Friday, January 9, 2015

ಭಕ್ತಿ ಮಂಜರಿ

ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ, ಕಳವಿಭಾಗಿ
  ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ


 ಶ್ರೀ ರಂಗನ ತೇರಿಗೆ...

 ಆಷಾಢದ  ಹುಣ್ಣಿಮೆ ಬಂತೂ
 ಬಾ ಬಾರೋ ಗೆಳೆಯ ಜಾತ್ರೆಗೆ.
 ಹೆಜ್ಜೆಯ   ಹಾಕುತ ನಡೆಯೋಣ
 ಶ್ರೀ ರಂಗನ ತೇರಿಗೆ... ಶ್ರೀ ರಂಗನ ತೇರಿಗೆ...

 ಕಳವೀಭಾಗಿಯ ಒಡೆಯ
 ಹೊಂಟವ್ನೆ ಬಾರೋ ಮರಡಿಗೆ
 ಹಿಟ್ಟು ಕಾಯಿ ದಾಸೋಹ
 ಸಾಲು ಸಾಲು ದೀವಿಗೆ

 ವರವನು ಕೇಳೋನ
 ಹರುಷದಿ ಬಾರೋ
 ಸಡಗರದಿ ನೀ ಜಾತ್ರೆಗೆ
 ಆಷಾಢದ  ಹುಣ್ಣಿಮೆ ಬಂತೂ
 ಬಾ ಬಾರೋ ಗೆಳೆಯ ಜಾತ್ರೆಗೆ.

 ಭಕ್ತಿಗೆ ಬರವಿಲ್ಲ. ಭಕ್ತರೇ ಇದಾರಲ್ಲ
 ಈ ಜೀವವೂ ನಿನಗಾಗಿ
 ಶ್ರೀ ರಂಗ ನಾ ಬಂದೆ ನಿನಗಾಗಿ
 ಬಲಗಡೆ  ಹೂ ನೀಡು ನನಗಾಗಿ

 ಎಷ್ಟೊಂದು ವೈಭವ ನಿನ್ನಲ್ಲಿ
 ಕರುಣಿಸು ದೇವ ನಮ್ಮಲ್ಲಿ
 ಕಾಣಿಕೆ ನೀಡುವೆ ಸೆರಗೊಡ್ಡಿ ಬೇಡುವೆ
 ನೀ ನೆಲೆಸು ನನ್ನ ಮನೆಯಲ್ಲಿ
 ಶ್ರೀ ರಂಗ ಕಾಪಾಡು ಜಗದಲ್ಲಿ

 ತೇರಿನ ಗೋಪುರ ಗಗನದಲ್ಲಿ
 ಭಕ್ತಿಯು ತುಂಬಿದೆ ಕಣ್ಣಿನಲಿ
 ಭಜಿಸುವ ದೇವ ಶ್ರೀರಂಗ
 ನೆನೆದಾಗ ಮಿಂಚು ಹೊಡೆದಾಂಗ

 ನಿನ್ನಯ ದ್ಯಾನಕೆ ಭಕ್ತರು ತಲೆದೂಗಿ
 ನಿಂತಾರೆ ಗುಡಿಮುಂದೆ ತಲೆಬಾಗಿ
 ಹೆಜ್ಜೆಯ ಹಾಕುತ ಬರುವೆನು
 ದರುಷನ ತೋರೋ ಶ್ರೀ ರಂಗ

 ಕಾಪಾಡು ಶ್ರೀ ರಂಗನಾಥನೇ
 ನಿನ್ನ ಅಡಿಗೆ ನನ್ನ ವಂದನೆ
 ಶ್ರೀರಂಗ ಶ್ರೀ ರಂಗ ಶ್ರೀ ರಂಗ
 ಕಳವಿಭಾಗಿಯ ಒಡೆಯ ನೀ ಶ್ರೀ ರಂಗ
                                                    - ಮಾಲತೇಶ್ ಅರಸ್ ಹರ್ತಿಮಠ

No comments:

Post a Comment