್ಷಾಂತರ ಭಕ್ತರು ಮೈದಾನದ ಸುತ್ತಲು ಸೇರಿರುತ್ತಾರೆ. ಕಾರ್ಣಿಕದ ಗೊರವನನ್ನು ಹೊತ್ತು ತರಲಾಗುತ್ತದೆ. ಸೂಚಿ ನೆಲಕ್ಕೆ ಬಿದ್ದರು ಕೇಳಿಸುವಷ್ಟು ನಿಶ್ಯಬ್ದತೆ ಆವರಿಸುತ್ತದೆ. ಸ್ವಾಮೀಜಿಯ ಅಪ್ಪಣೆ ಪಡೆದಗೊರವ ಚಕಚಕನೆ ಬಿಲ್ಲಿನ ತುತ್ತ ತುದಿಗೆ ಏರುತ್ತಾನೆ.‘ಸದ್ದಲೇ ಸದ್ದು’ ಎಂದು ಕೂಗಿದವನೇ ಆ ವರ್ಷದ ಭವಿಷ್ಯವಾಣಿಯನ್ನು ನುಡಿದು ಕೆಳಗೆ ಬೀಳುತ್ತಾನೆ. ಕೆಳಗೆ ಇರುವ ಗೊರವರು ತಮ್ಮ ಕೈಗಳಿಂದ ಗೊರವನ್ನು ಹಿಡಿದು ದೇವಾಲಯಕ್ಕೆ ಕರೆ ತರುತ್ತಾರೆ.  ಮೈಲಾರದಂತಹ ಸಣ್ಣ ಹಳ್ಳಿ 6 ಲಕ್ಷಕ್ಕೂ ಮಿಕ್ಕು ಜನರನ್ನು ಸೇರಿಸಿಕೊಂಡಿರುತ್ತದೆ. ಅಂದಾಜಿನ ಪ್ರಕಾರ ಕೆಲವರ್ಷ 10 ಲಕ್ಷದಷ್ಟು ಜನ ಇಲ್ಲಿ ಸೇರಿದ್ದಾರೆ. ತುಂಗಾನದಿಯಲ್ಲಿ ಮಿಂದು ಮೈಲಾರನ ದರ್ಶನದಿಂದ ಪಾವನವಾಗುತ್ತಾರೆ.










No comments:

Post a Comment